ಕಳೆದ 1 ವರ್ಷದಿಂದಲೂ ತಾಲೂಕಿನ ಮುತ್ತಿನಕೊಪ್ಪ, ಕಡಹಿನಬೈಲು ಗ್ರಾಮ ಪಂಚಾಯಿತಿಗಳ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಕಾಟ ಮುಂದುವರಿದಿದ್ದು ಈಗ ಕಡಹಿನಬೈಲು ಏತ ನೀರಾವರಿ ಯೋಜನೆ ಸಮೀಪದ ಭದ್ರಾ ಹಿನ್ನೀರಿನ ಮಂಡಲಕಾಡು ಎಂಬಲ್ಲಿ ಅಂದಾಜು 30ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ನರಸಿಂಹರಾಜಪುರ (ಏ.20) : ಕಳೆದ 1 ವರ್ಷದಿಂದಲೂ ತಾಲೂಕಿನ ಮುತ್ತಿನಕೊಪ್ಪ, ಕಡಹಿನಬೈಲು ಗ್ರಾಮ ಪಂಚಾಯಿತಿಗಳ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಕಾಟ ಮುಂದುವರಿದಿದ್ದು ಈಗ ಕಡಹಿನಬೈಲು ಏತ ನೀರಾವರಿ ಯೋಜನೆ ಸಮೀಪದ ಭದ್ರಾ ಹಿನ್ನೀರಿನ ಮಂಡಲಕಾಡು ಎಂಬಲ್ಲಿ ಅಂದಾಜು 30ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಇದಕ್ಕೆ ಮುಖ್ಯ ಕಾರಣವೆಂದರೆ ಕಾಡಾನೆಗಳ(Wild elephants) ಹಿಂಡು ಬೀಡು ಬಿಟ್ಟಿರುವ ಮಂಡಲಕಾಡು ಸಮೀಪ ಬಕ್ರಿಹಳ್ಳ ಹರಿಯುತ್ತಿದೆ. ಪಕ್ಕದ ಭದ್ರಾ ಹಿನ್ನೀರು ಸಹ ಕಡಿಮೆಯಾಗಿದೆ. ಮುಂದಿನ ಒಂದು ವಾರದಲ್ಲಿ ಮಳೆ ಬರದಿದ್ದರೆ ಬಕ್ರಿಹಳ್ಳ ಬತ್ತಿಹೋಗಿ ಕಾಡಾನೆಗಳ ಹಿಂಡು ಸಲೀಸಾಗಿ ಬಕ್ರಿಹಳ್ಳ ದಾಟಿ ಹಿಳುವಳ್ಳಿ ಗ್ರಾಮದ ಮೂಲಕ ನರಸಿಂಹರಾಜಪುರ ಪಟ್ಟಣಕ್ಕೆ ಬರಲಿದೆ. ಈಗ ಕಾಡಾನೆಗಳು ಹಿಂಡು ಇರುವ ಜಾಗಕ್ಕೂ ನರಸಿಂಹರಾಜಪುರ ಪಟ್ಟಣಕ್ಕೂ ಕೇವಲ 2 ಕಿ.ಮೀ. ದೂರವಿರುವುದರಿಂದ ಮುಂದಿನ ವಾರದಲ್ಲಿ ಯಾವಾಗ ಬೇಕಾದರೂ ಕಾಡಾನೆಗಳ ಹಿಂಡು ನರಸಿಂಹರಾಜಪುರ ಪಟ್ಟಣಕ್ಕೆ ಆಗಮಿಸಬಹುದು ಎಂಬುದೇ ಜನರ ಭೀತಿಗೆ ಕಾರಣವಾಗಿದೆ.
ಸುಳ್ಯ: ತೋಟದ ಕೆರೆಗೆ ಬಿದ್ದ ನಾಲ್ಕು ಕಾಡಾನೆಗಳ ರಕ್ಷಣೆ
ಕಳೆದ 1 ವಾರದಿಂದ ಬಾಳೆಕೊಪ್ಪ, ಗೇರ್ ಬೈಲು, ಕೆಸುವಿ, ಲಿಂಗಾಪುರ ಸುತ್ತ ಮುತ್ತ ಓಡಾಡುತ್ತ ಇದ್ದ ಕಾಡಾನೆಗಳು ಭದ್ರಾ ಹಿನ್ನೀರಿಗೆ ಬಂದು ನೀರು ಕುಡಿದು ವಾಪಾಸು ಹೋಗುತ್ತಿದ್ದವು. ಈಗ ಬಕ್ರಿಹಳ್ಳ ಸಮೀಪದಲ್ಲೇ ಸುತ್ತಾಡುತ್ತಿದೆ. ಆದರೆ, ಯಾವುದೇ ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡುತ್ತಿಲ್ಲ. ಆದರೆ, ಜನವಸತಿ ಇರುವ ಪಟ್ಟಣಕ್ಕೆ ನುಗ್ಗಿದರೆ ದೊಡ್ಡ ಅವಾಂತರ ವಾಗುವುದರಲ್ಲಿ ಸಂಶಯವಿಲ್ಲ.ಅರಣ್ಯ ಇಲಾಖೆಯವರು ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿ ಪರಿಹಾರ ಹುಡುಕಬೇಕು ಎಂದು ಸೂಸಲವಾನಿಯ ಗ್ರಾಮ ಪಂಚಾಯಿತಿ ಸದಸ್ಯ ಸುನೀಲ್ ಹಾಗೂ ಇತರ ಗ್ರಾಮಸ್ಥರ ಆಗ್ರಹವಾಗಿದೆ.
ದುಬಾರೆ ಸಾಕಾನೆ ಶಿಬಿರಕ್ಕೆ ಮರಿಯಾನೆ
ಕುಶಾಲನಗರ: ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ತಾಯಿಯಿಂದ ಬೇರ್ಪಟ್ಟಪುಟ್ಟಆನೆಮರಿಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ತರಲಾಗಿದೆ. ಸುಳ್ಯದ ಅಜ್ಜಾವರ ಬಳಿ ಇತ್ತೀಚೆಗೆ ತೋಟ ಒಂದರ ಕೆರೆಯಲ್ಲಿ ಸಿಲುಕಿಕೊಂಡಿದ್ದ ಕೆಲವು ಆನೆಗಳ ಪೈಕಿ ಈ ಪುಟ್ಟಮರಿ ಆನೆ ತಾಯಿಂದ ಬೇರ್ಪಟ್ಟು ಅನಾಥವಾಗಿತ್ತು. ಅಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಎರಡು ದಿನಗಳ ಕಾಲ ಆರೈಕೆ ಮಾಡಿ ಮರಿ ಆನೆಯನ್ನು ದುಬಾರೆ ಶಿಬಿರಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಮಾಡಿದ್ದಾರೆ.
Wildlife: ಬಾಲಕಿಯನ್ನ ಬಲಿಪಡೆದ ಪುಂಡಾನೆ: ಕಾರ್ಯಾಚರಣೆ ವೇಳೆ ವೈದ್ಯನ ಮೇಲೂ ದಾಳಿ!
ದಕ್ಷಿಣ ಕನ್ನಡ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಕುಮಾರ್ ಅವರ ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ನೇತೃತ್ವದ ತಂಡ ಆನೆಯನ್ನು ದುಬಾರೆ ಶಿಬಿರಕ್ಕೆ ತಲುಪಿಸಿದ್ದಾರೆ. ಸುಮಾರು ಮೂರು ತಿಂಗಳ ಗಂಡು ಮರಿ ಆನೆ ಆಹಾರ ಸೇವಿಸುತ್ತಿದ್ದು ಆರೋಗ್ಯಕರವಾಗಿದೆ ಎಂದು ಕುಶಾಲನಗರ ಅರಣ್ಯ ವಲಯ ಅಧಿಕಾರಿ ಕೆ.ವಿ. ಶಿವರಾಂ ತಿಳಿಸಿದ್ದಾರೆ.