* ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ವೈ.ಟಿ.ಹೊನ್ನತ್ತಿ ಗ್ರಾಮದಲ್ಲಿ ನಡೆದ ಘಟನೆ
* ಚನ್ನಬಸಪ್ಪ ಯಲಿಗಾರ ಹಾಗೂ ಪತ್ನಿ ಗಂಗಮ್ಮ ಯಲಿಗಾರ ಸಾವಿನಲ್ಲೂ ಒಂದಾದ ದಂಪತಿ
* ಭಾನುವಾರ ಸಂಜೆ ಗ್ರಾಮದಲ್ಲಿ ನೆರವೇರಿದ ಮೃತರ ಅಂತ್ಯಕ್ರಿಯೆ
ರಾಣೆಬೆನ್ನೂರು(ಜೂ.14): ಪತಿ ಹಾಗೂ ಪತ್ನಿ ಸಾವಿನಲ್ಲೂ ಒಂದಾದ ಘಟನೆ ತಾಲೂಕಿನ ವೈ.ಟಿ.ಹೊನ್ನತ್ತಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಚನ್ನಬಸಪ್ಪ ಯಲಿಗಾರ (64) ಹಾಗೂ ಪತ್ನಿ ಗಂಗಮ್ಮ ಯಲಿಗಾರ (58) ಸಾವಿನಲ್ಲೂ ಒಂದಾದ ದಂಪತಿ. ಪತಿ ಚೆನ್ನಬಸಪ್ಪ ಯಲಿಗಾರ ಬೆಳಗ್ಗೆ ದಿಂದ ಮೃತಪಟ್ಟರೆ, ಪತಿಯ ಸಾವಿನ ವಿಷಯ ತಿಳಿದ ಪತ್ನಿ ಗಂಗಮ್ಮ ಯಲಿಗಾರ ಅವರು ಸಹ ಎರಡು ಗಂಟೆಯ ನಂತರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬೆಳೆವಿಮೆ ಕಂತು ಕಟ್ಟಿ ಯೊಜನೆಯಲ್ಲಿ ಪಾಲ್ಗೊಳ್ಳುವಂತೆ ಉದಾಸಿ ಮನವಿ
ಮೃತರ ಅಂತ್ಯಕ್ರಿಯೆ ಭಾನುವಾರ ಸಂಜೆ ಗ್ರಾಮದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರಿಗೆ ಪುತ್ರ, ಮೂವರು ಪುತ್ರಿಯರು ಇದ್ದಾರೆ.