ಶಹಾಪುರ: ಹಿರಿಯ ರಂಗಕರ್ಮಿ ಎಲ್ಬಿಕೆ ಆಲ್ದಾಳ ಇನ್ನಿಲ್ಲ

By Kannadaprabha News  |  First Published Apr 13, 2021, 10:54 AM IST

ಎಲ್ಬಿಕೆ ಆಲ್ದಾಳ ಎಂದೇ ಹೆಸರುವಾಸಿಯಾಗಿದ್ದ ಲಾಲ್‌ ಮಹ್ಮದ್‌ ಬಂದೇನವಾಜ್‌ ಖಲೀಫ್‌| ಕರ್ನಾಟಕ ರಾಜ್ಯೋತ್ಸವ, ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದ ಎಲ್ಬಿಕೆ ಅಲ್ದಾಳ| ಸಾಮಾಜಿಕ ನಾಟಕ ಸೇರಿ 125ಕ್ಕೂ ಹೆಚ್ಚು ಕೃತಿ ರಚಿಸಿದ್ದ ಹಿರಿಯ ರಂಗಕರ್ಮಿ| 


ಶಹಾಪುರ(ಏ.13): ಹಿರಿಯ ರಂಗಕರ್ಮಿ ಲಾಲ್‌ ಮಹ್ಮದ್‌ ಬಂದೇನವಾಜ್‌ ಖಲೀಫ್‌ (85) ಸೋಮವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ. 

ಎಲ್ಬಿಕೆ ಆಲ್ದಾಳ ಎಂದೇ ಹೆಸರುವಾಸಿಯಾಗಿದ್ದ ಇವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಇಂದು(ಮಂಗಳವಾರ) ಜೇವರ್ಗಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

Tap to resize

Latest Videos

undefined

ಯಾದಗಿರಿ: ಬಸ್‌ಗೆ ಕಾಯುವ ವೇಳೆ ಲಾರಿ ಹಾಯ್ದು ತಾಯಿ, ಮಗು ಸಾವು

ಎಲ್ಬಿಕೆ ಅಲ್ದಾಳ ಅವರು ಕರ್ನಾಟಕ ರಾಜ್ಯೋತ್ಸವ, ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಶಹಾಪುರ ತಾಲೂಕಿನ ಅನೇಕ ಶರಣರ, ಸೂಫಿ ಸಂತರ ಜೀವನ ಕುರಿತು ಹಾಗೂ ಪೌರಾಣಿಕ, ಧಾರ್ಮಿಕ, ಸಾಮಾಜಿಕ ನಾಟಕ ಸೇರಿ 125ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
 

click me!