ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ!

By Kannadaprabha News  |  First Published May 9, 2020, 8:48 AM IST

ಮಂಗಳೂರು-ಚಾರ್ಮಾಡಿ ರಸ್ತೆಯ ಚಾರ್ಮಾಡಿ ಘಾಟ್‌ನ 8ನೇ ತಿರುವಿನ ಸಮೀಪ ಒಂಟಿ ಸಲಗ ಗುರುವಾರ ರಸ್ತೆಗಿಳಿದಿದ್ದು, ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ.


ಬೆಳ್ತಂಗಡಿ(ಮೇ 09): ಮಂಗಳೂರು-ಚಾರ್ಮಾಡಿ ರಸ್ತೆಯ ಚಾರ್ಮಾಡಿ ಘಾಟ್‌ನ 8ನೇ ತಿರುವಿನ ಸಮೀಪ ಒಂಟಿ ಸಲಗ ಗುರುವಾರ ರಸ್ತೆಗಿಳಿದಿದ್ದು, ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ.

ಸಂಜೆ 5.45ಕ್ಕೆ ಚಾರ್ಮಾಡಿ ಘಾಟ್‌ 7-8ನೇ ತಿರುವಿನ ಮಧ್ಯೆ ಒಂಟಿ ಸಲಗ ರಸ್ತೆಯಲ್ಲಿ ತರಕಾರಿ ಸಾಗಾಟದ ವಾಹನ ಸವಾರರಿಗೆ ಎದುರಾಗಿದೆ. ಸವಾರರಿಗೆ ತೊಂದರೆಯಾಗುವ ದೃಷ್ಟಿಯಿಂದ ಬೆಳ್ತಂಗಡಿ ಪೊಲೀಸ್‌ ಠಾಣೆ ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.

Tap to resize

Latest Videos

ಲಾಕ್‌ಡೌನ್‌ ಎಫೆಕ್ಟ್‌: ಲಂಡನ್‌ನಲ್ಲಿ ಟೆಕ್ಕಿ ಆತ್ಮಹತ್ಯೆ, 50 ದಿನಗಳಾದ್ರೂ ಭಾರತಕ್ಕೆ ಬಾರದ ಮೃತದೇಹ

ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್‌ ಪಿ.ಜಿ., ಬೆಳ್ತಂಗಡಿ ವಲಯ ಅರಣ್ಯಧಿಕಾರಿ ಸುಬ್ಬಯ್ಯ ನಾಯ್‌್ಕ ಮತ್ತು ಸಿಬ್ಬಂದಿ ತೆರಳಿ ವಾಹನ ಸವಾರರಿಗೆ ತೆರಳದಂತೆ ಸೂಚನೆ ನೀಡಿದರು. ಏ.8ರಂದು ಕೂಡ ಇದೇ ಸ್ಥಳದಲ್ಲಿ ಒಂಟಿ ಸಲಗ ತಡರಾತ್ರಿ ಪ್ರತ್ಯಕ್ಷವಾಗಿತ್ತು.

ಜಿಂಕೆ ಕೊಂದು ತಿಂದ ಇಬ್ಬರ ಬಂಧನ..!

ಕಳೆದ ಕೆಲದಿನಗಳಿಂದ ಲಾಕ್‌ಡೌನ್‌ ಪರಿಣಾಮ ಮನುಷ್ಯರ ಓಡಾಟ, ವಾಹನಗಳ ಶಬ್ದ ಇಲ್ಲದಿರುವುದರಿಂದ ಪ್ರಾಣಿಗಳು ನಾಡಿಗೆ ಕಾಲಿಡುತ್ತಿವೆ. ಎರಡು ದಿನಗಳಿಂದ ಮಂಗಳೂರಿಗೆ ಅತಿಥಿಯಾಗಿದ್ದ ಕಾಡುಕೋಣದ ಬೆನ್ನಲ್ಲೆ ಚಾರ್ಮಾಡಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷಗೊಂಡಿದೆ.

click me!