ಹಾರಂಗಿ ಉದ್ಯಾನವನ ಪ್ರವಾಸಿ ಕೇಂದ್ರಕ್ಕೆ ಶನಿವಾರ ರಾತ್ರಿ 8.30ರ ಸುಮಾರಿಗೆ ಕಾಡಾನೆಯೊಂದು ನುಗ್ಗಿದ ಘಟನೆ ನಡೆದಿದೆ.ಭದ್ರತಾ ಪಡೆಯ ಸಿಬ್ಬಂದಿ ಸೇರಿ ಕಾಡಾನೆಯನ್ನು ಸಮೀಪದ ಬೆಂಡೆಬೆಟ್ಟಅರಣ್ಯಕ್ಕೆ ಓಡಿಸಿದ್ದಾರೆ.
ಕುಶಾಲನಗರ (ಜು.24): ಕುಶಾಲನಗರ ಹಾರಂಗಿ ಉದ್ಯಾನವನ ಪ್ರವಾಸಿ ಕೇಂದ್ರಕ್ಕೆ ಶನಿವಾರ ರಾತ್ರಿ 8.30ರ ಸುಮಾರಿಗೆ ಕಾಡಾನೆಯೊಂದು ನುಗ್ಗಿದ ಘಟನೆ ನಡೆದಿದೆ. ಉದ್ಯಾನವನದಿಂದ ಜನವಸತಿ ಪ್ರದೇಶಕ್ಕೆ ಹೋದ ಕಾಡಾನೆಯನ್ನು ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ಹಾಗೂ ಸಿಬ್ಬಂದಿ ಮತ್ತು ಹಾರಂಗಿ ಭದ್ರತಾ ಪಡೆಯ ಸಿಬ್ಬಂದಿ ಸೇರಿ ಕಾಡಾನೆಯನ್ನು ಸಮೀಪದ ಬೆಂಡೆಬೆಟ್ಟಅರಣ್ಯಕ್ಕೆ ಓಡಿಸಿದ್ದಾರೆ.
Hassan: ಬಾಳ್ಳುಪೇಟೆ ಬಳಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕರ ಕೂಗಾಟದಿಂದ ಅದೃಷ್ಟವಶಾತ್ ಪಾರಾದ ಮಹಿಳೆ
ಸಕಲೇಶಪು(Sakaleshpur)ರ ಅರಣ್ಯ (Forest)ವ್ಯಾಪ್ತಿಯಲ್ಲಿ ದಾಂದಲೆ ನಡೆಸುತ್ತಿದ್ದ ಈ ಕಾಡಾನೆ(Wild elephant) ಯನ್ನು ಇತ್ತೀಚೆಗೆ ರೇಡಿಯೋ ಕಾಲರ್(radio collar) ಅಳವಡಿಸಿ ಸಕಲೇಶಪುರ ಅರಣ್ಯಾಧಿಕಾರಿಗಳು ಬಂಡೀಪುರ ಅರಣ್ಯಕ್ಕೆ ಬಿಟ್ಟಿದ್ದರು. ನಾಗರಹೊಳೆಯಾಗಿ ಅತ್ತೂರು ಮೀಸಲು ಅರಣ್ಯದ ಮೂಲಕ ಕಾಡಾನೆ ಶುಕ್ರವಾರ ಕುಶಾಲನಗರ(Kushalanagar)ಕ್ಕೆ ಬಂದಿದೆ ಎಂಬ ಮಾಹಿತಿ ಅರಣ್ಯಾಧಿಕಾರಿಗಳಿಗೆ ಲಭಿಸಿದೆ. ಶನಿವಾರ ರಾತ್ರಿ ಹಾರಂಗಿ ಉದ್ಯಾನವನ ಪ್ರವಾಸಿ ಕೇಂದ್ರಕ್ಕೆ ನುಗ್ಗಿದ ಕಾಡಾನೆ ಯಾರಿಗೂ ಯಾವುದೇ ಹಾನಿ ಮಾಡಿಲ್ಲ. ವಾರಾಂತ್ಯವಾದ್ದರಿಂದ ಪ್ರವಾಸಿಗರು ಸಾಕಷ್ಟುಸಂಖ್ಯೆಯಲ್ಲಿದ್ದರು.
ಹಿಂದೆಯೂ ಹೀಗೆ ಕಾಡಾನೆಗಳು ರಸ್ತೆ, ಹಾರಂಗಿ ಜಲಾಶಯಗಳಿಗೆ ನುಗ್ಗಿವೆ. ಪ್ರವಾಸಿಗರು ಈ ವೇಳೆ ಭಯಭೀತರಾಗಿದ್ದಾರೆ. ರಸ್ತೆಯಲ್ಲಿ ವಾಹನಗಳನ್ನು ಜಖಂಗೊಳಿಸಿರುವ ಪ್ರಕರಣಗಳು ನಡೆದಿವೆ. ಅರಣ್ಯಾಧಿಕಾರಿಗಳ ಕಾಡಾನೆ ದಾಳಿ ವಿಚಾರದಲ್ಲಿ ತಲೆಕೆಡಿಸಿಕೊಂತೆ ಕಾಣುತ್ತಿಲ್ಲ.. ಕಾಡಾನೆಗಳು ನುಗ್ಗುವಿಕೆ ಕೊನೆ ಇಲ್ಲ ಎಂದು ಸಾರ್ವಜನಿಕರು ಬೇಸರ, ಆತಂಕ ವ್ಯಕ್ತಪಡಿಸಿದ್ದಾರೆ.
ಕಾಡಾನೆ ದಾಳಿ : ಬೈಕ್ ಬಿಟ್ಟೋಡಿ ಪ್ರಾಣ ಉಳಿಸಿಕೊಂಡ ಸವಾರ
ಸೋಮವಾರಪೇಟೆ: ಹಾಡಹಗಲೇ ಕಾಡಾನೆ ಪ್ರತ್ಯಕ್ಷ:
ಇಲ್ಲಿಗೆ ಸಮೀಪದ ಕಾಜೂರು ಜಂಕ್ಷನ್ ಬಳಿ ಹಾಡಹಗಲೇ ಕಾಡಾನೆಗಳು ರಾಜ್ಯ ಹೆದ್ದಾರಿಯಲ್ಲಿ ಸಂಚರಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಯಭೀತರಾದ ಘಟನೆ ನಡೆದಿದೆ. ಶನಿವಾರ ಬೆಳಗ್ಗೆ 9.55ರ ವೇಳೆ ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭವೇ ಅನತಿ ದೂರದಲ್ಲಿ ಮೂರು ಆನೆಗಳು ಪ್ರತ್ಯಕ್ಷವಾಗಿವೆ. ಇದೇ ಸಂದರ್ಭ ಜನರು ಬೊಬ್ಬೆ ಹೊಡೆದ ಸಂದರ್ಭ ಒಂದು ಆನೆ ನೇರವಾಗಿ ಮುಖ್ಯ ರಸ್ತೆಗೆ ಬಂದು ಕಾಜೂರು ಜಂಕ್ಷನ್ ಬಳಿಯಿಂದ ತೆರಳಿದೆ. ಉಳಿದ ಎರಡು ಆನೆಗಳು ಕಾಫಿ ತೋಟದೊಳಗೆ ತೆರಳಿವೆ. ಟಾಟಾ ಕಾಫಿ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮದಿಂದಾಗಿ ಸ್ವಲ್ಪ ಸಮಯದವರೆಗೆ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.