ಕೊರೋನಾ ಹೆಚ್ತಿದ್ರೂ ಎಲೆಕ್ಷನ್‌​ ಏಕೆ ಮುಂದೂ​ಡ​ಲಿಲ್ಲ?: ಕುಮಾ​ರ​ಸ್ವಾಮಿ

By Kannadaprabha News  |  First Published Apr 13, 2021, 11:36 AM IST

ಸ​ರ್ಕಾ​ರದ ಬೇಜ​ವಾ​ಬ್ದಾರಿ ನಡ​ವ​ಳಿಕೆ| ಅವೈಜ್ಞಾನಿಕ ನಡವಳಿಕೆಯಿಂದ ಸೋಂಕು ಉಲ್ಬಣ| ಕಾಂಗ್ರೆಸ್‌ನಿಂದ ಪಕ್ಷಾಂತ​ರ​ವೆಂಬ ಕುತಂತ್ರ ರಾಜ​ಕಾರಣ| ರಾಮ​ನ​ಗರ ಕ್ಷೇತ್ರಕ್ಕೆ ದೇವೇ​ಗೌ​ಡರ ಕುಟುಂಬದ ಕೊಡುಗೆ ಹಾಗೂ ಜನ​ರೊಂದಿ​ಗಿನ ಬಾಂಧವ್ಯದ ಬಗ್ಗೆ ಮನ​ವ​ರಿಕೆ ಮಾಡಿ​ಕೊಡು​ತ್ತೇವೆ: ಕುಮಾರಸ್ವಾಮಿ| 


ರಾಮ​ನ​ಗರ(ಏ.13): ರಾಜ್ಯ​ದಲ್ಲಿ ಕೊರೋನಾ ಎರ​ಡನೇ ಅಲೆ ತೀವ್ರ​ಗ​ತಿ ಪಡೆ​ಯು​ತ್ತಿರುವ ಆ​ತಂ​ಕದ ಸಂದ​ರ್ಭ​ದಲ್ಲಿಯೂ ರಾಜ್ಯ ಸರ್ಕಾರ ಹಾಗೂ ಚುನಾ​ವಣಾ ಆಯೋಗ ಲೋಕ​ಸಭೆ, ವಿಧಾ​ನ​ಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾ​ವಣೆ ಏಕೆ ಮುಂದೂ​ಡ​ಲಿಲ್ಲ ಎಂದು ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಪ್ರಶ್ನಿ​ಸಿ​ದ್ದಾರೆ.

ಬಿಡದಿ ಸಮೀ​ಪದ ಕೇತ​ಗಾ​ನ​ಹಳ್ಳಿ ತೋಟದ ಮನೆ​ಯಲ್ಲಿ ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ನಗ​ರ​ಸಭೆ ಚುನಾ​ವಣೆ ಆಕಾಂಕ್ಷಿ​ಗಳ ಸಭೆಗೂ ಮುನ್ನ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ರಾಜ್ಯ​ ಸ​ರ್ಕಾ​ರದ ಬೇಜ​ವಾ​ಬ್ದಾರಿ ನಡ​ವ​ಳಿಕೆ ಹಾಗೂ ಅವೈ​ಜ್ಞಾ​ನಿಕ ಕ್ರಮ​ಗ​ಳಿಂದಾಗಿ ಕೊರೋನಾ ಸೋಂಕು ಉಲ್ಬ​ಣ​ಗೊ​ಳ್ಳಲು ಕಾರ​ಣ​ವೆಂದು ಟೀಕಿ​ಸಿ​ದರು. ರಾಜ್ಯ ಸರ್ಕಾರ ಕೊರೋನಾ ನಿಯಂತ್ರಿ​ಸುವ ನಿಟ್ಟಿ​ನಲ್ಲಿ ಹಲ​ವಾರು ನಿಯ​ಮ​ಗ​ಳನ್ನು ಜಾರಿಗೆ ತಂದಿದೆ. ಹೀಗಿ​ದ್ದರೂ ನಿಯ​ಮ​ಗ​ಳನ್ನು ಉಲ್ಲಂಘಿಸಿ ಲೋಕ​ಸಭೆ, ವಿಧಾ​ನ​ಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾ​ವ​ಣೆ​ ಪ್ರಚಾ​ರ​ದಲ್ಲಿ ಸಹ​ಸ್ರಾರು ಜನರು ಸೇರು​ತ್ತಿ​ದ್ದಾರೆ. ಇಂತಹ ಆತಂಕದ ಸಂದ​ರ್ಭ​ದಲ್ಲಿ ಚುನಾ​ವಣೆ ಏಕೆ ಘೋಷಣೆ ಮಾಡ​ಬೇ​ಕಾ​ಗಿತ್ತು ಎಂದು ಪ್ರಶ್ನೆ ಮಾಡಿ​ದ​ರು.

Tap to resize

Latest Videos

ಅನಿ​ತಾ ಕುಮಾರಸ್ವಾಮಿ ದೌರ್ಬ​ಲ್ಯ ಲಾಭ ಪಡೆದ ನಾಯ​ಕರು : ಉತ್ಸಾ​ಹ​ದಲ್ಲಿ ಕಮಲ ಪಾಳ​ಯ

ಸಿಎಂ ಕಾಲಾ​ವ​ಕಾಶ ಕೇಳಲಿ:

ಮುಷ್ಕರನಿರತ ಸಾರಿಗೆ ನೌಕ​ರರ ವಿಚಾ​ರ​ದಲ್ಲಿ ರಾಜ್ಯ ಸರ್ಕಾರ ಬಿಗಿ ಧೋರಣೆ ಅನು​ಸ​ರಿ​ಸು​ವುದು ಸರಿ​ಯಲ್ಲ. ಮುಖ್ಯ​ಮಂತ್ರಿ ಯಡಿ​ಯೂ​ರ​ಪ್ಪ​ರ​ವರು ನೌಕ​ರರ ಸಮಸ್ಯೆ ಬಗೆ​ಹ​ರಿ​ಸಲು ಸಾಧ್ಯ​ವಾ​ಗ​ದಿ​ದ್ದರೆ ಅವ​ರೊಂದಿಗೆ ಗೌರ​ವ​ಯು​ತ​ವಾಗಿ ಚರ್ಚಿಸಿ ಕಾಲಾ​ವ​ಕಾಶ ಕೇಳ​ಬೇಕು. ಮುಖ್ಯ​ಮಂತ್ರಿ​ಗಳು ಸಾರಿಗೆ ನೌಕ​ರ​ರೊಂದಿಗೆ ಚರ್ಚಿ​ಸುವ ಸೌಜ​ನ್ಯ​ವನ್ನು ತೋರದೆ ಕಾನೂ​ನಿನ ಮೂಲಕ ಹೆದ​ರಿ​ಸು​ತ್ತೇವೆ ಎನ್ನುವುದು ಸರಿ​ಯಲ್ಲ. ಈಗ ಯಾರು ಯಾವು​ದಕ್ಕೂ ಹೆದ​ರು​ವು​ದಿಲ್ಲ ಎಂಬು​ದನ್ನು ಮುಖ್ಯ​ಮಂತ್ರಿ​ಗಳು ಅರ್ಥ ಮಾಡಿ​ಕೊ​ಳ್ಳ​ಬೇಕು ಎಂದು ಹೇಳಿ​ದರು. ಶಾಸಕಿ ಅನಿತಾ ಕುಮಾ​ರ​ಸ್ವಾಮಿ, ಜೆಡಿ​ಎಸ್‌ ತಾಲೂಕು ಅಧ್ಯಕ್ಷ ರಾಜ​ಶೇ​ಖರ್‌, ಮುಖಂಡ​ರಾದ ಬಿ.ಉ​ಮೇಶ್‌ , ಸುಗ್ಗ​ನ​ಹಳ್ಳಿ ರಾಮ​ಕೃಷ್ಣ, ಮಹ​ದೇವು ಸೇರಿ​ದಂತೆ ಹಲ​ವ​ರು​ ಇ​ದ್ದ​ರು.

ಕಾಂಗ್ರೆಸ್‌ನಿಂದ ಪಕ್ಷಾಂತ​ರ​ವೆಂಬ ಕುತಂತ್ರ ರಾಜ​ಕಾರಣ

ರಾಮ​ನ​ಗ​ರ​ದಲ್ಲಿ ಜೆಡಿ​ಎಸ್‌ಗೆ ದೊಡ್ಡ ಮಟ್ಟ​ದಲ್ಲಿಯೇ ತೊಂದರೆ ನೀಡುವ ಸಲು​ವಾಗಿ ಗುಂಪೊಂದು ರಚ​ನೆ​ಯಾ​ಗಿದೆ. ಆ ಗುಂಪಿನ ನಾಯ​ಕರು ಜೆಡಿ​ಎಸ್‌ ಮುಖಂಡರು ಹಾಗೂ ಕಾರ್ಯ​ಕ​ರ್ತ​ರಿಗೆ ಆಸೆ ಆಮಿಷ​ಗ​ಳನ್ನು ತೋರಿಸಿ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿ​ಸು​ತ್ತಿ​ದ್ದಾರೆ ಎಂದು ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಆರೋ​ಪಿ​ಸಿ​ದ್ದಾರೆ.

'ಕುಮಾ​ರ​ಸ್ವಾಮಿ ನಮ್ಮನ್ನೇ ಏಕೆ ದ್ವೇಷಿ​ಸುತ್ತಾರೆ'

ಪಕ್ಷಾಂತ​ರದ ಹಿಂದೆ ಕುತಂತ್ರ ರಾಜ​ಕಾ​ರಣ ಇರು​ತ್ತದೆ. ಈಗ ಕಾಂಗ್ರೆಸ್‌ ನಾಯ​ಕರು ಕುತಂತ್ರ ರಾಜ​ಕಾ​ರ​ಣ​ದಲ್ಲಿ ತೋಡ​ಗಿ​ದ್ದಾರೆ. ಪ್ರತಿ​ನಿತ್ಯ ಆಸೆ ಆಮಿ​ಷ​ವೊಡ್ಡಿ ಪಕ್ಷಾಂತರ ಮಾಡು​ವ ಪ್ರಕ್ರಿಯೆ ನಡೆ​ಯು​ತ್ತಿದೆ. ಅದೆ​ಲ್ಲ​ವನ್ನು ನಾನು ಸೂಕ್ಷ್ಮ​ವಾಗಿ ಗಮ​ನಿ​ಸು​ತ್ತಿ​ದ್ದೇನೆ. ಈಗ ಪಕ್ಷಾಂತರ ಮಾಡಿ​ದ​ವ​ರಿಗೆ ನನ್ನಿಂದಾದ ಅನ್ಯಾಯ ಏನು?. ಅವ​ರೆ​ಲ್ಲರು ನನ್ನಿಂದ ಯಾವ ರೀತಿ ಬೆಳೆ​ದರು, ಏನೆಲ್ಲ ಅನು​ಕೂ​ಲ​ಗ​ಳನ್ನು ಪಡೆ​ದು​ಕೊಂಡರು. ನಮ್ಮಿಂದ ಎಲ್ಲ​ವನ್ನು ಪಡೆದು ಬೆನ್ನಿಗೆ ಚೂರಿ ಹಾಕಿ ಹೋಗು​ವ​ವ​ರನ್ನು ಜನರೂ ಗಮ​ನಿ​ಸು​ತ್ತಿ​ದ್ದಾರೆ. ಅವರ ಬಗ್ಗೆ ಜನರೇ ತೀರ್ಮಾ​ನಿ​ಸು​ತ್ತಾ​ರೆ ಎಂದು ಹೇಳಿ​ದ್ದಾರೆ. 

ರಾಮ​ನ​ಗ​ರದ ಸಮಗ್ರ ಅಭಿ​ವೃ​ದ್ಧಿಗೆ ಜಾತಿ ಬೇಧ ಮರೆತು ಕೆಲಸ ಮಾಡಿ​ದ್ದೇನೆ. ಎಂದೂ ದ್ರೋಹ ಬಗೆ​ಯುವ ಕೆಲಸ ಮಾಡಿಲ್ಲ. ರಾಮ​ನ​ಗರ ಕ್ಷೇತ್ರಕ್ಕೆ ದೇವೇ​ಗೌ​ಡರ ಕುಟುಂಬದ ಕೊಡುಗೆ ಹಾಗೂ ಜನ​ರೊಂದಿ​ಗಿನ ಬಾಂಧವ್ಯದ ಬಗ್ಗೆ ಮನ​ವ​ರಿಕೆ ಮಾಡಿ​ಕೊಡು​ತ್ತೇವೆ. ಆ ಮೂಲಕ ನಗ​ರ​ಸ​ಭೆಯಲ್ಲಿ ಅಧಿ​ಕಾರ ಹಿಡಿ​ಯಲು ಶ್ರಮಿ​ಸು​ತ್ತೇವೆ ಎಂದು ಕುಮಾ​ರಸ್ವಾಮಿ ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದ್ದಾರೆ.
 

click me!