ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆದಿರುವುದೇ ದೊಡ್ಡ ಗೆಲುವು ಎಂದು ಡಿಸಿಎಂ ಡಾ. ಸಿಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಖಾತೆ ತೆರೆಯಲಾಗದು ಎಂಬ ಮಾತನ್ನು ಬಿಜೆಪಿ ಸರ್ಕಾರ ಅಳಿಸಿ ಹಾಕಿದ್ದಾರೆ ಎಂದಿದ್ದಾರೆ.
ಬೆಂಗಳೂರು(ಡಿ.09): ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಖಾತೆ ತೆರೆಯಲಾಗದು ಎಂಬ ಮಾತು ಇತ್ತು. ಅದನ್ನು ನಮ್ಮ ಸರ್ಕಾರ ಅಳಿಸಿ ಹಾಕಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಮಂಡ್ಯಕ್ಕೆ ಒಬ್ಬ ಪ್ರತಿನಿಧಿ ಸಿಕ್ಕಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ ಗೆಲುವಿನ ಸಂಭ್ರಮ ಹಂಚಿಕೊಂಡಿದ್ದಾರೆ.
ಉಪ ಚುನಾವಣೆಯಲ್ಲಿ ಜಯ ಸಾಧಿಸಿರುವ ಪಕ್ಷದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೆ. ಆರ್. ಪೇಟೆ ಜನರ ಆಶೀರ್ವಾದಿಂದ ನಾರಾಯಣಗೌಡರು ಈ ಅಗ್ನಿ ಪರೀಕ್ಷೆ ಗೆದ್ದು ಬಂದಿದ್ದಾರೆ. ಮಂಡ್ಯ ಎಲ್ಲ ರೀತಿಯಲ್ಲಿ ಅಭಿವೃದ್ಧಿ ಆಗಬೇಕು. ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ ವಿಷಯವಾಗಬೇಕು ಎಂದು ಹೇಳಿದ್ದಾರೆ.
undefined
ಬಿಜೆಪಿ ಬರುತ್ತೆ, ನಾವು ಸಾಯ್ತೇವೆ ಎಂದ ಹಿರಿಯ ಕೈ ಮುಖಂಡ
ಕೆ. ಆರ್. ಪೇಟೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ನಾರಾಯಣಗೌಡರು ಅಂದು ಕೈಗೊಂಡ ದಿಟ್ಟ ನಿರ್ಣಯ ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಕೆ. ಆರ್. ಪೇಟೆಯಲ್ಲಿ ಇಂಥ ನಿರ್ಣಯ ಕೈಗೊಳ್ಳುವುದು ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಹಲವರು ಹೇಳಿದ್ದರು. ಆದರೆ, ಇಂಥ ಮಾತುಗಳಿಗೆ ಕಿವಿಗೊಡದೇ ದಿಟ್ಟ ನಿರ್ಧಾರ ಕೈಗೊಂಡರು. ನಮ್ಮ ಪಕ್ಷ, ನಮ್ಮ ಸರ್ಕಾರ ಅವರಿಗೆ ಸಂಪೂರ್ಣ ಬೆಂಬಲ ಕೊಟ್ಟು, ಗೆಲುವಿಗೆ ಸಹಕರಿಸಿತ ಎಂದಿದ್ದಾರೆ.
RSSನವರು ಬಂದು ಹಣ ಹಂಚಿದ್ದಾರೆ, ಸೋಲು ನೋವು ತಂದಿದೆ ಎಂದ JDS ಅಭ್ಯರ್ಥಿ
ನಮ್ಮ ಮುಖ್ಯಮಂತ್ರಿ ಕೆ. ಆರ್. ಪೇಟೆ ಕ್ಷೇತ್ರಕ್ಕೆ ಸೇರಿದವರು. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸತ್ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಜನ ಅವರ ಕೈಹಿಡಿದು ಬೆಂಬಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಹೆಮ್ಮೆಯ ಮಗ ಬಿ.ಎಸ್. ಯಡಿಯೂರಪ್ಪ ಅವರಿಗೆ ಜನ ಇನ್ನೂ ಹೆಚ್ಚಿನ ಮಾನ್ಯತೆ, ಗೌರವ ತಂದುಕೊಟ್ಟಿದ್ದಾರೆ. ಕೆಆರ್ ಪೇಟೆಯಲ್ಲಿ ಯುವ ನಾಯಕ ವಿಜಯೇಂದ್ರ, ಪ್ರೀತಂ ಗೌಡ, ಶಂಕರಗೌಡ ಪಾಟೀಲರು ಹಾಗೂ ಪಕ್ಷದ ಎಲ್ಲ ಕಾರ್ಯಕರ್ತರು ಗೆಲುವಿಗೆ ಶ್ರಮಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಅಲ್ಲಿ ಸ್ಥಾನ ಕೊಟ್ಟ ಜನರಿಗೆ ಧನ್ಯವಾದ ಎಂದು ಹೇಳಿದ್ದಾರೆ.
ಈಗ ಬಿಜೆಪಿಯಲ್ಲೇ ಶುರುವಾಗಿದೆ ಭಾರೀ ಪೈಪೋಟಿ