Malai Mahadeshwara Sanctuary ಹುಲಿಸಂರಕ್ಷಿತ ಪ್ರದೇಶವನ್ನಾಗಿಸಲು ಸರ್ಕಾರದ ಮೀನಾಮೇಷ?

By Suvarna News  |  First Published May 9, 2022, 3:43 PM IST

ಚಾಮರಾಜಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮದಲ್ಲಿ ಹುಲಿ ಸಂತತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು,  ಹುಲಿಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಮೀನಾ ಮೇಷ ಏಣಿಸುತ್ತಿದ್ಯಾ ಸರ್ಕಾರ ಎಂಬ ಪ್ರಶ್ನೆ ಎದ್ದಿದೆ.


ವರದಿ - ಪುಟ್ಟರಾಜು. ಆರ್.ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್

ಚಾಮರಾಜನಗರ (ಮೇ.9): ದೇಶದಲ್ಲಿ ಒಂದೂ ಹುಲಿಗಳಿಲ್ಲದ ಅಥವಾ ಬೆರಳೆಣಿಕೆಯಷ್ಟು ಹುಲಿಗಳು (Tiger) ಇರುವ ಅರಣ್ಯಗಳು ಹುಲಿ ಸಂರಕ್ಷಿತ ಪ್ರದೇಶಗಳಾಗಿವೆ. ಆದರೆ ಈ ಅರಣ್ಯದಲ್ಲಿ  25ಕ್ಕೂ ಹೆಚ್ಚು ಹುಲಿಗಳಿವೆ. ಹುಲಿ ಸಂತತಿ ವೃದ್ಧಿಯಾಗತೊಡಗಿದೆ. ಹಾಗಿದ್ದರೂ ರಾಜ್ಯ ಸರ್ಕಾರ ಆ ಅರಣ್ಯವನ್ನು ಹುಲಿ ಹುಲಿಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಮೀನಾ ಮೇಷ ಏಣಿಸುತ್ತಿದೆ.

Tap to resize

Latest Videos

undefined

ಚಾಮರಾಜಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮ (Malai Mahadeshwara Wildlife Sanctuary )ದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗತೊಡಗಿದೆ. ಪ್ರಸ್ತುತ  25 ರಿಂದ 30 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಈ  ವನ್ಯಧಾಮದಲ್ಲಿ ಹುಲಿಗಳ ಸಂತತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಈ ಅರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಮಾಡುವ  ಪ್ರಸ್ತಾವನೆಗೆ  ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಈ ಹಿಂದೆಯೇ ಹಸಿರು ನಿಶಾನೆ ತೋರಿತ್ತು.  ಆದರೆ ರಾಜ್ಯ ಸರ್ಕಾರ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಹಿಂದೇಟು ಹಾಕುತ್ತಿದೆ. 

ಕಳೆದ ಮಾರ್ಚ್ ನಲ್ಲಿ ನಡೆದಿದ್ದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ   ಕೆಲ ಸಚಿವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ  ನೆನಗುದಿಗೆ ಬಿತ್ತು ಎಂದು ಹೇಳಲಾಗುತ್ತಿದೆ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿಸಂರಕ್ಷಿತ ಪ್ರದೇಶವನ್ನಾಗಿ ಮಾಡುವುದರಿಂದ ಬೆಟ್ಟಕ್ಕೆ ಬರುವ ಭಕ್ತರಿಗೆ ತೊಂದರೆಯಾಗಲಿದೆ, ಕಟ್ಟು ನಿಟ್ಟಿನ ಸಂರಕ್ಷಣಾ ಕ್ರಮಗಳಿಂದ  ಸ್ಥಳೀಯ ಜನರಿಗೆ ತೊಂದರೆಯಾಗಲಿದೆ, ಅಷ್ಟೇ ಅಲ್ಲದೆ ಮಲೆಮಹದೇಶ್ವರ ಬೆಟ್ಟದ ಅಭಿವೃದ್ದಿಗೂ ತೊಡಕಾಗಲಿದೆ ಎಂದು ಕೆಲಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮುಖ್ಯಮಂತ್ರಿ ಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

BALLARI ಮಟ್ಕಾ ದಂಧೆಕೋರರ ನಿದ್ದೆಗೆಡಿಸಿದೆ ಗಡಿಪಾರು ಅಸ್ತ್ರ
 
ಹಿಂದುಳಿದ ಜಿಲ್ಲೆ ಎಂಬ ಅಪಖ್ಯಾತಿ ಪಡೆದು ಕೊಂಡಿರುವ ಚಾಮರಾಜನಗರ ಜಿಲ್ಲೆ ವನ್ಯಜೀವಿಗಳ ಅಚ್ಚು ಮೆಚ್ಚಿನ ಅವಾಸ ತಾಣವಾಗಿ ಮಾರ್ಪಡುತ್ತಿದೆ. ಈಗಾಗ್ಲೇ ಜಿಲ್ಲೆಯಲ್ಲಿ ಬಂಡೀಪುರ ಮತ್ತು ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶಗಳಿವೆ. 3ನೇಯದಾಗಿ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಹುಲಿ ಸಂರಕ್ಷಿತ ಪ್ರದೇಶವಾಗಿ ಕೆಲವೇ ದಿನಗಳಲ್ಲಿ ಪದೋನ್ನತಿ ಪಡೆಯಲಿದೆ. ಪೂರ್ವ ಮತ್ತು ಪಶ್ಚಿಮ ಘಟ್ಟಗಳಲ್ಲಿ ಬಂಡೀಪುರ, ಬಿಳಿಗಿರಿ ರಂಗನಾಥ ಬೆಟ್ಟ, ಮಲೆ ಮಹದೇಶ್ವರ ವನ್ಯಜೀವಿ ಮತ್ತು ಕಾವೇರಿ ವನ್ಯಜೀವಿ ವಿಭಾಗ ಬರಲಿವೆ. ಬಂಡೀಪುರದಿಂದ ವಲಸೆ ಹೋಗುತ್ತಿರುವ ಹುಲಿಗಳು ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶ, ಅಲ್ಲಿಂದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದತ್ತ ಹರಡಲಾರಂಭಿಸಿವೆ.

ಹೀಗಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇತ್ತೀಚೆಗೆ ನಡೆದ ಹುಲಿ ಅಂದಾಜು ಗಣತಿಯಲ್ಲಿ 30 ರಿಂದ 35 ಹುಲಿಗಳು ಇರುವುದು ಪತ್ತೆಯಾಗಿದೆ. ಸುಮಾರು 1 ಸಾವಿರ ಚದರ ಕಿಲೋಮೀಟರ್ ವಿಸ್ತಾರದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಕ್ಯಾಮಾರಾ ಟ್ರ್ಯಾಪ್ ಅಳವಡಿಕೆ ವೇಳೆ ಹುಲಿ, ಕಡವೆ, ಆನೆ, ಚಿರತೆ ಸೇರಿದಂತೆ ವಿವಿಧ ರೀತಿಯ ವನ್ಯಜೀವಿಗಳು ಇರುವುದು ಪತ್ತೆಯಾಗಿದೆ. ತನ್ನ ಸಂತತಿ ಹೆಚ್ಚಿಸಿ ಕೊಳ್ಳುತ್ತಿರುವ ಹುಲಿ ಸಂರಕ್ಷಣೆಗೆ ಹೆಚ್ಚಿನ ಆಧ್ಯತೆ ನೀಡ ಬೇಕಾದ ಅವಶ್ಯಕತೆ ಇರುವುದರಿಂದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದ ಮಲೆ ಮಹದೇಶ್ವರ ವನ್ಯಧಾಮ ಶೀಘ್ರಲ್ಲೇ ಹುಲಿಸಂರಕ್ಷಿತ ಪ್ರದೇಶವಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ಹೊಂದಿದ್ದಾರೆ. ಹುಲಿ ಸಂರಕ್ಷಿತ ಪ್ರದೇಶ  ಘೋಷಿಸುವುದರಿಂದ ಹತ್ತಾರು ಅನುಕೂಲಗಳಾಗಲಿವೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

Haveri ಕಟೀಲ್ ಗೆ ಕೆಪಿಸಿಸಿ ಕಾರ್ಯದ್ಯಕ್ಷ ಸಲೀಂ ಅಹ್ಮದ್ ವಾರ್ನಿಂಗ್
  
ಈಗಿರುವ  ವನ್ಯಜೀವಿ ಕಾನೂನುಗಳೇ ಹುಲಿಸಂರಕ್ಷಿತ ಪ್ರದೇಶವಾದ ಮೇಲು ಮುಂದುವರಿಯುತ್ತವೆ, ಜನರಿಗೆ ಹೆಚ್ಚೇನು ತೊಂದರೆಯಾಗುವುದಿಲ್ಲ, ಇತ್ತೀಚಿನ ವರ್ಷಗಳಲ್ಲಿ ಹುಲಿ ಸಂತತಿ ವೃದ್ಧಿಯಾಗುತ್ತಿದೆ, ಮಲೆಮಹದೇಶ್ವರ ಕೋಟ್ಯಂತರ ಭಕ್ತರ  ಆರಾಧ್ಯ ದೈವ, ಮಹದೇಶ್ವರರ ವಾಹನವೇ ಹುಲಿಯಾಗಿದೆ, ಹುಲಿಯ ಬಗ್ಗೆ ನಮ್ಮ ಜನರಲ್ಲಿ ಪೂಜ್ಯ ಭಾವನೆ ಇದೆ,  ಹಾಗಾಗಿ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿಸಂರಕ್ಷಿತ ಪ್ರದೇಶ  ಎಂದು ಘೋಷಿಸಿದರೆ ಅನ್ವರ್ಥವಾಗಿರುತ್ತದೆ" ಎಂಬುದು ಪರಿಸರವಾದಿಗಳ ಅಭಿಮತವಾಗಿದೆ.

ದೇಶದಲ್ಲಿ ಪ್ರಸ್ತುತ 53  ಹುಲಿ ಸಂರಕ್ಷಿತ ಪ್ರದೇಶಗಳಿದ್ದು  ಈ   ಪೈಕಿ ಕೆಲವು ಅರಣ್ಯಗಳಲ್ಲಿ  2018 ರ ಹುಲಿಗಣತಿ ಪ್ರಕಾರ ಕೆಲವು ಅರಣ್ಯಗಳಲ್ಲಿ  ಹುಲಿಗಳೇ ಇಲ್ಲ,  ಕೆಲವು ಅರಣ್ಯಗಳಲ್ಲಿ  ಹುಲಿಗಳ ಸಂಖ್ಯೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ  ಇದ್ದರೂ  ಅವು ಹುಲಿ ಸಂರಕ್ಷಿತ  ಪ್ರದೇಶಗಳಾಗಿವೆ. ಹೀಗೆ ಹುಲಿಗಳು ಕಡಿಮೆ ಸಂಖ್ಯೆಯಲ್ಲಿದ್ದರೂ ಅಥವಾ ಹುಲಿಗಳೇ ಇಲ್ಲದಿದ್ದರೂ ಈ ಅರಣ್ಯಪ್ರದೇಶಗಳನ್ನು   ಅರಣ್ಯ ಸಂರಕ್ಷಣೆ ಹಾಗು ಅಭಿವೃದ್ಧಿ ದೃಷ್ಟಿಯಿಂದ   ಆಯಾ ರಾಜ್ಯ ಸರ್ಕಾರಗಳು  ಹುಲಿ ಸಂರಕ್ಷಿತ ಪ್ರದೇಶಗಳೆಂದು ಘೋಷಿಸಿವೆ.  ಆದರೆ ಮಲೆ ಮಹದೇಶ‍್ವರ ವನ್ಯಧಾಮದಲ್ಲಿ 25 ರಿಂದ 30 ಹುಲಿಗಳಿದ್ದರೂ ರಾಜ್ಯ ಸರ್ಕಾರ  ಹಿಂದೆ ಮುಂದೆ ನೋಡುತ್ತಿದೆ.

click me!