
ಕಲಬುರಗಿ(ಫೆ.04): ಮುಖ್ಯಮಂತ್ರಿ ಸಿದ್ದರಾಮಯ್ಯ ಯಾಕೆ ಕುಂಕುಮ ಹಚ್ಚಲ್ಲ ಎಂದು ಶನಿವಾರ ಸುದ್ದಿಗಾರರು ಪ್ರಶ್ನಿಸಿದಾಗ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದು, ಸಿಎಂ ಕುಂಕುಮ ಹಚ್ಚಿಕೊಳ್ಳಲ್ಲ ಅಂತ ಯಾರು ಹೇಳಿದ್ದು? ಎಂದು ಮರು ಪ್ರಶ್ನಿಸಿದರು.
ಶುಕ್ರವಾರ ದೇಗುಲವೊಂದಕ್ಕೆ ಭೇಟಿ ನೀಡಿದ್ದ ವೇಳೆ ಅರ್ಚಕರು ತಿಲಕವಿಡಲು ಮುಂದಾದಾಗ ಸಿದ್ದರಾಮಯ್ಯ ನಿರಾಕರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶಿವಕುಮಾರ್, ‘ಸಿಎಂ ಹೆಣ್ಣುಮಕ್ಕಳ ರೀತಿ ಹಣೆ ಮೇಲೆ ಇಷ್ಟಗಲ ಇಟ್ಟುಕೊಳ್ಳೋಕೆ ಆಗುತ್ತಾ ಎಂದು ಪ್ರಶ್ನಿಸಿದರು.
ಕುಂಕುಮದ ಬದಲು ಸಿದ್ದರಾಮಯ್ಯಗೆ ಟೋಪಿ ಹಾಕಿ: ಶಾಸಕ ಬೆಲ್ಲದ ವ್ಯಂಗ್ಯ
ಕೆಲವರಿಗೆ ಅಲರ್ಜಿ ಇರುತ್ತದೆ. ಅವರಿಗೂ ಬಹುಶಃ ಅಲರ್ಜಿ ಇರಬಹುದು. ನಾನು ಯಾವತ್ತೂ ಸುಗಂಧ ರಾಜ ಹೂ ಮುಟ್ಟುವುದಿಲ್ಲ. ಸುಗಂಧರಾಜ ಹೂ ಎಂದರೆ ನನಗೆ ಅಲರ್ಜಿ. ನನಗೆ ಯಾರೂ ಸುಗಂಧರಾಜ ಹೂವು ಇರುವ ಹಾರ ಹಾಕಬೇಡಿ ಎಂದು ಪತ್ರದಲ್ಲೇ ಬರೆದಿದ್ದೇನೆ ಎಂದರು.