ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಕಾಟ ಇನ್ನೂ ತಪ್ಪಿಲ್ಲ. ಡ್ರೋನ್ ಕ್ಯಾಮೆರಾದಲ್ಲಿ ಕಾಡಾನೆಗಳ ಉಪಟಳದ ವಿಡಿಯೋ ಸೆರೆಯಾಗಿದೆ.
ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್,
ರಾಮನಗರ (ಅ.11): ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಇನ್ನೂ ಕಡಿಮೆ ಆಗಿಲ್ಲ. ಪದೇ ಪದೇ ಕಾಡಿನಿಂದ ನಾಡಿಗೆ ಬಂದು ರೈತರ ಜಮೀನುಗಳಿಗೆ ನುಗ್ಗಿ, ಬೆಳೆ ಹಾನಿ ಮಾಡುವ ಕೆಲಸ ಇನ್ನೂ ಸಹ ಮುಂದುವರಿದಿದೆ. ಸಾಲು ಸಾಲಾಗಿ, ಓಡಾಡ್ತಿರೋ ಕಾಡಾನೆಗಳು, ಮತ್ತೊಂದು ಕಡೆ ರೈತರು ಬೆಳೆದ ಬೆಳೆ ನಾಶ, ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಕಾಡಾನೆಗಳ ಉಪಟಳದ ವಿಡಿಯೋ, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು, ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಎನ್ ಆರ್ ಕಾಲೋನಿ ಗ್ರಾಮದ ಬಳಿ, ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಕಾಟ ಇನ್ನೂ ತಪ್ಪಲಿಲ್ಲ, ಹಲವು ಬಾರಿ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡಿದ್ರೂ, ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಿರುವ ಎನ್ ಆರ್ ಕಾಲೋನಿ, ಬಿ.ವಿ ಹಳ್ಳಿ, ತೆಂಗಿನಕಲ್ಲು, ಗ್ರಾಮಗಳ ರೈತರ ಗೋಳು ಹೇಳತೀರದು, ನಿನ್ನೆ ತಡರಾತ್ರಿ 7 ಕಾಡಾನೆಗಳ ದಂಡು, ಗ್ರಾಮಕ್ಕೆ ಬಂದು ಸಾಕಷ್ಟು ಅವಾಂತರಗಳನ್ನೇ ಸೃಷ್ಟಿ ಮಾಡಿದೆ. ರೈತರು ಬೆಳೆದಿದ್ದ ಟಮೋಟ, ತೆಂಗು, ರೇಷ್ಮೆ, ಬಾಳೆ ಬೆಳೆ ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಬೆಳಗಳನ್ನು ನಾಶ ಮಾಡಿ ರೈತರ ಬದುಕಿನ ಮೇಲೆ ಬರೆ ಎಳೆದಿದೆ.
ಅಂದಹಾಗೆ ಕಳೆದ ಮೂರು ದಿನಗಳ ಹಿಂದೆ 7 ಕಾಡಾನೆಗಳ ದಂಡು ದೊಡ್ಡ ಮಣ್ಣುಗುಡ್ಡೆ ಅರಣ್ಯ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದು,ಆ ಭಾಗದ ಹಲವು ಭಾಗಗಳಲ್ಲಿ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದ್ದವು, ತದನಂತರ ಆನೆಗಳನ್ನು ಕಾಡಿನ ಕಡೆ ಡ್ರೈವ್ ಮಾಡಲು ಸತತ ಮಳೆ ಆಗಿದ್ದರಿಂದ ಸಾಧ್ಯವಾಗಿರಲಿಲ್ಲ, ಇದೀಗ ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ ಈ ಆನೆಗಳನ್ನು ಅಟ್ಟುವ ಕೆಲಸ ಮಾಡಲಾಗುತ್ತಿದೆ.
ಮಲೆನಾಡಿನಲ್ಲಿ ಐದು ಕಾಡಾನೆಗಳಿಂದ ಭೀತಿ, ಆನೆ ಹಾವಳಿಗೆ ಹೈರಾಣದ ಜನ!
ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಸುತ್ತ ಸೋಲಾರ್ ತಂತಿ ಬೇಲಿ ನಿರ್ಮಿಸುವ ಕೆಲಸ ಕೂಡ ಇನ್ನೂ 15 ದಿನಗಳಲ್ಲಿ ಆರಂಭವಾಗಲಿದೆ. ಆದಷ್ಟು ಕಾಡಾನೆಗಳು ಗ್ರಾಮಗಳತ್ತ ಸುಳಿಯದ ರೀತಿ ಕ್ರಮ ವಹಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರು: ವಿಪರೀತ ಕಾಡಾನೆ ಕಾಟ, ಓಡಿಸಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ
ಒಟ್ಟಾರೆ ಜಿಲ್ಲೆಯಲ್ಲಿ ನಿರಂತರ ಕಾಡಾನೆಗಳ ಹಾವಳಿಯಿಂದಾಗಿ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವ ಜೊತೆಗೆ ಆನೆಗಳು ಗ್ರಾಮಗಳತ್ತ ಸುಳಿಯದ ರೀತಿ ಅಗತ್ಯ ಕ್ರಮ ವಹಿಸಬೇಕಾಗಿದೆ.