
ಕೊಡಗು (ಜ.18): ರೈಲ್ವೆಯ ಬ್ಯಾರಿಕೇಡ್‌ನ ಗೇಟ್‌ನಲ್ಲಿ ತಲೆಸಿಕ್ಕಿಹಾಕಿಕೊಂಡು ಕಾಡಾನೆಯೊಂದು ಪರದಾಡಿದ ವಿಡಿಯೋ ವೈರಲ್ ಆಗಿದೆ. ಗೇಟಿನೊಳಗೆ ತಲೆ ಸಿಕ್ಕಿಹಾಕೊಂಡಿದ್ದರಿಂದ ಅದರಿಂದ ತಪ್ಪಿಸಿಕೊಳ್ಳಲು ವಿಪರೀತ ಎನಿಸುವಷ್ಟು ಪ್ರಯತ್ನ ಮಾಡಿದೆ. ರೈಲ್ವೇ ಬ್ಯಾರಿಕೇಡ್ ಗೇಟಿಗೆ ಸಿಲುಕಿ ಕಾಡಾನೆ ಪರದಾಡಿದ ವಿಡಿಯೋ ತಡವಾಗಿ ಬೆಳಕಿಗೆ ಬಂದಿದೆ. ಗೇಟ್‌ನ ಒಳಗಡೆ ತಲೆ ಸಿಲುಕಿದ್ದರಿಂದ ಹೊರ ತೆಗೆಯಲು ಕಾಡಾನೆ ಪರದಾಟ ನಡೆಸಿದೆ. ಈ ವೇಳೆ ಸಿಲುಕಿದ ಕಾಡಾನೆಯ ನೆರವಿಗೆ ಮತ್ತೊಂದು ಕಾಡಾನೆ ಧಾವಿಸಿತ್ತು. ಕಾಡಾನೆಗಳ ಪರದಾಟ ವಿಡಿಯೋ ಕ್ಯಾಮೆರದಲ್ಲಿ ಸೆರೆಯಾಗಿದೆ. ಇನ್ನೇನು ಗೇಟ್ ಕಿತ್ತು ಕಾಡಾನೆಯ ಕುತ್ತಿಗೆಯಲ್ಲೇ ಉಳಿದುಕೊಳ್ಳಲಿದೆ ಅನ್ನೋ ಹಂತದಲ್ಲಿ, ಚಾಣಕ್ಷತೆಯಿಂದ ತಲೆ ಹೊರ ತೆಗೆದು ಕಾಡಾನೆ ಪರಾರಿಯಾಗಿದೆ. ಕೊಡಗಿನ ತಿತಿಮತಿ ಬಳಿಯ ಅರಣ್ಯ ಇಲಾಖೆ ಟಿಂಬರ್ ಯಾರ್ಡ್ ಗೇಟ್‌ನಲ್ಲಿ ಕಾಡಾನೆಯತಲೆ ಸಿಲುಕಿಕೊಂಡಿತ್ತು. ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶುಕ್ರವಾರ ಈ ಘಟನೆ ನಡೆದಿದ್ದಾಗಿ ವರದಿಯಾಗಿದೆ.
ಅಮ್ಮಾ ಪ್ಲೀಸ್ ಸ್ವಲ್ಪ ಹೊತ್ತು ಮಲಗ್ತೀನಿ ಎಂದ್ರೂ ಈ ಅಮ್ಮ ಕೇಳ್ಲೇ ಇಲ್ಲ ನೋಡಿ: ನಿಮ್ ಮನೆಯಲ್ಲೂ ಹೀಗೇನಾ?
ಕಳೆದ ವರ್ಷದ ನವೆಂಬರ್‌ನಲ್ಲೂ ಇದೇ ರೀತಿಯ ಘಟನೆ ಕೊಡಗಿನಲ್ಲಿ ನಡೆದಿತ್ತು. ಕುಶಾಲನಗರ ತಾಲ್ಲೂಕಿನ ವಲ್ನೂರಿನಲ್ಲಿ ಹೆಣ್ಣಾನೆಯೊಂದು ತೋಟ ಪ್ರದೇಶದಿಂದ ಕಾಡಿಗೆ ದಾಟಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ. ಆ ಪ್ರಾಣಿ ಬ್ಯಾರಿಕೇಡ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಅಧಿಕಾರಿಗಳು ತಕ್ಷಣ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.. ಅವರು ಲೋಹದ ಬೇಲಿಯ ಬೋಲ್ಟ್‌ಗಳನ್ನು ಎಚ್ಚರಿಕೆಯಿಂದ ಸಡಿಲಗೊಳಿಸಿದರು, ಆನೆ ತನ್ನನ್ನು ತಾನು ಮುಕ್ತಗೊಳಿಸಲು ಅವಕಾಶ ಮಾಡಿಕೊಟ್ಟಿತು. ನಂತರ ಆ ಪ್ರಾಣಿ ಶಾಂತವಾಗಿ ಕಾಡಿನ ಕಡೆಗೆ ಚಲಿಸಿ ಕಾವೇರಿ ಹೊಳೆಯನ್ನು ದಾಟಿತ್ತು.
Viral: ಕೇರಳ ಉತ್ಸವದ ಭಯಾನಕ ವಿಡಿಯೋ; ವ್ಯಕ್ತಿಯನ್ನ ಸೊಂಡಿಲಿನಲ್ಲಿ ಎತ್ತಿ ಗರಗರನೆ ತಿರುಗಿಸಿ ಎಸೆದ ಆನೆ!