ಕೇರಳ ಯುವಕನ ಕರೆಸಿಕೊಂಡು ಮಂಗಳೂರು ಸುಂದರಿಯರ ಖತರ್ನಾಕ್ ಕೆಲಸ : ಎಚ್ಚರ!

Kannadaprabha News   | Asianet News
Published : Jan 18, 2021, 01:32 PM ISTUpdated : Jan 18, 2021, 02:00 PM IST
ಕೇರಳ ಯುವಕನ ಕರೆಸಿಕೊಂಡು ಮಂಗಳೂರು ಸುಂದರಿಯರ ಖತರ್ನಾಕ್ ಕೆಲಸ : ಎಚ್ಚರ!

ಸಾರಾಂಶ

ಮಂಗಳೂರು ಸುಂದರಿಯರು ಸೇರಿ ಕೇರಳ ಯುವಕನನ್ನು ಕರೆಸಿಕೊಂಡು ಮಾಡಿದ ಖತರ್ನಾಕ್ ಕೆಲಸವಿದು. ಇದೀಗ ಇವರೆಲ್ಲಾ ಪೊಲೀಸರ ಅತಿಥಿಗಳಾಗಿದ್ದಾರೆ. 

ಮಂಗಳೂರು (ಜ.18):  ಕೇರಳ ಮೂಲದ ಯುವಕನಿಗೆ ಮಂಗಳೂರಿನ ಯುವತಿಯರು ಹನಿಟ್ರ್ಯಾಪ್ ಮಾಡಿದ್ದು ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.  

ಆರೋಪಿಗಳಾದ ರೇಷ್ಮಾ ಅಲಿಯಾಸ್ ನೀಮಾ, ಮಹಮ್ಮದ್ ಇಕ್ಬಾಲ್, ಜೀನತ್ ಮತ್ತು ಅಬ್ದುಲ್ ಖಾದರ್ ನಾಜೀಪ್ ಬಂಧಿಸಲಾಗಿದೆ. ಫೇಸ್ ಬುಕ್ ಮೂಲಕ ಕೇರಳದ ಯುವಕನ ಜೊತೆ ಸಂಪರ್ಕ ಮಾಡಿದ್ದು, ಬಳಿಕ ಮಂಗಳೂರಿನ ಸುರತ್ಕಲ್ ಗೆ ಕರೆಸಿ ಹನಿಟ್ರ್ಯಾಪ್ ಮಾಡಲಾಗಿದೆ. 

ಜ.16ರಂದು ಕುಂಬಳೆಯ ಯುವಕನನ್ನು ಸುರತ್ಕಲ್ ಗೆ ಕರೆಸಿಕೊಂಡಿದ್ದರು.  ಐದು ಲಕ್ಷ ಹಣಕ್ಕಾಗಿ ಬೇಡಿಕೆಯಿಟ್ಟು ಯುವಕನ ಬ್ಲ್ಯಾಕ್ ಮೇಲ್ ಮಾಡಿದ್ದಾರೆ.   ಇಕ್ಬಾಲ್ ಮತ್ತು ನಾಜೀಪ್ ಸೇರಿ ಯುವಕನ ಮೇಲೆ ಹಲ್ಲೆ ಮಾಡಿದ್ದು,  ಸುರತ್ಕಲ್ ಸಮೀಪದ ಕೃಷ್ಣಾಪುರದ ಮನೆಯಲ್ಲಿ ಹನಿಟ್ರ್ಯಾಪ್ ಮಾಡಲಾಗಿದೆ. 

ಬಾರ್ ಕ್ಯಾಶಿಯರ್ ಮೇಲೆ ಮಿಡ್‌ನೈಟ್ ಡೆಡ್ಲಿ ಅಟ್ಯಾಕ್, 2.5 ಲಕ್ಷ ರೂ ದರೋಡೆ..! ...

ಈ ಪ್ರಕರಣಕ್ಕೂ ಮುನ್ನ ಆರು ಮಂದಿಗೆ ಹನಿಟ್ರ್ಯಾಪ್ ಮಾಡಿರುವ ಬಗ್ಗೆ ಮಾಹಿತಿ ಇದ್ದು, ಇದೀಗ ಸುರತ್ಕಲ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.  ರೇಶ್ಮಾ ಬೀಡಿ ಕಟ್ಟುವ ವೃತ್ತಿ ಮಾಡುತ್ತಿದ್ದು, ಜೀನತ್ ಇನ್ಸೂರೆನ್ಸ್‌ ಹಾಗೂ ಇಕ್ಬಾಲ್ ಮತ್ತು ನಾಜೀಪ್ ಚಾಲಕ ವೃತ್ತಿ ಮಾಡುತ್ತಿದ್ದಾರೆ. 

ಕಳೆದ ಹಲವು ವರ್ಷಗಳಿಂದ ಹನಿಟ್ರ್ಯಾಪ್ ನಡೆಸಿರುವ ಬಗ್ಗೆ ಅನುಮಾನವಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. 

PREV
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ