ಹುಮನಾಬಾದ್‌: ಬೇವಿನ ಮರದಲ್ಲಿ ಬಿಳಿ ದ್ರವ್ಯ, ನೋಡಲು ಮುಗಿಬಿದ್ದ ಜನ!

By Suvarna News  |  First Published Dec 27, 2019, 12:11 PM IST

ಬೇವಿನ ಮರದಿಂದ ಹೊರಬರುತ್ತಿರುವ ಹಾಲಿನ ರೂಪದ ದ್ರವ್ಯ| ಹುಮನಾಬಾದ್‌ ತಾಲೂಕಿನ ಹುಡಗಿ ಗ್ರಾಮದಲ್ಲಿ ನಡೆದ ಘಟನೆ| ಮರ ವೀಕ್ಷಣೆಗೆ ಜನರ ದಂಡು| ಇಲ್ಲಿಗೆ ಬರುವವರಿಗೆ ದಾಸೋಹದ ವ್ಯವಸ್ಥೆ|


ಹುಮನಾಬಾದ್‌(ಡಿ.27): ಜನ ಮರಳೋ, ಜಾತ್ರೆ ಮರಳೋ ಎನ್ನುವಂತೆ ವಿಸ್ಮಯಕಾರಿ ಘಟನೆ ಒಂದು ತಾಲೂಕಿನ ಹುಡಗಿ ಗ್ರಾಮದ ನಂದಗಾಂವ ರಸ್ತೆಯಲ್ಲಿರುವ ಬೇವಿನ ಮರದಿಂದ ಬಿಳಿ ಬಣ್ಣದ ದ್ರವ್ಯ ಸೋರುತ್ತಿರುವುದನ್ನು ನೋಡಲು ಜನರ ದಂಡು ಆಗಮಿಸುತ್ತಿದೆ.

ಗ್ರಾಮದ ನಂದಗಾಂವ ರಸ್ತೆಯಲ್ಲಿರುವ ಹಣಮಂತ ಯಲ್ಲಪ್ಪ ಭೋವಿ ಅವರ ಮನೆಯ ಮುಂದಿರುವ ಬೇವಿನ ಮರದಲ್ಲಿ ವಾರದಿಂದ ಹಾಲಿನ ರೂಪದ ದ್ರವ್ಯ ಸೋರುತ್ತಿರುವುದು ವಿವಿಧ ಮಾತಿಗೆ ವ್ಯಾಖ್ಯಾನ ನೀಡಲಾಗುತ್ತಿದೆ.
ಜನರ ಸಂಖ್ಯೆ ಹೆಚ್ಚಾದಂತೆ ತರಹ ತರಹದ ಮಾತುಗಳು ಕೇಳಿ ಬರುತ್ತಿದ್ದು ಕೆಲವರು ಇದು ದೈವಿ ಶಕ್ತಿ, ಇನ್ನು ಕೆಲವರು ಕಲಿಯುಗದ ಕಡೆಯ ಕಾಲ ಬರುತ್ತಿರುವ ಸೂಚನೆಯಾಗಿದೆ ಎನ್ನುವ ಮಾತುಗಳು ಜನರ ಬಾಯಿಂದ ಬರುತ್ತಿದೆ. ಬೇವಿನ ಮರಕ್ಕೆ ಪೂಜೆ ಪ್ರಾರಂಭವಾಗಿದೆ. ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಬರುವವರು ಉದಬತ್ತಿ, ಸಕ್ಕರೆ ತೆಗೆದುಕೊಂಡು ಮರಕ್ಕೆ ಹಚ್ಚಿ ಪೂಜೆ ಸಲ್ಲಿಸಿ ನಮಸ್ಕರಿಸುತ್ತಿದ್ದಾರೆ.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗುರುವಾರ ಸೂರ್ಯಗ್ರಹಣ ಮುಗಿಯುತ್ತಿದ್ದಂತೆ ಜನರ ಸಂಖ್ಯೆ ಹೆಚ್ಚಾಗಿದ್ದು, ಇಲ್ಲಿ ಬರುವ ಭಕ್ತರಿಗೆ ದಾಸೋಹ ವ್ಯವಸ್ಥೆ ಸಹ ಕೈಗೊಳ್ಳಲಾಗಿದೆ. ಇಲ್ಲಿಗೆ ಬರುವ ಜನರು ಗಿಡದಿಂದ ಸೋರುತ್ತಿರುವ ಹಾಲಿನ ರೂಪದ ದ್ರವ್ಯ ನಾಲಿಗೆಗೆ ಹಚ್ಚಿಕೊಂಡು ಸಿಹಿಯಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಕಂಡು ಬಂದಿತ್ತು. ಹೀಗಾಗಿ ಇಲ್ಲಿ ಜಾತ್ರೆಯಂತೆ ಕಂಡು ಬರುತ್ತಿದೆ.

ಭಕ್ತಿಯ ಪೂಜೆ:

ಒಂದು ವಾರದಿಂದ ಇಲ್ಲಿನ ಬೇವಿನ ಮರಕ್ಕೆ ಹಾಲಿನ ರೂಪದಲ್ಲಿ (ದ್ರವ್ಯ) ಸೋರುತ್ತಿರುವುದು ವಿಸ್ಮಯ ಮೂಡಿಸಿದೆ. ಈ ಬಗ್ಗೆ ಆರಂಭದಲ್ಲಿ ಯಾರು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಇದು ನಿರಂತರವಾಗಿ ನಡೆಯುತ್ತಿರುವುದರಿಂದ ಕಳೆದ ಎರಡು ದಿವಸಗಳ ಹಿಂದೆ ಸ್ಥಳೀಯ ಹಿರೇಮಠದ ವೀರೂಪಾಕ್ಷ ಶಿವಾಚಾರ್ಯರ ಗಮನಕ್ಕೆ ತರಲಾಗಿದ್ದು, ಅವರು ಸಹ ಇದು ದೈವಿ ಶಕ್ತಿಯಾಗಿದ್ದು, ಮರಕ್ಕೆ ಪೂಜಿಸುವಂತೆ ತಿಳಿಸಿದರಿಂದ ಪೂಜೆ ನೆರವೇರಿಸಲಾಗುತ್ತಿದೆ.
ಬೇವಿನ ಮರಕ್ಕೆ ಕೆಲವು ಸಲ ನೈಸರ್ಗಿಕ ಪ್ರಕ್ರಿಯೆ ಬದಲಾವಣೆಯಿಂದ ಹಾಲಿನ ಬಣ್ಣದ ದ್ರವ್ಯ ಸೋರುವುದು ಸಹಜವಾಗಿದೆ. ಈ ಹಿಂದೆ ಸಹ ಕೆಲವು ಕಡೆ ಇಂತಹ ಪ್ರಕ್ರಿಯೆಗಳು ಜರುಗಿವೆ ಎಂದು ಹುಮನಾಬಾದ್‌ ವಲಯ ಅರಣ್ಯಾಧಿಕಾರಿ ರಮೇಶ ಕನಕಟ್ಟಕರ್‌ ತಿಳಿಸಿದ್ದಾರೆ. 

ಸಾರ್ವಜನಿಕ ವಲಯದಲ್ಲಿ ಈ ಹಿಂದೆ ಗ್ರಾಮಗಳಲ್ಲಿ ಭಜನೆ, ಕಿರ್ತನೆ, ಧಾರ್ಮಿಕ ಸಣ್ಣ ಪುಟ್ಟಕಾರ್ಯಕ್ರಮಗಳು ನಡೆಯುತ್ತಿದ್ದವು. ಅವುಗಳು ಕ್ರಮೇಣ ಮರೆಯಾಗುತ್ತಿರುವ ಹಿನ್ನಲೆಯಲ್ಲಿ ಇಂತಹ ಘಟನೆಗಳು ಎದುರಾಗುತ್ತಿವೆ ಎಂದು ಬಡಾವಣೆಯ ನಿವಾಸಿ ಶಿವಕುಮಾರ ಹೇಳಿದ್ದಾರೆ. 
 

click me!