ಕೋಲಾರದ ಐಫೋನ್ ಘಟಕ ಪುನರಾರಂಭ, ನಿರುದ್ಯೋಗಿಗಳ ನೂಕುನುಗ್ಗಲು

By Kannadaprabha NewsFirst Published Jan 18, 2021, 2:11 PM IST
Highlights

ಕೋಲಾರದಲ್ಲಿ ಗಲಭೆಯಿಂದ ಮುಚ್ಚಲ್ಪಟ್ಟಿದ್ದ ಐ ಫೋನ್ ಬಿಡಿಭಾಗಗಳ ಕಂಪನಿ ಇದೀಗ ಮತ್ತೆ ಆರಂಭವಾಗಿದೆ. ಉದ್ಯೋಗ ಪಡೆಯಲು ನಿರುದ್ಯೋಗಿಗಳ ನೂಕುನುಗ್ಗಲು ಉಂಟಾಗಿದೆ.

ಕೋಲಾರ (ಜ.18): ಗಲಭೆ ನಡೆದು ಮುಚ್ಚಲ್ಪಟ್ಟಿದ್ದ ಕೋಲಾರದ  ವಿಸ್ಟ್ರಾನ್ ಕಂಪನಿ ಇದೀಗ ಮತ್ತೆ ಪುನರಾರಂಭವಾಗಿದೆ. ಐಪೋನ್ ಬಿಡಿಭಾಗಗಳ ತಯಾರಿಕಾ ವಿಸ್ಟ್ರಾ ನ್ ಕಂಪನಿ ಮತ್ತೆ ಕಾರ್ಯಾರಂಭ ಮಾಡಿದೆ. 

ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಯುವಕ ಯವತಿಯರು ನೂಕು ನುಗ್ಗಲು ನಡೆಸಿದ್ದು, ನೇಮಕಾತಿಗೆ ಪೊಲೀಸರ ನಿರಪೇಕ್ಷಣಾ ಪತ್ರ ಅಗತ್ಯವೆಂದು ಸೂಚನೆ ನೀಡಲಾಗಿದೆ. 

 ನಿರಪೇಕ್ಷಣಾ ಪತ್ರ ತೆಗೆದುಕೊಳ್ಳಲು ಕೋಲಾರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇರದ್ದು, ಪ್ರತಿಯೊಬ್ಬರು ಆಧಾರ್, ಪಾನ್ ಕಾರ್ಡ್, ಹಾಗು ಹಿನ್ನೆಲೆಯ ಬಗ್ಗೆ ವಿಚಾರಿಸಿ  ನಂತರವಷ್ಟೆ ನಿರಪೇಕ್ಷಣಾ ಪತ್ರ ವಿತರಣೆ ಮಾಡಲಾಗುತ್ತಿದೆ. 

ತಪ್ಪಾಗಿರುವುದು ನಿಜ: ನೌಕರರ ಕ್ಷಮೆ ಯಾಚಿಸಿದ ಆ್ಯಪಲ್‌ ಐಫೋನ್‌ ಘಟಕ

ಗ್ರಾಮಾಂತರ ಠಾಣೆಯ ಪಿಎಸೈ ಕಿರಣ್ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಬಳಿಕ ನಿರಪೇಕ್ಷಣ ಪತ್ರ ನೀಡುತ್ತಿದ್ದಾರೆ. 

 ಕಳೆದ ವರ್ಷ ಡಿಸೆಂಬರ್ ನಲ್ಲಿ ಕಾರ್ಮಿಕರಿಂದ ವಿಸ್ಟ್ರಾನ್ ಕಂಪನಿಯಲ್ಲಿ ಗಲಾಟೆ ನಡೆದಿತ್ತು.  ರಾಷ್ಟ್ರ ವ್ಯಾಪಿ ಈ ಗಲಾಟೆ  ಸುದ್ದಿ ಮಾಡಿತ್ತು. ಈ ನಿಟ್ಟಿನಲ್ಲಿ ಇದೀಗ ಮತ್ತೆ ಆರಂಭವಾದ ಕಂಪನಿಯಲ್ಲಿ ನೇಮಕಾತಿಗೆ ಹಲವು ರೀತಿಯ ನಿಯಮಗಳನ್ನು ವಿಧಿಸಲಾಗಿದೆ. 

click me!