
ಬಾಗಲಕೋಟೆ(ಜು.18): ಯಡಿಯೂರಪ್ಪನವರನ್ನ ಏಳಿಸೋದು, ಬೀಳಿಸೋದು ಅವರ ಪಕ್ಷದವರಿಗೆ ಬಿಟ್ಟಿದ್ದು. ಶಾಸಕರು ಹೇಳ್ತಿದ್ದಾರೆ, ಶಾಸಕರು ಹೇಳಿದ್ದು ಸರಿಯಿಲ್ಲ ಅಂತ ಅವರ ಪಕ್ಷದವರು ಹೇಳ್ತಿಲ್ಲ. ಇತ್ತ ಅವರ ಹೈಕಮಾಂಡ್ ಕೂಡ ಹೇಳ್ತಿಲ್ಲ. ಇದರರ್ಥ ನಾವು ಏನಂತ ತಿಳಿದುಕೊಳ್ಳಬೇಕು. ಹೀಗಾಗಿ ಯಡಿಯೂರಪ್ಪ ಚೇರ್ ಉಳಿಯುತ್ತೋ ಬೀಳುತ್ತೋ ಅವರಿಗೆ ಗೊತ್ತು ನನಗೆ ಗೊತ್ತಿಲ್ಲ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬದಲಾವಣೆ ವಿಚಾರದ ಬಗ್ಗೆ ಇಂದು(ಭಾನುವಾರ) ಜಿಲ್ಲೆಯ ಬನಹಟ್ಟಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಅವರ ಪಕ್ಷದ ವಿಚಾರ ನನಗೆ ಬೇಡ ಕೇಳಬೇಡಿ. ಒಂದು ವಾರದಲ್ಲಿ ಸಭೆ ಕರೆದಿದ್ದಾರೆ. ಕ್ಯಾಬಿನೆಟ್ ಕರೆದಿಲ್ಲಾ, ಅಸೆಂಬ್ಲಿ ಕರೆದು ಚರ್ಚೆಯಾಗಿಲ್ಲ. ಇವರ ಉದ್ದೇಶವಾದ್ರೂ ಏನು?. ಅವರು ಪಾರ್ಲಿಮೆಂಟ್ ಫಿಕ್ಸ್ ಮಾಡಿದ್ದಾರೆ, ನಾವು ಅಸೆಂಬ್ಲಿ ಮಾಡಿಲ್ಲ ಅಂತ ಪ್ರಶ್ನಿಸಿದ್ದಾರೆ. ಹೀಗಾಗಿ ನನಗೇನು ಗೊತ್ತಿಲ್ಲ, ನೀವೇ ನೋಡಿ ಎಂದ ತಿಳಿಸಿದ್ದಾರೆ. ಒಂದು ವಾರದಲ್ಲಿ ಬಿಜೆಪಿಯವರು ಸಭೆ ಕರೆದಿದ್ದಾರೆ. ಏನಾಗುತ್ತೋ ಕಾಯ್ದು ನೋಡಿ ಅಂತ ಡಿಕೆಶಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಡಿಕೆಶಿ ಕಾರ್ಯಕ್ರಮದಲ್ಲಿ ಕಟೌಟ್ ರಾಜಕಾರಣ: ಸಿದ್ದು ಅಭಿಮಾನಿಗಳು ಗರಂ ಆಗಿದ್ದೇಕೆ..?
ಕಾಂಗ್ರೆಸ್ ಸಿಎಂ ಸ್ಥಾನ ಆಕಾಂಕ್ಷಿ ವಿಚಾರ ಮದುವೆಗೆ ಮುಂಚೆಯೇ ಮಕ್ಕಳಂತೆ ಎಂದಿದ್ದ ಡಿಸಿಎಂ ಗೋವಿಂದ ಕಾರಜೋಳ ಹೇಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅವರಿಗೂ ಗೊತ್ತಿದೆಯಾ, ಮಗು ಆಗುತ್ತೇ ಅಂತ. ಅಂದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಬರುತ್ತೇ ಅಂದಂಗಾಯ್ತು, ಹಾಗಾದ್ರೆ ಈ ಮೂಲಕ ನಾವು ಗೆಲ್ಲೋದು ನಿಶ್ಚಿತ ಅಂತ ಅವರೇ ಹೇಳಿದ್ದಾರೆ. ಬಹಳ ಸಂತೋಷ, ಹಾಗಾಗಿ ಡಿಸಿಎಂ ಕಾರಜೋಳ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಕಾರಜೋಳಗೆ ಟಾಂಗ್ ಕೊಟ್ಟಿದ್ದಾರೆ.