ಪ್ರಯಾಣಿಸುತ್ತಿದ್ದ ಕಾರಿಗೆ ಕೆಎಸ್‌ಆರ್‌ಟಿಸಿ ಬಸ್ ಹಿಂದಿನಿಂದ ಡಿಕ್ಕಿಯಾಗಿದ್ದು ಬಸ್ ಸಂಪೂರ್ಣ ಜಖಂ ಆಗಿದೆ.
ದಾವಣಗೆರೆ [ಡಿ.27] : ಶ್ರೀ ಮಹೇಶ ಶಿವಾಚಾರ್ಯ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಇನೋವಾ ಕಾರಿಗೆ KSRTC ಬಸ್ ಡಿಕ್ಕಿಯಾಗಿ ಅಪಘಾತವಾಗಿದೆ.
ದಾವಣಗೆರೆಯ ಬಾತಿ ಕೆರೆ ಸಮೀಪದಲ್ಲಿ ಅಪಘಾತವಾಗಿದ್ದು, ಅದೃಷ್ಟವಶಾತ್ ಯಾವುದೇ ರೀತಿ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಕಾರಿನ ಹಿಂಬಾಗ ಸಂಪೂರ್ಣ ಜಖಂ ಆಗಿದೆ.
ಬಳ್ಳಾರಿ ಜಿಲ್ಲೆ ಕೊಟ್ಟೂರಿನ ನುಗ್ಗೆಹಳ್ಳಿ ಅಯ್ಯನಹಳ್ಳಿ ಹಿರೇಮಠದ ಸ್ವಾಮೀಜಿಗಳಾದ ಮಹೇಶ ಸ್ವಾಮೀಜಿಗಳು ಬೆಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ವೇಳೆ ಅಪಘಾತವಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವೇಗವಾಗಿ ಬಂದ ಬಸ್ ನಿಯಂತ್ರಣ ಸಿಗದೇ ಸ್ವಾಮೀಜಿ ಇದ್ದ ಕಾರಿಗೆ ಡಿಕ್ಕಿಯಾಗಿದೆ.
ತಪೋವನದಲ್ಲಿರುವ ಶ್ರೀ ಶೈಲ ಜಗದ್ಗುರುಗಳ ದರ್ಶನಕ್ಕೆ ಹೊರಟಿದ್ದ ವೇಳೆ ಹಿಂದಿನಿಂದ ಕಾರಿಗೆ ಬಸ್ ಡಿಕ್ಕಿಯಾಗಿದೆ. ಈ ಸಂಬಂಧ ದಾವಣಗೆರೆ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.