ಮಗುವಿಗೆ ಹೊಡೀಬೇಡ ಎಂದಿದ್ದಕ್ಕೆ ತಾಯಿ ಆತ್ಮಹತ್ಯೆ..!

By Suvarna News  |  First Published Jan 15, 2020, 8:41 AM IST

ಮಗುವಿಗೆ ಹೊಡೆಯಬೇಡ ಎಂದಿದ್ದಕ್ಕೇ ಮನನೊಂದು ತಾಯಿ ಆತ್ಮಹತ್ಯೆ ಮಾಡಿಒಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ಪತ್ನಿ ಮಗುವಿಗೆ ಹೊಡೆಯುವಾಗ ತಡೆದ ಪತಿ ಹೊಡೆಯದಂತೆ ಬುದ್ಧಿ ಹೇಳಿದ್ದ.


ಮೈಸೂರು(ಜ.15): ಮಗುವಿಗೆ ಹೊಡೆಯಬೇಡ ಎಂದಿದ್ದಕ್ಕೇ ಮನನೊಂದು ತಾಯಿ ಆತ್ಮಹತ್ಯೆ ಮಾಡಿಒಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ಪತ್ನಿ ಮಗುವಿಗೆ ಹೊಡೆಯುವಾಗ ತಡೆದ ಪತಿ ಹೊಡೆಯದಂತೆ ಬುದ್ಧಿ ಹೇಳಿದ್ದ.

ಮಗುವಿಗೆ ಹೊಡೀಬೇಡ ಎಂದು ಬುದ್ದಿವಾದ ಹೇಳಿದ ಪತಿ ಮಾತಿಗೆ ನೊಂದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೈಸೂರಿನ ಶ್ರೀರಾಂಪುರ ಎರಡನೇ ಹಂತದಲ್ಲಿ ಘಟನೆ ನಡೆದಿದ್ದು, ವಿನುತಾ ಶೆಟ್ಟಿ(35) ಮೃತ ದುರ್ದೈವಿ.

Tap to resize

Latest Videos

ಮಡಿಕೇರಿ: ಲೈಸೆನ್ಸ್‌ ಬೇಕಂದ್ರೆ 'ಇಂತಿಷ್ಟು' ಕೊಡಲೇ ಬೇಕು..! RTO ಕಚೇರಿಯಲ್ಲಿ ಲಂಚಬಾಕತನ

11 ವರ್ಷಗಳ ಹಿಂದೆ ನಾಗರಾಜ್ ಹಾಗೂ ವಿನುತಾ ಅವರು ವಿವಾಹವಾಗಿದ್ದರು. ದಂಪತಿ ಮೂಲತಃ ಕುಂದಾಪುರದವರಾಗಿದ್ದಾರೆ. ಭ್ರಮರಾಂಭ ಕಲ್ಯಾಣ ಮಂಟಪದ ಬಳಿ ಜ್ಯೂಸ್ ಅಂಗಡಿ ಇಟ್ಟಿದ್ದ ನಾಗರಾಜ್ ಮಗುವಿಗೆ ಪತ್ನಿ ಹೊಡೆದಾಗ ಬುದ್ದಿವಾದ ಹೇಳಿದ್ದ. ನಾಗರಾಜ್ ಉತ್ತನಹಳ್ಳಿ ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ವಿನುತಾ ಶೆಟ್ಟಿ ನೇಣಿಗೆ ಶರಣಾಗಿದ್ದಾರೆ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೈಸೂರು: ಸಂಕ್ರಾಂತಿ ಹಬ್ಬಕ್ಕೆ ಖರೀದಿ ಭರಾಟೆ..!

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

click me!