ಕೊಡಗು (ಜು.18): ಸೋಲಾರ್ ವಿದ್ಯುತ್ ತಂತಿ ಸ್ಪರ್ಷಿಸಿ ಆನೆ ಮರಿಯೊಂದು ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯಲ್ಲಿಂದು ನಡೆದಿದೆ.
ಅಂದಾಜು ಎಂಟು ವರ್ಷದ ಗಂಡಾನೆ ಮರಿ ಸೋಮವಾರಪೇಟೆ ತಾಲೂಕಿನ ಅರೆಯೂರು ಮೋರಿಕಲ್ಲು ಗ್ರಾಮದಲ್ಲಿ ಹೊಲಕ್ಕೆ ಅಳವಡಿಸಿದ್ದ ವಿದ್ಯುತ್ ಸ್ಪರ್ಷಿಸಿ ಸಾವನ್ನಪ್ಪಿದೆ.
ಗುಂಡ್ಲುಪೇಟೆ ಬಳಿ ವಿದ್ಯುತ್ ಶಾಕ್‌ಗೆ ಬಲಿಯಾದ ಹೆಣ್ಣಾನೆ
ಇಲ್ಲಿನ ಅವಿನಾಶ್ ಎಂಬುವವರು ತಮ್ಮ ಶುಂಠಿ ತೋಟಕ್ಕೆ ಅಳವಡಿಸಲಾಗಿದ್ದ ಸೋಲಾರ್ ಬೇಲಿ ಸ್ಪರ್ಷಿಸಿ ಆನೆ ಮರಿ ಸಾವನ್ನಪ್ಪಿದೆ. ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಕಾಡಾನೆಗಳು ಈ ರೀತಿಯ ದುರಂತದಿಂದ ಸಾವನ್ನಪ್ಪುತ್ತಿವೆ.
ಮಳೆಗಾಲವಾದ ಹಿನ್ನೆಲೆ ವಿದ್ಯುತ್ ಆಘಾತ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗಿ ಆನೆ ಮರಿ ಸಾವನ್ನಪ್ಪಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.