ರೇಣುಕಾಸ್ವಾಮಿ ಕೊಲೆ ಕೇಸ್‌: ದರ್ಶನ್ ನೋಡಲು ಜೈಲಿಗೆ ಎಂಟ್ರಿ ಕೊಟ್ಟ ಆ ಮಹಿಳೆ ಯಾರು..?

By Girish Goudar  |  First Published Jul 3, 2024, 9:18 AM IST

ನಟ ದರ್ಶನ್‌ನನ್ನ ನೋಡಲು ಮಹಿಳೆ ನಿನ್ನೆ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದರು. ಜೈಲಿನ ಎಂಟ್ರಿ ಬುಕ್‌ನಲ್ಲಿ ಸಮತ ಎನ್ನುವ ಮಹಿಳೆಯ ಹೆಸರು ಉಲ್ಲೇಖವಾಗಿದೆ. ಎಂಟ್ರಿ ಹಾಕಿಸಿ ಜೈಲಲ್ಲಿ ದರ್ಶನ್‌ನನ್ನ ಸಮತ ಭೇಟಿ ಮಾಡಿದ್ದಾರೆ. 
 


ಬೆಂಗಳೂರು(ಜು.03):  ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ನನ್ನ ನೋಡಲು ಮಹಿಳೆಯೊಬ್ಬರು ಬಂದು ಹೋಗಿದ್ದಾರೆ. ಜೈಲಿಗೆ ಎಂಟ್ರಿ ಹಾಕಿದ ಆ ಮಹಿಳೆ ಯಾರು..?. ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ‌ ಆ ಮಹಿಳೆಯ ಎಕ್ಸ್ ಕ್ಲುಸೀವ್ ಮಾಹಿತಿ ಲಭ್ಯವಾಗಿದೆ. 

Latest Videos

undefined

ನಟ ದರ್ಶನ್‌ನನ್ನ ನೋಡಲು ಮಹಿಳೆ ನಿನ್ನೆ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದರು. ಜೈಲಿನ ಎಂಟ್ರಿ ಬುಕ್‌ನಲ್ಲಿ ಸಮತ ಎನ್ನುವ ಮಹಿಳೆಯ ಹೆಸರು ಉಲ್ಲೇಖವಾಗಿದೆ. ಎಂಟ್ರಿ ಹಾಕಿಸಿ ಜೈಲಲ್ಲಿ ದರ್ಶನ್‌ನನ್ನ ಸಮತ ಭೇಟಿ ಮಾಡಿದ್ದಾರೆ. 

ರೇಣುಕಾಸ್ವಾಮಿ ಕೊಲೆ ಕೇಸ್‌: ನೋಡಲು ಬಂದ ತಾಯಿ ಕಂಡು ದರ್ಶನ್‌ ಕಣ್ಣೀರು..!

ಹಾಗಾದ್ರೆ ಈ ಸಮತಾ ಯಾರು?

ಜೈಲಿನಲ್ಲಿ ದರ್ಶನ್ ಭೇಟಿ ಮಾಡುವ ಈಕೆಯ ಉದ್ದೇಶವಾದ್ರು ಏನು..?. ಪ್ರಕರಣದ ಎ1 ಆರೋಪಿಯಾಗಿರೊ ಪವಿತ್ರಗೌಡಳ ಆಪ್ತ ಗೆಳತಿಯಾಗಿದ್ದಾರೆ ಸಮತ. ಪವಿತ್ರಗೌಡ ಹಾಗೂ ಸಮತ ಒಂದೇ ಆತ್ಮ ಎರಡು ದೇಹದಂತಿದ್ದಾರೆ ಎಂದು ತಿಳಿದು ಬಂದಿದೆ. 

ಇದೀಗ ಸಮತ ಜೈಲಿನಲ್ಲಿ ದರ್ಶನ್ ಭೇಟಿಯಾಗಿರುವುದರಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕುಟುಂಬದಿಂದ ಆಕ್ಷೇಪ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.  ಕುಟುಂಬದ ಕಲಹ ಸರಿಹೋಗುವ ಹೊತ್ತಿನಲ್ಲಿ ಈಕೆ ಯಾಕೆ ಜೈಲಿಗೆ ಹೋಗಿದ್ದು ಅಂತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪವಿತ್ರಗೌಡ ಗೆಳತಿಯಾಗಿದ್ರೆ ಆಕೆಯನ್ನ ಮಾತ್ರ ನೋಡ್ಕೊಂಡ್ ಹೋಗಬೇಕಿತ್ತು. ಈಕೆಯ ಎಂಟ್ರಿಯಿಂದ ನಟ ಧನ್ವೀರ್ ಭೇಟಿ ಮಾಡಲು ಅವಕಾಶ ಸಿಕ್ಕಿಲ್ಲ. ದರ್ಶನ್ ಭೇಟಿ ಮಾಡಿರೋದು ಕುಟುಂಬದಲ್ಲಿ ಒಡುಕು ತರುವ ಕೆಲಸ ಅಂತಾ ವಿಜಯಲಕ್ಷ್ಮಿ ಕುಟುಂಬದಿಂದ ಪರೋಕ್ಷವಾಗಿ ಆಕ್ಷೇಪ ವ್ಯಕ್ತವಾಗಿದೆ. 

click me!