* ಉಪ ನೋಂದಣಿ ಕಚೇರಿ ಪತ್ರದಲ್ಲಿ ಮಾತ್ರ ಕನ್ನಡ ಕಡೆಗಣನೆ
* ತಪ್ಪಾಗಿ ಮುದ್ರಿಸುವ ಮೂಲಕ ಕನ್ನಡದ ಕಗ್ಗೊಲೆ
* ಕನ್ನಡ ಉಳಿವಿಗೆ ಕಟ್ಟುನಿಟ್ಟಿನ ಕ್ರಮ ಅನುಸರಿಬೇಕು
ಸಿದ್ದಲಿಂಗ ಕಿಣಗಿ
ಸಿಂದಗಿ(ಮಾ.04): ಅನ್ಯ ಭಾಷೆಗಳ ನಡುವೆ ಕನ್ನಡ(Kannada) ಉಳಿವಿಗಾಗಿ ನಾವು ನಿರಂತರ ಹೋರಾಟ ಮಾಡುತ್ತಾ ಇದ್ದೇವೆ. ಸರ್ಕಾರ ಕೂಡ ಕನ್ನಡ ಉಳಿವಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬಂದಿದೆ. ದಿನ ನಿತ್ಯ ಜೀವನದಲ್ಲಿ ಕನ್ನಡ ಬಳಸಿ, ಉಳಿಸಿ ಎಂದು ಎಲ್ಲೆಡೆ ಹೇಳಲಾಗುತ್ತಿದೆ. ಆದರೆ, ತಾಲೂಕಿನ ಉಪ ನೋಂದಣಿ ಕಚೇರಿ(Sub Registrar Office) ಪತ್ರದಲ್ಲಿ ಮಾತ್ರ ಕನ್ನಡ ಕಡೆಗಣನೆ ಮಾಡಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
undefined
ಹೌದು, ಸಿಂದಗಿಯ(Sindagi) ಉಪ ನೋಂದಣಿ ಇಲಾಖೆ ಆಸ್ತಿ ಹೊಂದಿದವರಿಗೆ ನೀಡುತ್ತಿರುವ ಋುಣಭಾರ ಪ್ರಮಾಣ (ಇಸಿ) ಪತ್ರದಲ್ಲಿ ಕರ್ನಾಟಕ ಸರ್ಕಾರ(Government of Karnataka) ಎಂದು ಬರೆಯುವ ಬದಲು ಕನಾಟಕ ಸಕಾರ, ಸಿಂದಗಿ ಪದವನ್ನು ಸಿಧಗಿ, ಸಂಖ್ಯೆ ಪದವನ್ನು ಸಖ್ಯೆ, ವರ್ಷ ಪದವನ್ನು ವಷ, ಸಂಬಂಧದಲ್ಲಿ ಪದವನ್ನು ಸಭದದಲ್ಲಿ, ಅರ್ಜಿ ಪದವನ್ನು ಅಜಿ, ನಿರ್ವಹಣೆ ಪದವನ್ನು ನಿವಹಣ, ಸಂಪುಟ ಪದವನ್ನು ಸುಪುಟ, ದಸ್ತಾವೇಜು ಪದವನ್ನು ದಸ್ತವೆಜ್, ಬ್ಯಾಂಕ್ ಬದಲಾಗಿ ಬ್ಯಾಕ ಎಂದು ತಪ್ಪಾಗಿ ಮುದ್ರಿಸುವ ಮೂಲಕ ಕನ್ನಡದ ಕಗ್ಗೊಲೆ ಮಾಡಿದೆ. ಕನ್ನಡ ನಾಡಿನ ಸರ್ಕಾರಿ ಕಚೇರಿಯಲ್ಲೇ ಈ ರೀತಿ ಆದರೆ ಕನ್ನಡ ಉಳಿಯುವುದು ಹೇಗೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.
Akkamahadevi Womens University: ವಿಜಯಪುರದ ಮಹಿಳಾ ವಿವಿ ಮುಚ್ಚುತ್ತಿದೆಯಾ?
ಸುಮಾರು 24ಕ್ಕೂ ಹೆಚ್ಚು ಪದಗಳನ್ನು ತಮ್ಮ ನಿರ್ಲಕ್ಷ್ಯದಿಂದ ನಿತ್ಯವು ತಪ್ಪಾಗಿ ಮುದ್ರಿಸಿ ಅರ್ಜಿ ಸಲ್ಲಿಸಿದವರಿಗೆ ನೀಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ರೈತರು(Farmers) ತಂದರು ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಮಾತ್ರವಲ್ಲ, ಅದನ್ನು ಸರಿಪಡಿಸುವ ಗೋಜಿಗೂ ಹೋಗಿಲ್ಲ. ಸರ್ಕಾರದ ಅಧಿಕಾರಿಗಳೇ ಹೀಗೆ ನಡೆದುಕೊಂಡರೆ ಹೇಗೆ ಎಂದು ಸಾರ್ವಜನಿಕರೇ ಪ್ರಶ್ನೆ ಮಾಡುತ್ತಿದ್ದಾರೆ.
ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಕನ್ನಡದ ಕನ್ನಡದ ಸ್ಥಿತಿ ತೀರಾ ಚಿಂತಾಜನಕವಾಗಲಿದೆ. ಸದ್ಯ ಕನ್ನಡವನ್ನು ನಾವೆಲ್ಲ ಒತ್ತಾಯಪೂರ್ವಕವಾಗಿ ಉಳಿಸುವ ಪ್ರಯತ್ನ ಮಾಡುತ್ತಿರುವುದೇ ಖೇದಕರ ಸಂಗತಿ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳ ಈ ಕನ್ನಡ ವಿರೋಧಿ ನೀತಿ ಕನ್ನಡಿಗರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ. ಇಂತಹ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕನ್ನಡ ಉಳಿವಿಗೆ ಕಟ್ಟುನಿಟ್ಟಿನ ಕ್ರಮ ಅನುಸರಿಬೇಕು ಎಂಬುವುದು ಜನರ ಒತ್ತಾಯವಾಗಿದೆ.
ಕನ್ನಡ ಭಾಷೆ ನಮ್ಮ ಜೀವದ ಭಾಷೆ. ಅದನ್ನು ಉಳಿಸಿ ಬೆಳೆಸುವ ಕಾರ್ಯ ನಾವೇ ಮಾಡಬೇಕು. ಆದರೆ ಸಿಂದಗಿ ಉಪ ನೋಂದಣಿ ಇಲಾಖೆ ನೀಡುವ ಋುಣಭಾರ ಪ್ರಮಾಣ ಪತ್ರದಲ್ಲಿ ಕೆಲವು ಕನ್ನಡದ ಪದಗಳನ್ನು ತಪ್ಪಾಗಿ ಮುದ್ರಿಸಿದೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಕಂಪ್ಯೂಟರ್ ಆಪರೇಟರ್‌ಗಳನ್ನು(Computer Operators) ಕರೆದು ಪ್ರಮಾದ ತಿದ್ದಿಕೊಳ್ಳಲು ಸೂಚಿಸುತ್ತೇನೆ ಅಂತ ಸಿಂದಗಿ ತಹಸೀಲ್ದಾರ್ ನಿಂಗಣ್ಣ ಬಿರಾದಾರ ತಿಳಿಸಿದ್ದಾರೆ.
ಕನ್ನಡ ಭಾಷೆಯ ಪದಗಳು ತಪ್ಪಾಗಿವೆ. ಇದು ತಾಂತ್ರಿಕ ದೋಷವಾಗಿದೆ(Technical Error). ಅದನ್ನು ಕೂಡಲೇ ಸರಿಪಡಿಸುವ ಕಾರ್ಯ ಮಾಡುತ್ತೇವೆ. ಮುಂಬರುವ ದಿನಗಳಲ್ಲಿ ಋುಣಭಾರ ಪ್ರಮಾಣ ಪತ್ರಗಳನ್ನು ಶುದ್ಧ ರೀತಿಯಲ್ಲಿ ನೀಡುವ ವ್ಯವಸ್ಥೆ ಮಾಡುತ್ತೇವೆ ಅಂತ ಸಿಂದಗಿ ಉಪ ನೊಂದಣಿ ಅಧಿಕಾರಿ ಎಂ.ಆರ್.ಪಾಟೀಲ ಹೇಳಿದ್ದಾರೆ.
Russia-Ukraine: ಉಕ್ರೇನ್‌ನಿಂದ ವಿಜಯಪುರಕ್ಕೆ ಆಗಮಿಸಿದ ವಿದ್ಯಾರ್ಥಿನಿ: ಪೋಷಕರಲ್ಲಿ ಸಂಭ್ರಮ
ಕನ್ನಡವನ್ನು ರಕ್ಷಣೆ ಮಾಡುವ ಅಧಿಕಾರಿಗಳಿಂದಲೇ ಕನ್ನಡ ಹಾಳಾಗುತ್ತಿದೆ. ವಿದ್ಯಾವಂತರಾಗಿರುವ ಅವರುಗಳು ಕನ್ನಡವನ್ನು ಬಳಸುವ ರೀತಿ ನೋಡಿದರೆ ಅಸಹ್ಯವಾಗುತ್ತದೆ. ಪ್ರಮಾದ ಕೂಡಲೇ ಸರಿಪಡಿಸಬೇಕು. ಇಲ್ಲವಾದಲ್ಲಿ ಕನ್ನಡಪರ ಸಂಘಟನೆಗಳಿಂದ ಹೋರಾಟ ಮಾಡಲಾಗುವುದು ಅಂತ ಸಿಂದಗಿ ಕನ್ನಡಪರ ಹೋರಾಟಗಾರ ಶ್ರೀಶೈಲ ಮುಳಜಿ ತಿಳಿಸಿದ್ದಾರೆ.
ಕನ್ನಡ ಭಾಷೆಗೆ ಅದರೆ ಆದ ಸಾಮರ್ಥ್ಯವಿದೆ. ಭಾಷೆಯ ಬೆಳವಣಿಗೆಗೆ ಎಲ್ಲರೂ ಮುಂದಾಗಬೇಕು. ಇಲಾಖೆ ತಾಂತ್ರಿಕ ದೋಷದಿಂದ ಮಾಡಿದ ತಪ್ಪುವನ್ನು ಕೂಡಲೇ ಪರಿಹರಿಸಬೇಕು. ಕನ್ನಡ ಜಾಗೃತಿಗೆ ಸದಾ ಕಂಕಣ ಬದ್ಧವಾಗಬೇಕು ಅಂತಾರೆ ಸಿಂದಗಿ ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ ಹೇಳಿದ್ದಾರೆ.