17 ಹೊಸ ಪಾಸಿಟಿವ್‌ ಕೇಸ್‌: ದಾವಣಗೆರೆಯಲ್ಲಿ 47ಕ್ಕೇರಿದ ಸೋಂಕಿತರ ಸಂಖ್ಯೆ

By Kannadaprabha News  |  First Published Jun 8, 2020, 12:11 PM IST

ದಾವಣಗೆರೆಯಲ್ಲಿ ಭಾನುವಾರ(ಜೂ.07)ರಂದು ಹೊಸದಾಗಿ 17 ಕೊರೋನಾ ಕೇಸ್‌ಗಳು ಪತ್ತೆಯಾಗಿವೆ. ಇದರೊಂದಿಗೆ ಮತ್ತೆ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 47ಕ್ಕೇರಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ದಾವಣಗೆರೆ: ದಾವಣಗೆರೆಯಲ್ಲಿ 17 ಪಾಸಿಟಿವ್‌ ಕೇಸ್‌ಗಳೊಂದಿಗೆ ಭಾನುವಾರ ಮಹಾಮಾರಿ ಕೊರೋನಾ ಅಟ್ಟಹಾಸ ಮೆರೆದಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ 47ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಕೊರೋನಾ ಸೋಂಕು ಇದೀಗ ದ್ವಿಶತಕವನ್ನು ದಾಟಿದೆ. 203 ಪಾಸಿಟಿವ್‌ ಪ್ರಕರಣ ವರದಿಯಾಗಿವೆ. ಇದರಲ್ಲಿ 6 ಜನರು ಸಾವನ್ನಪ್ಪಿದ್ದು, ಸೋಂಕಿನಿಂದ ಗುಣಮುಖರಾದ 150 ಜನರು ಈವರೆಗೆ ಬಿಡುಗಡೆಯಾಗಿದ್ದು, ಸದ್ಯಕ್ಕೆ 47 ಸಕ್ರಿಯ ಕೇಸ್‌ಗಳ ರೋಗಿಗಳು ಜಿಲ್ಲಾ ಕೋವಿಡ್‌-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Tap to resize

Latest Videos

ನಗರದ ಕಂಟೈನ್‌ಮೆಂಟ್‌ ವಾಸಿ 71 ವರ್ಷದ ವೃದ್ಧೆ (ಪಿ-5299)ಗೆ ಅದೇ ಏರಿಯಾದ ಸಂಪರ್ಕದಿಂದ ಸೋಂಕು ತಗುಲಿದೆ. 50 ವರ್ಷದ ಮಹಿಳೆ (5300)ಗೆ ಸೋಂಕು ತಗುಲಿದ ಬಗ್ಗೆ ಸಂಪರ್ಕ ಪತ್ತೆ ಸಾಗಿದೆ. 23 ವರ್ಷದ ಮಹಿಳೆ (5301), 20 ವರ್ಷದ ಮಹಿಳೆ (5302), 46 ವರ್ಷದ ಮಹಿಳೆ (5303), 45 ವರ್ಷದ ಪುರುಷ (5303), 42 ವರ್ಷದ ಮಹಿಳೆ (5305) ಈ ಎಲ್ಲರೂ ಮೃತ ವೃದ್ಧೆ (ಪಿ-4093) ಸಂಪರ್ಕದಿಂದ ಸೋಂಕಿತರಾಗಿದ್ದಾರೆ.

ಆನ್‌ಲೈನ್‌ ಕ್ಲಾಸ್‌ನಿಂದ ಮಕ್ಕಳು ಶಾಲೆ ತೊರೆವ ಭೀತಿ!

ಇಲ್ಲಿನ 46 ವರ್ಷದ ಮಹಿಳೆ (5306), 24 ವರ್ಷದ ಮಹಿಳೆ (5307)ಯು ಪಿ-1247ರ ಸಂಪರ್ಕಿತರು. 9 ವರ್ಷದ ಬಾಲಕ (5308)ನು ಪಿ-3637ರ ಸಂಪರ್ಕದಿಂದ ಸೋಂಕಿತನಾಗಿದ್ದಾನೆ. 42 ವರ್ಷದ ಪುರುಷ (5309), 31 ವರ್ಷದ ಮಹಿಳೆ (5310) ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. 36 ವರ್ಷದ ಮಹಿಳೆ (5311) ಜಿಲ್ಲೆಯ ಕಂಟೈನ್‌ಮೆಂಟ್‌ ಝೋನ್‌ ಸಂಪರ್ಕದಿಂದ ಸೋಂಕು ಬಂದಿದೆ.

42 ವರ್ಷದ ಮಹಿಳೆ (5312), 48 ವರ್ಷದ ಮಹಿಳೆ (5313)ಗೆ ಸೋಂಕಿನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. 53 ವರ್ಷದ ಮಹಿಳೆ (5314)ಗೆ ಪಿ-4839ರ ಸಂಪರ್ಕದಿಂದ ಸೋಂಕು ಬಂದಿದೆ. 44 ವರ್ಷದ ಪುರುಷ (5315)ಗೆ ಪಿ-1247ರ ಸಂಪರ್ಕಿತನಾಗಿದ್ದಾರೆ.
 

click me!