ಬ್ರಾಹ್ಮಣರು ಮುಖ್ಯಮಂತ್ರಿಯಾದರೆ ತಪ್ಪೇನು?: ಸುಭುದೇಂದ್ರತೀರ್ಥ ಶ್ರೀ ಪ್ರಶ್ನೆ

By Sathish Kumar KH  |  First Published Feb 7, 2023, 6:36 PM IST

ಸಮುದಾಯಗಳಲ್ಲಿ ಅಶಾಂತಿ ಸೃಷ್ಠಿಸುವಂತ ಹೇಳಿಕೆ ಕೊಡಬಾರದು
ಬ್ರಾಹ್ಮಣ ಸಮುದಾಯ ಕೂಡ ಹಿಂದುಳಿದ ಸಮುದಾಯ
ಇಂತವರು ಆಗಬಾರದು ಎಂದು ಹೇಳೋದು ಸರಿಯಲ್ಲ


ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್‌ ಸುವರ್ಣನ್ಯೂಸ್

ಬಾಗಲಕೋಟೆ (ಫೆ.07): ದೇಶದಲ್ಲಿ ಇಂದು ಬ್ರಾಹ್ಮಣ ಸಮುದಾಯ ಹಿಂದುಳಿದ ಸಮುದಾಯವಾಗಿದೆ. ಹಿಂದುಳಿದ ಸಮುದಾಯದಿಂದ ಮುಖ್ಯಮಂತ್ರಿ ಆಗಬೇಕು ಅನ್ನೋದು ಸಂವಿಧಾನದ ಆಶಯವಾಗಿದೆ. ಬ್ರಾಹ್ಮಣ ಸಮುದಾಯದಿಂದ ಮುಖ್ಯಮಂತ್ರಿ ಆದರೆ ತಪ್ಪೇನಿಲ್ಲ ಎಂದು ಮಂತ್ರಾಲಯದ ಸುಭುದೇಂದ್ರತೀರ್ಥ ಶ್ರೀ ಹೇಳಿದ್ದಾರೆ. 

Tap to resize

Latest Videos

undefined

ಬಾಗಲಕೋಟೆ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಕೂಡ ಮಠದ ದೈವ ಭಕ್ತರು. ಮೊನ್ನೆಯಷ್ಟೆ ಕುಮಾರಸ್ವಾಮಿ ದಂಪತಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಅವರು ಯಾವತ್ತೂ ಕೂಡಾ ಬ್ರಾಹ್ಮಣರ ಬಗ್ಗೆ ಅವರು ಹಗುರವಾಗಿ ಮಾತನಾಡಿಲ್ಲ. ಮೊನ್ನೆ ಅವರು ಆ ರೀತಿ ಮಾತು ಆಡಿದ್ದಾರೆಂದರೆ ಯಾವ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ ಎಂದರು.

ಬ್ರಾಹ್ಮಣರು ಸಿಎಂ ಆಗಬಾರದಾ, ಅವರೂ ಈ ದೇಶದ ಪ್ರಜೆಗಳಲ್ಲವೇ?: ಪೇಜಾವರ ಶ್ರೀ

ಇನ್ನು ದೇಶದಲ್ಲಿ ಸಮುದಾಯಗಳಲ್ಲಿ ಅಶಾಂತಿ ಸೃಷ್ಠಿಸುವಂತ ಹೇಳಿಕೆ ಯಾರು ಕೊಡಬಾರದು. ಜಾತಿ ರಾಜಕಾರಣ ಎಲ್ಲಡೆ ತೊಲಗಬೇಕು. ಸಂವಿಧಾನದಲ್ಲಿ ಇಂತವರೇ ಸಿಎಂ ಆಗಬೇಕು ಅಂತಾ ಇಲ್ಲ. ನಮ್ಮೆಲ್ಲರಿಗೂ ದೇಶದಲ್ಲಿ ಸಂವಿಧಾನ ಅನ್ನೋದು ಬಹಳ ಮುಖ್ಯವಾದದ್ದಾಗಿದೆ. ಸಂವಿಧಾನ ಗೌರವಿಸುವವರು ಒಂದು ಸಮುದಾಯದ ಬಗ್ಗೆ ಮಾತನಾಡೋದು ಸರಿ ಅಲ್ಲ. ಬ್ರಾಹ್ಮಣ ಸಮುದಾಯ ಬೇರೆ ಯಾವುದೇ ಸಮುದಾಯಗಳಿಗೆ ನೋವು ನೀಡುವಂತದ್ದಲ್ಲ. ಬ್ರಾಹ್ಮಣ ಸಮುದಾಯದ ಬಗ್ಗೆ ಹೀಗೆ ಹೇಳಿದ್ದು ಸರಿಯಲ್ಲ. ಯಾವ ಸಮುದಾಯವನ್ನು ಯಾರು ತೆಗಳಬಾರದು. ಸಮುದಾಯ ತೆಗಳಿದರೆ ಸಂವಿಧಾನಕ್ಕೆ ಅಗೌರವುಂಟು ಮಾಡಿದಂತಾಗುತ್ತೇ. ಬ್ರಾಹ್ಮಣ ಸಮಾಜದ ಅರ್ಹರು ಸಮಾಜಮುಖಿ ಕಾರ್ಯ ಮಾಡ್ತಿದ್ದರೆ. ಅಂತವರು ಸಿಎಂ ಆಗಲು ಯಾವುದೇ ಅಡ್ಡಿಯೂ ಇಲ್ಲ.

ಸಿದ್ದರಾಮಯ್ಯ ಹೇಳಿಕೆ ಅರ್ಥವಿಲ್ಲದ್ದು:  ಮಾಜಿ ಸಿದ್ದರಾಮಯ್ಯ ಅವರ ನಾನು ಹಿಂದೂ ಆದರೆ ಹಿಂದುತ್ವ ಒಪ್ಪುವುದಿಲ್ಲ ಎಂಬ ದ್ವಂಧ್ವ  ಹೇಳಿಕೆಗೆ ಅರ್ಥವೇ ಇಲ್ಲ ಎಂದು ಮಂತ್ರಾಲಯದ ಸುಭುದೇಂದ್ರತೀರ್ಥ ಶ್ರೀಗಳು ಹೇಳಿದರು. ಹಿಂದುಗಳಲ್ಲಿ ಇರತಕ್ಕಂತದ್ದೇ ಹಿಂದುತ್ವ. ನಾನು ಹಿಂದೂ ಎಂದ ಮೇಲೆ ಹಿಂದುತ್ವದ ಬಗ್ಗೆ ಗೌರವ ತೋರಲೇಬೇಕು, ಆಧರಿಸಲೇಬೇಕಲ್ಲ ಎಂದರು. ಯಾವುದಾದರೂ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದ್ದರೆ ವಿಚಾರ ವಿನಿಮಯ ಮಾಡಿ ಬಗೆಹರಿಸಿಕೊಳ್ಳಬೇಕು. ಹಿಂದುತ್ವ ಒಪ್ಪೋದಿಲ್ಲ ಅನ್ನೋದು ಅರ್ಥಹೀನ. ಒಬ್ಬ ವ್ಯಕ್ತಿ ಕುಳಿತುಕೊಂಡು ಇಂತವರು ಸಿಎಂ ಆಗಬೇಕು, ಇಂತವರು ಆಗಬಾರದು ಎಂದು ಹೇಳೋದು ಸರಿಯಲ್ಲ ಎಂದರು.

ಸಿಎಂ ಇಂತವರೇ ಆಗಬೇಕು ಎನ್ನುವುದು ಡೆಮೋಕ್ರೆಟಿಕ್‌ ಅಲ್ಲ: ಪ್ರಹ್ಲಾದ್ ಜೋಶಿ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಮಾಜಿ ಮುಖ್ಯಮಂತ್ರಿ ಎಚ್ ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು ನೋಡಿ ವ್ಯಕ್ತಿಗತವಾಗಿ ಮುಖ್ಯಮಂತ್ರಿ ಇಂತವರು ಆಗಬೇಕು, ಇಂತವರು  ಆಗಬಾರದು ಎಂದು ಮಾತನಾಡೋದು ಮತದಾರರು. ಮತದಾರರು ಪ್ರಹ್ಲಾದ್ ಜೋಶಿ ಆಗಬಾರದು,ಇಂತವರು ಆಗಬೇಕು ಅಂತಾ ಹೇಳಿದರೆ ಬೇರೆ. ಯಾರೋ ಒಬ್ಬ ವ್ಯಕ್ತಿ ಕುಳಿತುಕೊಂಡು ಇಂತವರು ಸಿಎಂ ಆಗಬೇಕು, ಇಂತವರು ಆಗಬಾರದು ಎಂದು ಹೇಳೋದು ಸರಿಯಲ್ಲ. ಅದು ಡೆಮೋಕ್ರೆಟಿಕ್ ಆಗೋದಿಲ್ಲ, ಅದು ಡಿಕ್ಟೇಟರ್ ಆಗುತ್ತೆ ಎಂದು ಹೇಳಿದರು.

ಬ್ರಾಹ್ಮಣ ಸಿಎಂ ವಾರ್: ಮತ್ತೊಂದು ಬಾಂಬ್ ಹಾಕಿದ ಎಚ್‌ಡಿಕೆ!

ನಾವೆಲ್ಲ ಭಾರತಿಯರೆಂಬ ಉದಾತ್ತ ಭಾವನೆಯಿರಲಿ:  ಇನ್ನು ಪೇಶ್ವೆ ಬ್ರಾಹ್ಮಣ ಮತ್ತು ರಾಜ್ಯದ ಬ್ರಾಹ್ಮಣರ ಕುರಿತ ಹೇಳಿಕೆ ತಿರುಗೇಟು ನೀಡಿರುವ ಶ್ರೀಗಳು ನಾವೆಲ್ಲ ಭಾರತಿಯರು ಎಂಬ ಉದಾತ್ತ ಭಾವನೆ ಇದ್ದಲ್ಲಿ ಮಾತ್ರ ನಮ್ಮ ದೇಶದ ಭದ್ರತೆ, ದೇಶದ ಪ್ರೇಮ, ದೇಶದ ಅಭಿವೃದ್ಧಿ ಸಾಧ್ಯ. ದೇಶದಲ್ಲಿ ನಾವೆಲ್ಲ ಒಂದೇ ತಾಯಿಯ ಮಕ್ಕಳು. ನಾವೆಲ್ಲರೂ ಭಾರತಾಂಬೆಯ ಮಕ್ಕಳು. ದೊಡ್ಡಮಗ, ಚಿಕ್ಕ ಮಗ ಅಂದ್ರೆ ಹೇಗೆ, ದೇಶದಲ್ಲಿ ಬೇರೆ ಬೇರೆ ಪ್ರಾಂತಗಳಿವೆ ಹೊರತು ನಾವೆಲ್ಲ ಭಾರತೀಯರು ಎಂದರು. ನಮ್ಮಲ್ಲಿ ಸೌಹಾರ್ದತೆ ಅನ್ನೋದು ಇರಬೇಕೇ ಹೊರತು, ಪರಸ್ಪರ ರಾಜ್ಯಗಳಲ್ಲಿ ಭಿನ್ನಾಭಿಪ್ರಾಯ,ಪರಸ್ಪರ ಸಮಾಜದಲ್ಲಿ ಭಿನ್ನಾಭಿಪ್ರಾಯ ತಂದರೆ ಅದು ದೇಶದ ಅಭಿವೃದ್ಧಿಗೆ ಮಾರಕ. ಜನತೆಯ ಕಲ್ಯಾಣಕ್ಕೆ ಅದು ಅಡ್ಡಿಯಾಗುತ್ತೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.

click me!