Wild Animal attack: ಕಾಡುಪ್ರಾಣಿಗಳ ದಾಳಿ: ಮೆಕ್ಕೆಜೋಳ ಬೆಳೆ ನಾಶ

Published : Feb 24, 2023, 11:45 AM IST
Wild Animal attack: ಕಾಡುಪ್ರಾಣಿಗಳ ದಾಳಿ: ಮೆಕ್ಕೆಜೋಳ ಬೆಳೆ ನಾಶ

ಸಾರಾಂಶ

ತಾಲೂಕಿನ ಅಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಹಟ್ಟಿಹೊರವಲಯದಲ್ಲಿರುವ ರೈತ ಮಹಿಳೆ ಬೋರಮ್ಮ ಎಂಬವರಿಗೆ ಸೇರಿದ 2 ಎಕರೆ ಹೊಲದಲ್ಲಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳದ ಬೆಳೆಯನ್ನು ಇತ್ತೀಚೆಗೆ ಕಾಡುಪ್ರಾಣಿಗಳು ನಾಶಪಡಿಸಿವೆ.

ಕೂಡ್ಲಿಗಿ (ಫೆ.24) : ತಾಲೂಕಿನ ಅಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಹಟ್ಟಿಹೊರವಲಯದಲ್ಲಿರುವ ರೈತ ಮಹಿಳೆ ಬೋರಮ್ಮ ಎಂಬವರಿಗೆ ಸೇರಿದ 2 ಎಕರೆ ಹೊಲದಲ್ಲಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳದ ಬೆಳೆಯನ್ನು ಇತ್ತೀಚೆಗೆ ಕಾಡುಪ್ರಾಣಿಗಳು ನಾಶಪಡಿಸಿವೆ.

ಅಂದಾಜು .30 ಸಾವಿರ ಖರ್ಜು ಮಾಡಿ ಬಿತ್ತನೆ ಬೀಜ, ಗೊಬ್ಬರ, ಬೇಸಾಯ ಮಾಡಿ ಮೆಕ್ಕೆಜೋಳದ ಬೆಳೆ ಬೆಳೆದಿದ್ದ ರೈತ ಮಹಿಳೆ ಬೋರಮ್ಮ(woman farmer Boramma) ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ತೀರ್ಥಹಳ್ಳಿ: ಕುರು​ವ​ಳ್ಳಿ​ ಬಳಿ ಕಾಡಾನೆ ಹಾವಳಿ- ಆತಂಕ

ಕಾಡುಪ್ರಾಣಿ(Wildlife)ಗಳಿಂದ ಬೆಳೆ ಸಂಪೂರ್ಣ ನಾಶವಾಗಿರುವುದರಿಂದ ಬೋರಮ್ಮ ಅವರಿಗೆ ದಿಕ್ಕು ತೋಚದಂತಾಗಿದೆ. ಕಾಡುಪ್ರಾಣಿಗಳಿಂದ ಮೆಕ್ಕೆಜೋಳ(Maize)ದ ಬೆಳೆ ಸಂಪೂರ್ಣ ನಾಶವಾಗಿರುವುದರಿಂದ ಅರಣ್ಯ ಇಲಾಖೆಯವರು ಪರಿಹಾರ ನೀಡಬೇಕು ಎನ್ನುವುದು ರೈತ ಮಹಿಳೆ ಬೋರಮ್ಮ ಅವರ ಪುತ್ರ ದೇವರಹಟ್ಟಿಯ ಮಹಾಂತೇಶ ಆಗ್ರಹವಾಗಿದೆ.

ರೈತರ ಜಮೀನಿನ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ವಿದ್ಯುತ್‌ ನೀಡುವುದಿಲ್ಲವಾದ್ದರಿಂದ ರೈತರು ಬೆಳೆಗಳಿಗೆ ನೀರು ಹಾಯಿಸಲು ರಾತ್ರಿ ಹೊತ್ತು ಬರಬೇಕಾದ ಅನಿವಾರ್ಯತೆಯಿದೆ. ರಾತ್ರಿ ವೇಳೆ ಕಾಡು ಪ್ರಾಣಿಗಳಾದ ಕರಡಿ, ಹಂದಿ, ಚಿರತೆಗಳ ಉಪಟಳ ಇರುವುದರಿಂದ ಜೀವಭಯ ಈ ಭಾಗದ ರೈತರಲ್ಲಿ ಇದೆ ಎನ್ನುವುದು ಅನ್ನದಾತರ ಅಳಲು. ಸಂಬಂಧಿಸಿದ ಅಧಿಕಾರಿಗಳು ಹಗಲು ಹೊತ್ತಿನಲ್ಲಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ನೀಡಲಿ ಎಂದು ಆಗ್ರಹಿಸಿದ್ದಾರೆ.

ಹಂದಿ ಹಾವಳಿಯಿಂದ ಬೆಳೆನಾಶ; ಹಂದಿಗಳನ್ನು ನಿಯಂತ್ರಿಸಿ, ಇಲ್ಲ ವಿಷ ಕೊಡಿ ಎಂದು ರೈತರ ಆಕ್ರೋಶ

ಗುಡೇಕೋಟೆಯಲ್ಲಿ ಕರಡಿಧಾಮ ಇದೆ. ಹೀಗಾಗಿ ಕರಡಿ ಸೇರಿ ನಾನಾ ಕಾಡುಪ್ರಾಣಿಗಳಿಂದ ರೈತರ ಬೆಳೆಗಳು ನಷ್ಟವಾದರೆ ಅಂಥ ರೈತರಿಗೆ ಪರಿಹಾರ ನೀಡಲಾಗುವುದು.

ಎ. ರೇಣುಕಾ, ಆರ್‌ಎಫ್‌ಒ, ಗುಡೇಕೋಟೆ ಕರಡಿಧಾಮ ವಲಯ, ಕೂಡ್ಲಿಗಿ ತಾಲೂಕು

 

PREV
Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!