ಇನ್ನಿಬ್ಬರಲ್ಲಿ ಕೊರೋನಾ ಸೋಂಕು ಪತ್ತೆ; ಶತಕದತ್ತ ಶಿವಮೊಗ್ಗ

By Kannadaprabha News  |  First Published Jun 15, 2020, 9:19 AM IST

ಶಿವಮೊಗ್ಗದಲ್ಲಿ ಭಾನುವಾರ ಹೊಸದಾಗಿ ಇಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಶತಕದ ಸಮೀಪ ಬಂದು ನಿಂತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಶಿವಮೊಗ್ಗ(ಜೂ.15): ಜಿಲ್ಲೆಯಲ್ಲಿ ಭಾನುವಾರ ಇಬ್ಬರಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದರೊಂದಿಗೆ ಕೊರೋನಾ ಬಾಧಿತರ ಸಂಖ್ಯೆ ಶತಕದತ್ತ ದಾಪುಗಾಲು ಹಾಕಿದೆ. ಭಾನುವಾರ ಪತ್ತೆ ಆಗಿರುವ ಎರಡು ಪ್ರಕರಣಗಳಲ್ಲಿ ಒಬ್ಬರು ಅಂತಾರಾಜ್ಯದ ಹಾಗೂ ಇನ್ನೊಬ್ಬರು ಅಂತರ ಜಿಲ್ಲಾ ಟ್ರಾವೆಲ್‌ ಹಿಸ್ಟರಿ ಹೊಂದಿದ್ದಾರೆ.

ಪಿ-6858 (25 ವರ್ಷದ ಪುರುಷ ) ದೆಹಲಿಯಿಂದ ಹಾಗೂ ಪಿ-6859 (26 ವರ್ಷದ ಮಹಿಳೆ) ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹಿಂದಿರುಗಿದವರಾಗಿದ್ದಾರೆ. ಸೋಂಕಿತರಿಬ್ಬರಿಗೂ ಕೋವಿಡ್‌-19 ನಿಗದಿತ ಆಸ್ಪತ್ರೆ ಮೆಗ್ಗಾನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಈವರೆಗೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆಯಾಗಿದೆ. ಇದುವರೆಗೂ 44 ಮಂದಿ ಗುಣಮುಖರಾಗಿದ್ದಾರೆ. ಇಂದಿನ 2 ಪ್ರಕರಣ ಸೇರಿದಂತೆ 47 ಜನರಿಗೆ ಚಿಕಿತ್ಸೆ ಮುಂದುವರಿದಿದೆ.

Tap to resize

Latest Videos

ಕೊರೋನಾ ಸಂಡೇ ಶಾಕ್: ದೇಶದಲ್ಲಿ 408 ಮಂದಿ ಸಾವು, 14178 ಹೊಸ ಕೇಸು!

ಜಿಲ್ಲೆಯಲ್ಲಿ ಕಳೆದ 8 ದಿನಗಳಲ್ಲಿ 38 ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆಯಾಗಿದೆ. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿವಮೊಗ್ಗ ನಗರ ಮತ್ತು ತೀರ್ಥಹಳ್ಳಿ ತಾಲೂಕಿನ ಮಾಗರವಳ್ಳಿ ಗ್ರಾಮವನ್ನು ಸೀಲ್ಡ್‌ಡೌನ್‌ ಮಾಡಲಾಗಿದೆ.

ಮಾಗರವಳ್ಳಿ ಪ್ರದೇಶ ಸೀಲ್‌ಡೌನ್‌

ತೀರ್ಥಹಳ್ಳಿ: ಬೆಂಗಳೂರಿನಿಂದ ಜೂನ್‌ 11ರಂದು ತೀರ್ಥಹಳ್ಳಿಗೆ ಬಂದಿದ್ದ ಉಂಟೂರುಕಟ್ಟೆ ಕೈಮರ ಸಮೀಪದ ಮಾಗರವಳ್ಳಿ ಹಳ್ಳಿ ಯುವತಿ ಮರುದಿನ ಸರ್ಕಾರಿ ಆಸ್ಪತ್ರೆಗೆ ಭೇಟಿಮಾಡಿ ಪರೀಕ್ಷೆ ಮಾಡಿಸಿಕೊಂಡಿದ್ದಳು. ಜೂ. 14ರ ಬೆಳಗ್ಗೆ ಬಂದಿರುವ ವರದಿಯಲ್ಲಿ ಈಕೆಗೆ ಕೊರೋನಾ ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯುವತಿ ಮನೆ ಇರವ ಮಾಗರವಳ್ಳಿ ಪ್ರದೇಶ ಸೀಲ್‌ಡೌನ್‌ ಮಾಡಲಾಗಿದೆ. ಹೊಸಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈ ಪ್ರದೇಶದ 6 ಮನೆಗಳನ್ನು ಕಂಟೈನ್‌ಮೆಂಟ್‌ ಝೋನ್‌ ಎಂದು ಗುರುತಿಸಲಾಗಿದ್ದು, ಸುತ್ತ 3 ಹಳ್ಳಿಗಳನ್ನು ಬಫರ್‌ ಝೋನ್‌ ಎಂದು ಗುರುತಿಸಲಾಗಿದೆ. ತಾಲೂಕಿನಲ್ಲಿ ಮೊದಲ ಪ್ರಕರಣ ವರದಿಯಾದ ಹಳ್ಳಿಬೈಲು ಕೂಡ ಈ ಗ್ರಾಮ ಪಂಚಾಯ್ತಿಗೆ ಸಮೀಪದಲ್ಲೇ ಇರುವುದು ಆತಂಕಕ್ಕೆ ಕಾರಣವಾಗಿದೆ.

click me!