*ಜಾಂಬವಂತ ಕಾಲೋನಿಗೆ ಭೇಟಿ ನೀಡಿದ ವಿದ್ಯಾರಣ್ಯ ಭಾರತೀ ಸ್ವಾಮೀಜಿ
*ಶ್ರೀಗಳ ಸ್ವಾಗತಕ್ಕಾಗಿ ಪ್ರತಿ ಮನೆ ಮುಂದೆ ರಂಗೋಲಿಯಿಂದ ಅಲಂಕಾರ
ಧಾರವಾಡ (ಮಾ. 04): ಜಾತ್ಯತೀತ ಸಮಾಜ ನಿರ್ಮಾಣ, ನಾವೆಲ್ಲರೂ ಒಂದೇ ಎಂಬ ಭಾವೈಕ್ಯದ ಸಂಕೇತವಾಗಿ ಹಂಪಿ ವಿದ್ಯಾರಣ್ಯ ಸಂಸ್ಥಾನದ ಜಗದ್ಗುರು ಶಂಕರಾಚಾರ್ಯ ಪೀಠದ ವಿದ್ಯಾರಣ್ಯ ಭಾರತೀ ಶ್ರೀಗಳು ( Vidyaranya Bharati Swamiji) ಇಲ್ಲಿನ ದಲಿತರ ಜಾಂಬವಂತ ಕಾಲೋನಿಗೆ ಗುರುವಾರ ಭೇಟಿ ನೀಡಿ, ಭಾವೈಕ್ಯದ ಜ್ಯೋತಿ ಬೆಳಗಿದರು.ಶ್ರೀಗಳ ಸ್ವಾಗತಕ್ಕಾಗಿ ಜಾಂಬವಂತ ಕಾಲೋನಿಯ ಪ್ರತಿ ಮನೆ ಮುಂದೆ ರಂಗೋಲಿಯಿಂದ ಅಲಂಕಾರಗೊಳಿಸಲಾಗಿತ್ತು. ಪ್ರಮುಖ ಓಣಿಯ ವೃತ್ತಗಳಲ್ಲಿ ಕೇಸರಿ ಧ್ವಜಗಳನ್ನು ಕಟ್ಟಲಾಗಿತ್ತು. ಅಲ್ಲದೇ ಪ್ರತಿಯೊಂದು ಓಣಿಗಳನ್ನು ಸ್ವಚ್ಛಗೊಳಿಸಿ ಅಲಂಕಾರ ಮಾಡಲಾಗಿತ್ತು. ಶ್ರೀಗಳು ಆಗಮಿಸುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು.
ಸ್ವಾಮೀಜಿಗಳು ಮುಖ್ಯರಸ್ತೆಯಿಂದ ದ್ಯಾಮವ್ವ ಗುಡಿವರೆಗೆ ಪಾದಯಾತ್ರೆ ಮೂಲಕ ತೆರಳಿದರು. ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಸ್ವಾಮೀಜಿ ಜಾಂಬವಂತ ನಗರ ಮನೆಗಳಿಗೆ ತೆರಳಿ ದೇವರ ಗದ್ದುಗೆಯಲ್ಲಿ ಭಾವೈಕ್ಯದ ಸಂಕೇತವಾಗಿ ದೀಪ ಹಚ್ಚಿದರು.
ಇದನ್ನೂ ಓದಿ: ಹಂಸಲೇಖ ಟೀಕೆ ಬೆನ್ನಲ್ಲೇ ದಲಿತರ ಕೇರಿಗೆ ಪೇಜಾವರ ಶ್ರೀ, ಪಾದಪೂಜೆ
ಮೇಲು-ಕೀಳು ತೊಡೆದು ಹಾಕಲು ಹಾಗೂ ಸರ್ವೇ ಜನಾ ಸುಖಿನೋ ಭವಂತು ತತ್ವದಡಿಯಲ್ಲಿ ಈಗಾಗಲೇ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಈ ವಿಶಿಷ್ಟಕಾರ್ಯಕ್ರಮ ಅಡಿಪಾಯ ಹಾಕಿ ಸ್ವಾಮೀಜಿ ಯಶಸ್ವಿಯಾಗಿದ್ದಾರೆ. ಅದರಂತೆ ಕರ್ನಾಟಕದಲ್ಲೂ ಈ ಪರ್ವ ಆರಂಭಿಸಿದ್ದಾರೆ ಎಂದು ತಾಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ ಆರ್.ಡಿ. ಕುಲಕರ್ಣಿ ತಿಳಿಸಿದರು. ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಹಲವರು ಈ ಸಂದರ್ಭಕ್ಕೆ ಸಾಕ್ಷಿಯಾದರು.
ಇಂದು ಧಾರವಾಡದ ಜಾಂಬವಂತ ನಗರದ ಪರಿಶಿಷ್ಟ ಕಾಲೋನಿ ಪ್ರದೇಶಗಳಿಗೆ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾರಣ್ಯ ಭಾರತಿ ಗುರೂಜಿ (ಹಂಪಿ ಗುರುಪೀಠ) ಇವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀಮತಿ ಜ್ಯೋತಿ ಪಾಟೀಲ್, ಶ್ರೀ ನಾರಾಯಣ ನಾರಕ್ಕನವರ್, ಶ್ರೀ ಚಿಂತನ್ನ ಸಾಗಬಾಲ್, ಶ್ರೀ ರಾಮಚಂದ್ರ ಪೋದಡ್ಡಿ ಹಾಗೂ ಸ್ಥಳೀಯರು ಇದ್ದರು pic.twitter.com/YrQZuCykaQ
ಬೆಂಗ್ಳೂರಲ್ಲಿ ದಲಿತರ ಬೃಹತ್ ರ‍್ಯಾಲಿ: ಗಣರಾಜ್ಯೋತ್ಸವ ಆಚರಣೆ ದಿನದಂದು ಡಾ. ಅಂಬೇಡ್ಕರ್(Dr BR Ambedkar) ಭಾವಚಿತ್ರ ತೆಗೆಯಿಸಿದ ರಾಯಚೂರು(Raichur) ಜಿಲ್ಲಾ ನ್ಯಾ.ಮಲ್ಲಿಕಾರ್ಜುನ ಗೌಡ ಪಾಟೀಲ ಅವರನ್ನು ಸೇವೆಯಿಂದ ವಜಾಗೊಳಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಶನಿವಾರ (ಫೆ. 19) ನೂರಾರು ದಲಿತಪರ ಸಂಘಟನೆಗಳ(Pro-Dalit Organizations) ಮುಖಂಡರು ‘ವಿಧಾನಸೌಧ-ಹೈಕೋರ್ಟ್ ಚಲೋ’ ಪ್ರತಿಭಟನಾ ರ‍್ಯಾಲಿ(Rally) ನಡೆಸಿದರು.
‘ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ’ದಿಂದ ನಡೆದ ನಡೆದ ಬೃಹತ್ ರ‍್ಯಾಲಿಯ ನೇತೃತ್ವವನ್ನು ಮೈಸೂರು ಉರಿಲಿಂಗ ಪೆದ್ದಿ ಮಹಾಸಂಸ್ಥಾನ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ವಹಿಸಿದ್ದರು. ರ‍್ಯಾಲಿಯು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನವರೆಗೆ ಸಾಗಿತು. ನೂರಾರು ದಲಿತ ಸಂಘಟನೆಗಳ ಮುಖಂಡರು, ವಿವಿಧ ಜಿಲ್ಲೆಗಳಿಂದ ಬಂದಿದ್ದ ಸುಮಾರು 50 ಸಾವಿರಕ್ಕೂ ಅಧಿಕ ಕಾರ್ಯಕರ್ತರು(Activists) ರಾರಯಲಿಯಲ್ಲಿ ಪಾಲ್ಗೊಂಡಿದ್ದರು.
ಖೋಡೆ ವೃತ್ತ, ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಮಾರ್ಗವಾಗಿ ಸಾಗಿದ ಪ್ರತಿಭಟನಾಕಾರರ(Protest) ಗುಂಪು ಸ್ವಾತಂತ್ರ್ಯ ಉದ್ಯಾನಕ್ಕೆ ಸಮೀಪಿಸುತ್ತಿದ್ದಂತೆ ಪೊಲೀಸರು ವಿಧಾನಸೌಧದತ್ತ ಹೋಗದಂತೆ ತಡೆದರು. ನಂತರ ಪೊಲೀಸರೊಂದಿಗೆ(Police) ವಾಗ್ವಾದಕ್ಕಿಳಿದ ದಲಿತ ಮುಖಂಡರು, ಮುಖ್ಯಮಂತ್ರಿಗಳು ಸ್ಥಳಕ್ಕೆ ಆಗಮಿಸಿ ಬೇಡಿಕೆಗೆ ಸ್ಪಂದಿಸುವಂತೆ ಆಗ್ರಹಿಸಿದರು. ರಸ್ತೆಯುದ್ದಕ್ಕೂ ನಾಮಫಲಕ ಹಿಡಿದು ಕುಳಿತ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.