ಮನಸ್ಸು ಚೆನ್ನಾಗಿ ಇದ್ದ ಕಡೆ ಹೊಸತನ ಕಾಣಲು ಸಾಧ್ಯ; ಸಚಿವ ಮಾಧುಸ್ವಾಮಿ

By Kannadaprabha News  |  First Published Nov 8, 2022, 1:07 PM IST
  • ಮನಸ್ಸು ಚೆನ್ನಾಗಿ ಇದ್ದ ಕಡೆ ಹೊಸತನ ಕಾಣಲು ಸಾಧ್ಯ
  • ರಾಷ್ಟ್ರೀಯ ನಾಟಕೋತ್ಸವದ ಆರನೇ ದಿನದ ಸಭಾ ಕಾರ್ಯಕ್ರಮದಲ್ಲಿ ಸಚಿವ ಮಾಧುಸ್ವಾಮಿ

ಹೊಸದುರ್ಗ (ನ.8) : ಎಲ್ಲಿ ಮನಸ್ಸು ಚೆನ್ನಾಗಿರುತ್ತದೆಯೋ ಅಲ್ಲಿ ಹೊಸತನ ಕಾಣಲು ಸಾಧ್ಯ. ಆಸೆ ಆಮಿಷಗಳಿಗೆ ಮನಸ್ಸುಗಳ ಬಲಿ ಕೊಡದೆ ಸಾಮಾಜಿಕ ಜವಾಬ್ದಾರಿಗಳ ಉತ್ತಮವಾಗಿ ನಿರ್ವಹಿಸುವಂತೆ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು.

 

Latest Videos

undefined

ಅಸ್ಪೃಶ್ಯತೆ ಇನ್ನೂ ಜೀವಂತವಿರುವುದು ನೋವಿನ ಸಂಗತಿ: ಪೂಜಾರಿ

ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ ಆರನೇ ದಿನದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರಳವಾಗಿ ಜೀವನ ನಡೆಸುವುದು ಸದಾ ಸಮಾಧಾನ ತರುತ್ತದೆ. ಮನುಷ್ಯತ್ವÜ ಉಳಿಯಬೇಕಾದರೆ ಮನುಷ್ಯ ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಬೇಕೆಂದರು.

ದೃಶ್ಯ ಮತ್ತು ಶ್ರವಣ ಎರಡನ್ನೂ ಜೋಡಿಸುವುದೇ ನಾಟಕ. ನಾಟಕ ಅಂದರೆ ಬಣ್ಣ ಹಚ್ಚುವುದಲ್ಲ. ಅದಕ್ಕೊಂದು ಆಳವಾದ ಅಧ್ಯಯನ ಹಾಗೂ ಕ್ರಿಯಾಶೀಲ ಮನೋಭಾವ ಬೇಕು. ಒಬ್ಬರ ಬದುಕನ್ನು ಅರ್ಥ ಮಾಡಿಕೊಂಡು ಮತ್ತೊಬ್ಬರಿಗೆ ತಿಳಿಸುವುದೇ ನಾಟಕ. ಕಲಾವಿದರ ಸ್ಥಿತಿಗತಿಗಳು ಬದಲಾದಂತೆ ನಾಯಕದ ಸ್ವರೂಪ ಕೂಡಾ ಬದಲಾಗಿದೆ. ಜನರನ್ನು ಸಂತೈಸುವ ಸಲುವಾಗಿ ನಾಟಕದ ಭಾಷೆಯೂ ಸ್ಥಿತ್ಯಂತರಗೊಂಡಿದೆ. ಕನ್ನಡ ಉಳಿಯಬೇಕಾದರೆ ಅದರ ಅಂಗ ಭಾಷೆಗಳು ಜೀವಂತವಾಗಿರಬೇಕು ಎಂದರು.

ಜಾನಪದ ರಂಗಭೂಮಿ ಕುರಿತು ಉಪನ್ಯಾಸ ನೀಡಿದ ಹಾಸನ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಚ್‌.ಎಲ್‌. ಮಲ್ಲೇಶಗೌಡ, ಜಗತ್ತೆ ಒಂದು ರಂಗಭೂಮಿ. ಭೂಮಿಯ ಮೇಲಿರುವ ಎಲ್ಲಾ ಜೀವಿಗಳೇ ಪಾತ್ರದಾರಿಗಳು. ಇವುಗಳನ್ನು ನಿಯಂತ್ರಿಸುವ ಸೂತ್ರದಾರಿ ಮೇಲಿದ್ದಾನೆ ಎನ್ನುವುದನ್ನು ಜಾನಪದರಲ್ಲಿ ಕಾಣುತ್ತೇವೆ. ಈ ಹಿನ್ನಲೆಯಲ್ಲಿ ಮನುಷ್ಯ ಭಾಷೆ ಕಲಿಯುವ ಮುನ್ನವೇ ಅಭಿನಯ ಕಲಿತಿದ್ದ ಎಂದರು.

ಜಗತ್ತಿನ ಎಲ್ಲಾ ರಂಗಭೂಮಿಯೂ ಕೂಡ ಕುಣಿತದಿಂದ ಪ್ರಾರಂಭವಾಗಿದೆ. ಗ್ರೀಕ್‌ ರಂಗಭೂಮಿಯೂ ಇದಕ್ಕೆ ಹೊರತಾಗಿಲ್ಲ. ಜನಪದ ರಂಗಭೂಮಿ ಮನುಷ್ಯನ ಬದುಕಿನ ಅಭಿನಯ, ಕುಣಿತದಲ್ಲಿದೆ. ಪ್ರಾರಂಭದಲ್ಲಿ ಕುಣಿತ ಧಾರ್ಮಿಕವಾಗಿತ್ತು. ಆಗ ಪಾತ್ರದಾರಿಗಳು ದೇವರಾಗಿದ್ದರು. ನಂತರದಲ್ಲಿ ಅದನ್ನು ಅಭಿನಯಿಸಲು ಮಾನವ ಹೆದರಿದ್ದರಿಂದ ಬಯಲಾಟ ಪ್ರಾರಂಭವಾಯಿñಯ. ನಂತರ ಮುಂದುವರೆದು ಆಧÜುನಿಕ ರಂಗಭೂಮಿ ರೂಪ ಪಡೆಯಿತು ಎಂದರು.

ಜಿಪಂ ಸಿಇಒ ಎಂ.ಎಸ್‌. ದಿವಾಕರ್‌ ಮಾತನಾಡಿ ಮಕ್ಕಳಿಗೆ ಉತ್ತಮವಾದ ಶಿಕ್ಷಣ, ಸಂಸ್ಕಾರ ಕೊಡುವ ಮೂಲಕ ಎಲ್ಲರ ಒಳಿತಿಗಾಗಿ ಬದುಕುವುದನ್ನು ಕಲಿಸಬೇಕು. ಉತ್ತಮ ಸಂಸ್ಕಾರ ಸಿಕ್ಕವರು ಮಾತ್ರ ಉತ್ತಮ ಪ್ರಜೆಯಾಗಲು ಸಾಧ್ಯಎಂದರು. ನಿಡಸೋಸಿಯಯ ದುರದುಂಡೇಶ್ವರಸಿದ್ದ ಸಂಸ್ಥಾನದ ಶಿವಲಿಂಗೇಶ್ವರಸ್ವಾಮೀಜಿ, ಪಂಡಿತಾರಾಧ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಜಗಳೂರು ಶಾಸಕ ಎಸ್‌.ವಿ ರಾಮಚಂದ್ರ, ಉಗ್ರಾಣ ನಿಗಮದ ಅಧ್ಯಕ್ಷ ಯುಬಿ ಬಣಕಾರ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಗುರುಸ್ವಾಮಿ ಇದ್ದರು.

ಸಾಣೇಹಳ್ಳಿ ನಾಟಕೋತ್ಸವದಲ್ಲಿ ಕಾಳಿದಾಸನ ದೃಶ್ಯ ಕಾವ್ಯ- ಮೇಘದೂತ ದರ್ಶನ

ಚಿತ್ರದುರ್ಗ ಜಿಪಂ ಸಿಇಓ ಎಂ ಎಸ್‌ ದಿವಾಕರ್‌, ಸಂಜಯ್‌ ತಹಶಿಲ್ದಾರ್‌ ಬೆಂಗಳೂರು ಹಾಗೂ ಡಾ. ಕೆ ಗಿರೀಶ್‌ ಕುಮಾರ್‌ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ನಂತರ ಕೆವಿ ಸುಬ್ಬಣ್ಣ ಅನುವಾದಿತ ವಿಶಾಖದತ್ತ ರಚನೆಯ ಬಿ ಆರ್‌ ವೆಂಕಟರಮಣ ಐತಾಳ್‌ ನಿರ್ದೇಶನದ ಚಾಣುಕ್ಯಪ್ರಪಂಚ ನಾಟಕವನ್ನು ಶಿವಮೊಗ್ಗದ ರಂಗಾಯಣದ ಕಲಾವಿದರು ಅಭಿನಯಿಸಿದರು.

click me!