ಮಡಿಕೇರಿ: ಪ್ರವಾಹದಿಂದ ತತ್ತರಿಸಿದ ರೈತರಿಗೆ ಈಗ ಕಾಡಾನೆ ಉಪಟಳ

By Kannadaprabha News  |  First Published Aug 25, 2019, 2:53 PM IST

ಕಳೆದ ಒಂದು ತಿಂಗಳಿಂದ ಈ ಭಾಗದಲ್ಲಿ ಕಾಡಾನೆಗಳು ತೋಟಗಳಲ್ಲಿ ಬೀಡುಬಿಟ್ಟಿದ್ದು, ಕಾಫಿ, ಕರಿಮೆಣಸು ಬಾಳೆ ತೋಟಗಳನ್ನು ಧ್ವಂಸಗೊಳಿಸಿ ಭಾರೀ ಪ್ರಮಾಣದಲ್ಲಿ ತೋಟದ ಮಾಲೀಕರಿಗೆ ನಷ್ಟಪಡಿಸಿವೆ. ಪ್ರವಾಹದಿಂದ ತತ್ತರಿಸಿದ ರೈತರಿಗೆ ಈಗ ಕಾಡಾನೆ ಉಪಟಳ ತಲೆನೋವಾಗಿ ಪರಿಣಮಿಸಿದೆ.


ಸುಂಟಿಕೊಪ್ಪ(ಆ. 25): ಹರದೂರು ಗ್ರಾಮ ಪಂಚಾಯಿತಿ ಸೇರಿದ ಗ್ರೀನ್‌ ಪೀಸ್‌ ಎಸ್ಟೇಟ್‌ ತೋಟಕ್ಕೆ ಕಾಡಾನೆಗಳ ದಾಳಿಯಿಂದ ಅಪಾರ ಬೆಳೆ ನಷ್ಟವಾಗಿದೆ.

ಕಳೆದ ಒಂದು ತಿಂಗಳಿಂದ ಈ ಭಾಗದಲ್ಲಿ ಕಾಡಾನೆಗಳು ತೋಟಗಳಲ್ಲಿ ಬೀಡುಬಿಟ್ಟಿದ್ದು, ಕಾಫಿ, ಕರಿಮೆಣಸು ಬಾಳೆ ತೋಟಗಳನ್ನು ಧ್ವಂಸಗೊಳಿಸಿ ಭಾರೀ ಪ್ರಮಾಣದಲ್ಲಿ ತೋಟದ ಮಾಲೀಕರಿಗೆ ನಷ್ಟಪಡಿಸಿವೆ. ಎಂದು ತೋಟದ ಜೆ.ಎಲ್‌. ರಮೇಶ್‌ ತಮ್ಮ ಅಳಲು ತೋಡಿಕೊಂಡಿದ್ದಾರೆ.

Tap to resize

Latest Videos

ಮಡಿಕೇರಿ: ಮೀನುಗಳನ್ನು ಕೊಳ್ಳಲು ಮುಗಿಬಿದ್ದ ಜನ

ಹರದೂರು ಗ್ರಾಮ ಪಂಚಾಯಿತಿಯ ಗರಗಂದೂರು ಗ್ರಾಮದ ಜೆ.ಎಲ್‌. ರಮೇಶ್‌ ಎಂಬುವವರಿಗೆ ಸೇರಿದ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಬಾಳೆ, ತೆಂಗು, ಮಾವು, ಕಾಫಿ, ಮೆಣಸು ಗಿಡಗಳನ್ನು ಧ್ವಂಸಗೊಳಿಸಿದ್ದು, ಅಂದಾಜು ಸುಮಾರು 1 ಲಕ್ಷದ 5,000 ರು.ನಷ್ಟುನಷ್ಟಸಂಭವಿಸಿದೆ ಎಂದಿದ್ದಾರೆ.

ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಳೆದ 1 ತಿಂಗಳಿಂದ ಕಾಡಾನೆಗಳು ಈ ಭಾಗದ ಪಾನಂಡ್ರಾ, ಅಣ್ಣಾಮಲೈ, ಎಮ್ಮೆಗುಂಡಿ, ನಟ್ಲಿ ಬಿ, ಹರದೂರು, ಪಣ್ಯ ತೋಟಗಳಲ್ಲಿ ಬೀಡುಬಿಟ್ಟಿದ್ದು, 4 ವರ್ಷದ ರೋಬೆಸ್ಟಾಮತ್ತು ಅರೇಬಿಕಾ ಕಾಫಿ ಗಿಡಗಳನ್ನು ಧ್ವಂಸಗೊಳಿಸಿದೆ ಎಂದು ಮಾಲಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕರಿಗೆ ಆತಂಕ:

ಈ ಭಾಗದಲ್ಲಿ ನಿರಂತರವಾಗಿ ಸುತ್ತಮುತ್ತಲಿನ ತೋಟಗಳಲ್ಲಿ ಹಗಲು ವೇಳೆಯಲ್ಲಿಯೇ ಆನೆಗಳು ಕಂಡು ಬರುತ್ತಿವೆ. ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಅಂಜುತ್ತಿದ್ದು, ಸಾರ್ವಜನಿಕರು ಮನೆಯಿಂದ ಹೊರ ಬರುವುದಕ್ಕೂ ಭಯ ಪಡುತ್ತಿದ್ದಾರೆ. ರಾತ್ರಿ ವೇಳೆ ಸುಂಟಿಕೊಪ್ಪದಿಂದ ಮಾದಾಪುರದೆಡೆಗೆ ಹಲವಾರು ವಾಹನಗಳು ಸಂಚರಿಸುತ್ತಿದ್ದಾರೆ. ಪ್ರಯಾಣಿಕರಿಗೆ ಆನೆ ಉಪಟಳದಿಂದ ತೊಂದರೆ ತಪ್ಪಿದಲ್ಲ ಕೂಡಲೇ ಅರಣ್ಯ ಅಧಿಕಾರಿಗಳು ಆನೆಗಳನ್ನು ಅರಣ್ಯಗಳಿಗೆ ಓಡಿಸುವಂತೆ ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆಯವರು ಇದೇ ಧೋರಣೆ ಮುಂದುವರಿಸಿದಲ್ಲಿ ಕೃಷಿಕರು ಮತ್ತು ಗ್ರಾಮಸ್ಥರು ಸೇರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

click me!