ಜೆಡಿಎಸ್‌ ಟಿಕೆಟ್‌ಗೆ ಕೊನೆಯವರೆಗೂ ಕಾಯುತ್ತೇನೆ : ತಗ್ಗಹಳ್ಳಿ ವೆಂಕಟೇಶ್‌

By Kannadaprabha NewsFirst Published Feb 13, 2023, 5:49 AM IST
Highlights

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ಗಾಗಿ ಕೊನೆಯವರೆಗೂ ಕಾಯುತ್ತೇನೆ. ಒಂದು ವೇಳೆ ಟಿಕೆಟ್‌ ಸಿಗದಿದ್ದರೆ ಸ್ಪರ್ಧೆ ಖಚಿತ ಎಂದು ಟಿಕೆಟ್‌ ಆಕಾಂಕ್ಷಿ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌ ಹೇಳಿದರು.

  ಮಂಡ್ಯ :  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ಗಾಗಿ ಕೊನೆಯವರೆಗೂ ಕಾಯುತ್ತೇನೆ. ಒಂದು ವೇಳೆ ಟಿಕೆಟ್‌ ಸಿಗದಿದ್ದರೆ ಸ್ಪರ್ಧೆ ಖಚಿತ ಎಂದು ಟಿಕೆಟ್‌ ಆಕಾಂಕ್ಷಿ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌ ಹೇಳಿದರು.

ತಾಲೂಕಿನ ಸಂತೆಕಸಲಗೆರೆ ಭೂಮಿಸಿದ್ದೇಶ್ವರ ದೇವಸ್ಥಾನದ ಬಳಿ ಕೊತ್ತತ್ತಿ ಹೋಬಳಿ ಜೆಡಿಎಸ್‌ ನಿಷ್ಠಾವಂತರು, ಕಾರ್ಯಕರ್ತರು, ಹಿತೈಷಿಗಳು ಹಾಗೂ ಅಭಿಮಾನಿಗಳ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಭೆಯಲ್ಲಿ ಮಾತನಾಡಿದ ವೆಂಕಟೇಶ್‌, ಕಳೆದ 35 ವರ್ಷಗಳಿಂದ ಪಕ್ಷಕ್ಕೆ ನಿಷ್ಠನಾಗಿ, ಪಕ್ಷ ಸಂಘಟನೆಗೆ ದುಡಿದೆ. ಚುನಾವಣೆಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದೆ. ಆದರೆ, ನನ್ನನ್ನು ಪಕ್ಷ, ಕ್ಷೇತ್ರದ ಶಾಸಕರು ನಿರ್ಲಕ್ಷ್ಯ ಮಾಡುತ್ತಾ ಬಂದರು ಎಂದು ದೂರಿದರು.

Latest Videos

ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಆಶೀರ್ವಾದಿಂದ ಜಿಪಂ, ತಾಪಂ, ಗ್ರಾಪಂ ಸೇರಿ 6 ಚುನಾವಣೆಗಳಲ್ಲಿ ಗೆದ್ದು ಜನಸೇವೆ ಮಾಡಿದ್ದೇನೆ. ನನಗೆ ರಾಜಕೀಯ ಹಿನ್ನೆಲೆ ಇಲ್ಲ. ಕ್ಷೇತ್ರದ ಜನರು, ನಿಷ್ಠಾವಂತ ಜೆಡಿಎಸ್‌ ಕಾರ್ಯಕರ್ತರು ನನಗೆ ಬೆಂಬಲವಾಗಿ ನಿಂತರು ಎಂದರು.

ಹಲವಾರು ಬಾರಿ ಜೆಡಿಎಸ್‌ ನಾಯಕರಲ್ಲಿ ಮನವಿ ಮಾಡಿ ಪಕ್ಷ ಸೇವೆಗೆ, ಸಂಘಟನೆ ಸೂಕ್ತ ಅವಕಾಶ ಕೋರಿದ್ದೆ. ಅಲ್ಲದೇ, 2 ಬಾರಿ ವಿಧಾನ ಪರಿಷತ್‌ ಚುನಾವಣೆಗಳಲ್ಲಿ ಅವಕಾಶದಿಂದ ವಂಚಿತನಾದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕೊನೆ ಕ್ಷಣದವರೆಗೂ ಟಿಕೆಟ್‌ಗಾಗಿ ಹೋರಾಟ ಮಾಡಿದೆ. ಆದರೆ, ನಾಯಕರು ಶಮದಾನ ಮಾಡಿ ಪಕ್ಷ ನಿಷ್ಠೆ ಇಲ್ಲದವರಿಗೆ ಟಿಕೆಟ್‌ ನೀಡಿದರು ಎಂದರು.

2018ರ ಚುನಾವಣೆ ನಂತರ ಜೆಡಿಎಸ್‌ ಸರ್ಕಾರ ಬಂದಾಗ ಎಂಎಲ್ಸಿ ಅಥವಾ ನಿಗಮ ಮಂಡಳಿ ಸ್ಥಾನಗಳಿಗೆ ನೇಮಕದ ಭರವಸೆ ನೀಡಿದ್ದರು. ಆದರೆ, ದೊರೆಯಲಿಲ್ಲ. ಜೆಡಿಎಸ್‌ ಜಿಲ್ಲಾಧ್ಯಕ್ಷ ಸ್ಥಾನ ಕೇಳಿದೆ. ಆದರೆ, ನೆಪಮಾತ್ರಕ್ಕೆ ಪಕ್ಷದ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಿದರು. ಜಿಲ್ಲಾಧ್ಯಕ್ಷರು ಸರಿಯಾದ ರೀತಿಯಲ್ಲಿ ನನ್ನನ್ನು ಬಳಕೆ ಮಾಡದೇ ಅವಮಾನ ಮಾಡಿ ನಿರ್ಲಕ್ಷ್ಯ ಮಾಡಿದರು. ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಒಂದುಕಾಲು ವರ್ಷವಾದರೂ ವರಿಷ್ಠರು ಸಮಸ್ಯೆಗೆ ಪರಿಹಾರ ಸೂಚಿಸಲಿಲ್ಲ ಎಂದು ನೋವು ತೋಡಿಕೊಂಡರು.

ಇಂದಿನ ಸಭೆಗೆ ಜೆಡಿಎಸ್‌ ಮೂಲ ಕಾರ್ಯಕರ್ತರು ಬರದಂತೆ ಶಾಸಕರ ಕಡೆಯವರು ದಿಕ್ಕ ತಪ್ಪಿಸುವ ಕೆಲಸ ಮಾಡಿದ್ದಾರೆ. ಶಾಸಕರ ಮನೆಗೆ ಹೋಗಿ ಪಕ್ಷದ ಟಿಕೆಟ್‌ ನೀಡಿದರೂ ನಿಷ್ಠವಂತರಾಗಿಲ್ಲ. ನಮ್ಮ ಮೇಲೆ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ನನಗೆ ರಾಜಕೀಯವಾಗಿ ಯಾರು ಗಾರ್ಡ್‌ಪಾದರ್‌ ಇಲ್ಲ. ಜನರೇ ಗಾರ್ಡ್‌ಪಾದರ್‌. ಜನರಿಂದಲೇ ಇಷ್ಟುಎತ್ತರಕ್ಕೆ ಬೆಳೆದಿದ್ದೇನೆ. ನನ್ನ ಮೇಲೆ ಇಟ್ಟಿರುವ ಅಭಿಮಾನದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಸಭೆಗೆ ಬಂದಿದ್ದಾರೆ. ಈ ವೆಂಕಟೇಶ್‌ ಬಳಿ ಹಣ ಇಲ್ಲ. ಆದರೆ, ಸಾವಿರಾರು ಜನರ ಪ್ರೀತಿ ಸಂಪಾದಿಸಿದ್ದಾನೆ. ಅದೇ ನನ್ನ ಜನ್ಮದ ಪುಣ್ಯ ಎಂದು ಕಣ್ಣೀರು ಹಾಕಿದರು.

ಕಳೆದ ಕೆಲ ದಿನಗಳ ಹಿಂದೆ ಆರತಿ ಉಕ್ಕಡದಲ್ಲಿ ನಡೆದ ನಿಷ್ಟಾವಂತರ ಸಭೆಯಲ್ಲಿ ಜನರೇ ಖರ್ಚು ಮಾಡಿ ಸಭೆ ಆಯೋಜಿಸಿದ್ದರು. ಇಂದಿನ ಸಭೆಗೂ ಕೂಡ ಜನರೇ ಖರ್ಚುವೆಚ್ಚ ಭರಿಸಿದ್ದಾರೆ. ಕಲುಷಿತಗೊಂಡಿರುವ ರಾಜಕೀಯ ವ್ಯವಸ್ಥೆಯ ನಡುವೆ ನನ್ನ ಮೇಲೆ ಅಭಿಮಾನಿಗಳು, ಜನರು ಇಟ್ಟಿರುವ ಪ್ರೀತಿಗೆ ಚಿರಋುಣಿಯಾಗಿರುತ್ತೇನೆ ಎಂದರು.

ಇದೇ ವೇಳೆ ರೈತ ಮುಖಂಡರಾದ ಮಧುಚಂದನ್‌ ಮಾತನಾಡಿ, ವೆಂಕಟೇಶ್‌ ಚುನಾವಣೆಯಲ್ಲಿ ಸ್ಪರ್ಧಿಸಿದರೆ ವೈಯಕ್ತಿಕವಾಗಿ 1 ಲಕ್ಷ ರು. ನೀಡುವುದಾಗಿ ಘೋಷಿಸಿದರು. ಮಂಗಲ ಗ್ರಾಪಂ ಅಧ್ಯಕ್ಷೆ ಲಕ್ಷಿ ್ಮತನ್ನ ಸೆರಗೊಡ್ಡಿ ತಗ್ಗಹಳ್ಳಿ ವೆಂಕಟೇಶ್‌ ಅವರನ್ನು ಬೆಂಬಲಿಸುವಂತೆ ಕೋರಿದರು.

ಸಭೆಯಲ್ಲಿ ರೈತ ಮುಖಂಡ ಅರಕೆರೆ ಪ್ರಸನ್ನಗೌಡ, ತಗ್ಗಹಳ್ಳಿ ಪ್ರಸನ್ನ, ಕನ್ನಡ ಸೇನೆ ಮಂಜುನಾಥ್‌, ಮುಖಂಡರಾದ ದೊಡ್ಡಪಾಳ್ಯ ಲೋಕೇಶ್‌, ಶ್ರೀರಂಗಪಟ್ಟಣ ಸತೀಶ್‌, ಬಾಬುರಾಯನಕೊಪ್ಪಲು ವಿಜಯ್‌, ಅರಕೆರೆ ಸಿದ್ದರಾಜು, ಸುನೀಲ್‌, ನೇರಲಕೆರೆ ನಿಂಗರಾಜು, ಸತೀಶ್‌ ಬೆಳಗೊಳ, ತಗ್ಗಹಳ್ಳಿ ಗ್ರಾಪಂ ಅಧ್ಯಕ್ಷೆ ಅರ್ಪಿತಾ ಲಿಖಿತ್‌ ಕುಮಾರ್‌, ಸದಸ್ಯ ಲಿಂಗರಾಜು, ಪರಿಶಿಷ್ಟಜಾತಿ ಜೆಡಿಎಸ್‌ ವಿಭಾಗದ ಹಾಲಹಳ್ಳಿ ಮುಕುಂದ, ಬಾಲಕೃಷ್ಣ, ಜಗದೀಶ್‌, ಮಂಗಲ ಲಂಕೇಶ್‌, ತಗ್ಗಹಳ್ಳಿ ಮಂಜು, ಯರಹಳ್ಳಿ ನವೀನ್‌, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ದರಾಜು, ಮನು, ತನ್ವೀರ್‌, ಅಶ್ವತ್‌ , ಕೃಷ್ಣ ಸೇರಿದಂತೆ ಹಲವರು ಇದ್ದರು.

click me!