ಫಸ್ಟ್ ನೈಟ್ ದಿನವೇ ಗಂಡನಿಂದಾಯ್ತು ಮಹಾ ಯಡವಟ್ಟು : ಅರೆಸ್ಟ್ ಆದ ಪತಿರಾಯ

Kannadaprabha News   | Asianet News
Published : Dec 03, 2020, 12:26 PM ISTUpdated : Dec 03, 2020, 12:46 PM IST
ಫಸ್ಟ್ ನೈಟ್ ದಿನವೇ ಗಂಡನಿಂದಾಯ್ತು ಮಹಾ ಯಡವಟ್ಟು : ಅರೆಸ್ಟ್ ಆದ  ಪತಿರಾಯ

ಸಾರಾಂಶ

ಮೊದಲ ರಾತ್ರಿ ದಿನವೇ ದಂಪತಿ ನಡುವೆ ಮಹಾ ಯಡವಟ್ಟಾಗಿದ್ದು ಇದರಿಂದ ಆಕೆ ಕೊಟ್ಟ ದೂರಿನ ಅಡಿಯನ್ನು ಆತನನ್ನು ಅರೆಸ್ಟ್ ಮಾಡಲಾಗಿದೆ

ಬೆಂಗಳೂರು (ಡಿ.03):  ಫಸ್ಟ್ ನೈಟ್ ನಲ್ಲಿಯೇ  ಗಂಡ ಫುಲ್ ಟೈಟ್ ಆಗಿದ್ದು ಮದುವೆಯಾದ ಹೊಸತರಲ್ಲೇ ದಂಪತಿ ನಡುವೆ ಕಿರಿಕ್ ಶುರುವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಹೆಚ್ ಎ ಎಲ್ ಠಾಣಾ ವ್ಯಾಪ್ತಿಯ ಎಲ್ ಬಿಎಸ್ ನಗರದಲ್ಲಿ ನಡೆದ ಘಟನೆ ನಡೆದಿದ್ದು ಪತ್ನಿ ಮೇಲೆ ಹಲ್ಲೆ ಮಾಡಿದ ಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.  ಪತ್ನಿಗೆ ಕಿರುಕುಳ ಕೊಟ್ಟ ಆರೋಪದಡಿ ಭರತ್ ಎಂಬಾತನನ್ನು ಬಂಧಿಸಲಾಗಿದೆ. 

ಒಂದು ತಿಂಗಳ ಹಿಂದೆ ಗುರು ಹಿರಿಯರು ನಿಶ್ಚಯಿಸಿದಂತೆ ವಿವಾಹ ಮಹೋತ್ಸವ ನೆರವೇರಿತ್ತು.   29/10/2020ರಂದು ವಿವಾಹ  ನಡೆದಿದ್ದು ವಿವಾಹದ ಬಳಿಕ ಫಸ್ಟ್ ನೈಟ್ ವೇಳೆ ಭರತ್ ಕುಡಿದು ಬಂದಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ. 

ಕೇರಳ - ಮದುವೆಗೆ ಹೆಲಿಕಾಪ್ಟರ್‌ನಲ್ಲಿ ಎಂಟ್ರಿ ಕೊಟ್ಟ ಮಧುಮಗಳು! ...

ಈ ವೇಳೆ ಆತನ ಜೊತೆ ಇರಲು ಯುವತಿ ನಿರಾಕರಿಸಿದ್ದು,  ಮತ್ತೆ ಮರುದಿನ ಸಹ ಶೋಭನ ಮಾಡಲು ಹೋದ ವೇಳೆ ಸಹ ಮತ್ತೆ ಕುಡಿದು ಬಂದಿದ್ದಾನೆ.   ಇದರಿಂದ ಆಕೆ ಆತನನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ಈ ವಿಚಾರ ಮನೆಯವರಿಗೆ ತಿಳಿದಿದ್ದು ಭರತ್ ಪೋಷಕರು ಯುವತಿಗೆ ಹಿಂಸೆ ನೀಡಿದ್ದಾರೆನ್ನಲಾಗಿದೆ. 

ಮಿಲನದ ಬಳಿಕ ಹೀಗ್ ಮಾಡದಿದ್ದರೆ ಕಾಡುತ್ತೆ ಅನಾರೋಗ್ಯ! ..

ಮಾಟಮಂತ್ರ ಮಾಡಿ ಚಿತ್ರ ಹಿಂಸೆ ನೀಡಿದ್ದಾಗಿ ಆರೋಪಿಸಿದ್ದು , ಜೊತೆಗೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಅತ್ತೆ ಮಾವನು ಇದಕ್ಕೆ ಕೈ ಜೋಡಿಸಿದ್ದಾರೆ ಎಂದು ಯುವತಿ ದೂರಿದ್ದಾಳೆ. 
 
ಇನ್ನು ಈ ಹಿಂದೆ ಆತನಿಗೆ ಇನ್ನೊಂದು ಮದುವೆಯಾಗಿತ್ತು. ಇದನ್ನೂ ಕೂಡ ನಮಗೆ ತಿಳಿಸದೇ ವಂಚಿಸಿದ್ದಾರೆ ಎಂದು ಎಚ್‌ಎಎಲ್ ಠಾಣೆಯಲ್ಲಿ ದೂರು ನೀಡಲಾಗಿದೆ.  

ನವೆಂಬರ್ 29/11/2020ರಂದು ಭರತ್ ವಿರುದ್ಧ ದೂರು ನೀಡಿದ್ದು ಎಚ್‌ಎಎಲ್ ಪೊಲೀಸರು ಭರತ್‌ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. 

PREV
click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!