ಸಕ್ರೆಬೈಲು ಆನೆಗಳ ಮೇಲೆ ಕಾಡಾನೆಗಳ ಪುಂಡಾಟ ಇತ್ತೀಚಿನ ದಿನಗಳಲ್ಲಿ ಜೋರಾಗಿದ್ದು, ಇದೀಗ ಇಲ್ಲಿನ ಆನೆ ಮಣಿಕಮಠನ ಮೇಲೆ ಕಾಡಾನೆಯೊಂದು ದಾಳಿ ನಡೆಸಿದೆ.
ಶಿವಮೊಗ್ಗ (ಮಾ.02): ಬಿಡಾರದ ಆನೆ ಮಣಿಕಂಠನ ಮೇಲೆ ಕಾಡಾನೆ ದಾಳಿ ನಡೆಸಿದೆ. ಈ ಘಟನೆಯಲ್ಲಿ ಆನೆ ಮಣಿಕಂಠ ಪ್ರಾಣಾಪಾಯದಿಂದ ಬಚಾವ್ ಆಗಿದೆ.
ಶಿವಮೊಗ್ಗದ ಶೆಟ್ಟಿಹಳ್ಳಿ ಆಭಯಾರಣ್ಯದಲ್ಲಿ ಕಾಡಾನೆ ದಾಳಿ ನಡೆಸಿದೆ. ಮಸ್ತಿಯಲ್ಲಿದ್ದ ಮಣಿಕಂಠ ಮಾವುತನ ಮೇಲೆ ಎರಗಿ ಇತ್ತೀಚೆಗೆ ಸುದ್ದಿಯಾಗಿತ್ತು. ಮಣಿಕಂಠ ಆನೆಯನ್ನು ಮದವೇರಿದ ಕಾರಣ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಬಿಡಲಾಗಿತ್ತು. ಸರಪಳಿಯಲ್ಲಿ ಬಂಧಿಯಾಗಿರುವ ಮಣಿಕಂಠ ಆನೆ ಮೇಲೆ ಈಗ ಕಾಡಾನೆ ದಾಳಿ ನಡೆಸಿದೆ.
ಆನೆಗಳನ್ನು ಬಳಸಿ ಹುಲಿ ಕಾರ್ಯಾಚರಣೆ ನಡೆಸುವ ರೋಚಕ ಸಾಹಸವಿದು..! .
ದೇಹದ ಭಾಗಕ್ಕೆ ಬಲವಾಗಿ ತಿವಿದಿದ್ದು, ಗಂಭೀರ ಗಾಯಗೊಂಡಿರುವ ಆನೆ ಮಣಿಕಂಠಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ಮಣಿಕಂಠ ಆನೆ ಮೇಲೆ ಇದು ಎರಡನೇ ಬಾರಿ ಕಾಡಾನೆಯ ದಾಳಿಯಾಗಿದ್ದು, ಇತ್ತೀಚೆಗೆ ಸಕ್ರೆಬೈಲು ಬಿಡಾರದ ಆನೆಗಳ ಮೇಲೆ ಮಾರಾಣಾಂತಿಕವಾಗಿ ಕಾಡಾನೆಗಳ ದಾಳಿ ಜೋರಾಗಿದೆ.
ಮೂರು ಕಾಡಾನೆಗಳು ಶೆಟ್ಟಿಹಳ್ಳಿ ಕಾಡಿನಲ್ಲಿ ಬೀಡುಬಿಟ್ಟಿವೆ.