
ಬೆಂಗಳೂರು (ಜ.18): ಆತ 51 ವರ್ಷದ ಸಿವಿಲ್ ಕಂಟ್ರಾಕ್ಟರ್. 21 ವರ್ಷದ ಯುವತಿಯ ಅಂದ-ಚಂದ ನೋಡಿ ಫಿದಾ ಆಗಿ ಬಿಟ್ಟಿದ್ದ. 21 ವರ್ಷದ ಬ್ಯೂಟಿ ಸಿಕ್ಕ ಖುಷಿಗೆ ಹನಿಟ್ರ್ಯಾಪ್‌ಗೆ ಒಳಗಾಗಿದ್ದ ಅಂಕಲ್ ಸಾವಿರಾರು ರೂಪಾಯಿ ಹಣ ಹಾಗೂ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನೂ ಕಳೆದುಕೊಂಡಿದ್ದ. ಪರಿಚಯವಾದ ಬಳಿಕ ಮಾಯದ ಮಾತನಾಡಿದ್ದ 21ರ ಯುವತಿ, ಬಳಿಕ ನಕಲಿ ಪೊಲೀಸರ ಟೀಮ್‌ಅನ್ನು ಕರೆದುಕೊಂಡು 57 ವರ್ಷದ ಅಂಕಲ್‌ಅನ್ನು ಸಂಪೂರ್ಣವಾಗಿ ದೋಚಿದ್ದ ಪ್ರಕರಣ ಕಳೆದ ಡಿಸೆಂಬರ್ ಅಂತ್ಯದಲ್ಲಿ ವರದಿಯಾಗಿತ್ತು. ಪ್ರಕರಣದಲ್ಲಿ ನಕಲಿ ಪೊಲೀಸರ ವೇಷದಲ್ಲಿದ್ದ ಎಲ್ಲರನ್ನೂ ಅರೆಸ್ಟ್ ಮಾಡಿದ್ದರೆ, 21 ವರ್ಷದ ಯುವತಿ ಮಾತ್ರ ನಾಪತ್ತೆಯಾಗಿದ್ದಳು. ಈ ಪ್ರಕರಣದ ನಡೆದ 21 ದಿನಗಳ ಬಳಿಕ ಯುವತಿಯನ್ನು ಅರೆಸ್ಟ್ ಮಾಡಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಡುಗಿ ಹಿಂದೆ ಹೋದ ಅಂಕಲ್ಅನ್ನು ಪೊಲೀಸರ ಸೋಗಿನಲ್ಲಿ ಸುಲಿಗೆ ಮಾಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ನಯನಾ ಅಂದರ್ ಆಗಿದ್ದಾಳೆ. ಆರೋಪಿ ನಯನಾಳನ್ನ ವಶಕ್ಕೆ ಪಡೆದು ಬ್ಯಾಡರಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಯನಾಳಿಂದ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ಮಾಡಿದ್ದಾರೆ.ಸದ್ಯ ಒಬ್ಬರಿಗೆ ಮಾತ್ರ ಈ ರೀತಿ ಹನಿಟ್ರ್ಯಾಪ್ ಮಾಡಿರೋದು ಬೆಳಕಿಗೆ ಬಂದಿದೆ.
ಯಲಹಂಕದಲ್ಲಿ ತಲೆಮರೆಸಿಕೊಂಡಿದ್ದ ನಯನಾಳನ್ನು ಪೊಲಸರು ಬಂಧಿಸಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸ್ನೇಹಿತರ ಮನೆಯಲ್ಲಿ ವಾಸವಾಗಿದ್ದಳು. ಮೊಬೈಲ್ ಸಿಡಿಆರ್ ತೆಗೆದು ಲೊಕೇಷನ್ ಟ್ರಸ್ ಮಾಡಿದ್ದ ಪೊಲೀಸರಿಗೆ ಈಕೆಯ ಮಾಹಿತಿ ಸಿಕ್ಕಿತ್ತು. ಇನ್ನು ನಯನಾಗೆ ಅಂಕಲ್ ಆಗಾಗ ಐದು ಹತ್ತು ಸಾವಿರ ಹಣವನ್ನ ಕೊಡುತ್ತಿದ್ದ ಅನ್ನೋ ಮಾಹಿತಿ ಕೂಡ ಬಹಿರಂಗವಾಗಿದೆ.
ಸಿವಿಲ್ ಕಂಟ್ರಾಕ್ಟರ್ ಆಗಿರೋ ಅಂಕಲ್‌ಗೆ ಸುರಸುಂದರಿ ಸಖತ್ ಆಗಿಯೇ ಸ್ಕೆಚ್ ಹಾಕಿದ್ದಳು. ಮೊದಲು ಟೀ ಕುಡಿದುಕೊಂಡು ಹೋಗಿ ಅಂತ ಮನೆಗೆ ಕರೆದಿದ್ದಳು. ಈಕೆಯ ಸ್ಮೈಲಿಗೆ ಕರಗಿದ ಅಂಕಲ್ ಸೀದಾ ಅವಳ ಸ್ಕೂಟಿ ಫಾಲೋ ಮಾಡಿಕೊಂಡು ಮನೆಗೆ ಹೋಗಿದ್ದ. ಈ ವೇಳೆ ಅಂಕಲ್ ಜೇಬು ಮತ್ತು ಕೈನಾ ಸುಂದರಿ ಅಂಡ್ ಗ್ಯಾಂಗ್ ಖಾಲಿ ಮಾಡಿ ಕಳುಹಿಸಿದ್ದಾರೆ.
ಬ್ಯೂಟಿ ಜೊತೆ ಅಂಕಲ್ ಜಾಲಿಯಾಗಿದ್ದಾಗ ಪೊಲೀಸರು ಅಂತ ಈಕೆಯ ಗೆಳೆಯರು ಎಂಟ್ರಿ ಕೊಟ್ಟಿದ್ದರು. ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಅಂತ ಪೊಲೀಸರ ಸೋಗಿನಲ್ಲಿ ಬ್ಲಾಕ್ ಮೇಲ್ ಮಾಡಲಾಗಿತ್ತು. ನಂತರ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸಿ ಫೋಟೊ ಕೂಡ ತೆಗೆದುಕೊಂಡಿದ್ದಾರೆ. ಕೆಳಗಡೆ ಮೇಡಂ ಇದಾರೆ ಇಲ್ಲೆ ಸೆಟಲ್ ಮಾಡ್ಕೋ ಅಂತ ಅಂಕಲ್ ಗೆ ಬೆದರಿಕೆ ಹಾಕಲಾಗಿತ್ತು.
29 ಸಾವಿರ ನಗದು, ಫೋನ್ ಪೇನಲ್ಲಿ 26ಸಾವಿರ ಹಾಗೂ ಮೈ ಮೇಲಿದ್ದ ಸುಮಾರು 5ಲಕ್ಷದ ಚಿನ್ನದ ಸರವನ್ನು ಕಿತ್ತುಕೊಳ್ಳಲಾಗಿತ್ತು.ಅದರೊಂದಿಗೆ ಉಂಗುರ, ಬ್ರಾಸ್ ಲೇಟ್ ಕಿತ್ತುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇದಾದ ನಂತರ ಸುಂದರಿ ನಯಾನಗೆ ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ನೀಡೋಣ ಎಂದು ಅಂಕಲ್ ಹೇಳಿದ್ದ. ಆ ಸಮಯದಲ್ಲಿ ನಯನ ಹೊಸ ವರಸೆ ತೆಗೆದಿದ್ದಳು. ಸ್ಟೇಷನ್, ದೂರು ಅಂತ ಹೋದರೆ ಮಗುನಾ ಕರ್ಕೊಂಡು ನಿಮ್ಮ ಮನೆಗೆ ಬರ್ತಿನಿ ಅಂತ ಅಂಕಲ್ ನ ಮತ್ತೆ ಬ್ಲಾಕ್ ಮೇಲ್ ಮಾಡಿದ್ದಳು.
ಇದಾದ ನಂತರ ಧೈರ್ಯಮಾಡಿ ಬ್ಯಾಡರಹಳ್ಳಿ ಠಾಣೆಗೆ ಕಂಟ್ರಾಕ್ಟರ್ ಏಕಾಂಗಿಯಾಗಿ ದೂರು ನೀಡಿದ್ದ. ಸ್ನೇಹಿತನೊಬ್ಬನ ಮೂಲಕ 57 ವರ್ಷದ ಕಂಟ್ರಾಕ್ಟರ್ ಗೆ ನಯನ ಪರಿಚಯವಾಗಿತ್ತು. ಆರಂಭದಲ್ಲಿ ಮಗುವಿಗೆ ಹುಷಾರಿಲ್ಲ ಅಂತ 5 ಸಾವಿರ 10 ಸಾವಿರ ಹಣವನ್ನು ನಯನಾ ಹಾಕಿಸಿಕೊಂಡಿದ್ದಳು. ಬಳಿಕ ನಿತ್ಯ ಕಾಲ್ ಮಾಡಿ ಮನೆ ಬನ್ನಿ ಅಂತ ಕರೆಯುತ್ತಿದ್ದಳು.
21 ವರ್ಷದ ಬ್ಯೂಟಿಗಾಗಿ ಬಟ್ಟೆ ಬಿಚ್ಚಿದ ಅಂಕಲ್, ನಕಲಿ ಪೊಲೀಸ್‌ಗೆ ದುಡ್ಡು ಕಳ್ಕೊಂಡು ಪಾಪರ್!
ಡಿಸೆಂಬರ್ 9ರಂದು ಬೆಳಿಗ್ಗೆ ಬೈಕ್ ನಲ್ಲಿ ಮಾಗಡಿ ರಸ್ತೆಯಲ್ಲಿ ಅಂಕಲ್ ಹೋಗುವಾಗ, ಹಿಂಬದಿಯಿಂದ ಸ್ಕೂಟರ್ ನಲ್ಲಿ ಬಂದ ನಯನ ಕರೆದು ಮಾತನಾಡಿಸಿದ್ದಳು. ಇಲ್ಲೇ ಮನೆ ಇದೆ. ಟೀ ಕುಡಿದು ಹೋಗಿ ಅಂತ ಮನೆಗೆ ಕರೆದುಕೊಂಡು ಹೋಗಿದ್ದಳು. ಈ ವೇಳೆ ಮನೆಗೆ ಏಕಾಏಕಿ ಅಪರಿಚಿತ ವ್ಯಕ್ತಿಗಳ ಎಂಟ್ರಿ ಆಗಿತ್ತು. ನಾವು ಕ್ರೈಂ ಪೊಲೀಸ್ ಎಂದು ಬೆದರಿಸಿ ಅಂಕಲ್ ಮೇಲೆ ಹಲ್ಲೆ ಮಾಡಿದ್ದರು. ಬಟ್ಟೆ ಬಿಚ್ಚಿಸಿ ಫೋಟೋ ತೆಗೆದುಕೊಂಡು ಎರಡು ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು.
ಸುಪಾರಿ ನೀಡಿ ಗಂಡನ ಕೊಲೆ ಮಾಡಿಸಿ 'ಹಾರ್ಟ್ ಅಟ್ಯಾಕ್' ಡ್ರಾಮಾ' 9 ತಿಂಗಳ ಹಿಂದೆ ಹೂತ ಶವ ಹೊರತೆಗೆದ ಪೊಲೀಸ್!
ಪ್ರಕರಣದಕ್ಕೆ ಸಂಬಂಧಪಟ್ಟಂತೆ ಬ್ಯಾಡರಹಳ್ಳಿ ಪೊಲೀಸರಿಂದ ಸುಲಿಗೆ ಗ್ಯಾಂಗ್ ನ ಸಂತೋಷ್, ಅಜಯ್, ಜಯರಾಜ್ ಎಂಬುವರನ್ನ ಬಂಧನ ಮಾಡಲಾಗಿತ್ತು. ಈಗ ನಾಪತ್ತೆಯಾಗಿದ್ದ ನಯನಾಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Hubballi: ಅಶ್ಪಾಕ್ ಜೋಗನಕೊಪ್ಪ, ಇದೇನಪ್ಪ; ಪ್ರೀತಿ ಹೆಸರಲ್ಲಿ ಪೋಲಿ ಆಟ ಆಡಿದ ಜೆರಾಕ್ಸ್ ಅಂಗಡಿ ಮಾಲೀಕ!