ಶಿವಮೊಗ್ಗದಲ್ಲಿ ಸಂಭವಿಸಿದ ಭಾರೀ ಸ್ಫೋಟದ ಕಾರಣ ನಿಗೂಢವಾಗಿಯೇ ಉಳಿದಿತ್ತು. ಇದೀಗ ಲಾರಿ ಚಾಲಕ ಮಾಡಿದ ಯಡವಟ್ಟಿನಿಂದ ಈ ದುರಂತ ಸಮಭವಿಸಿದೆ ಎನ್ನಲಾಗಿದೆ.
ಶಿವಮೊಗ್ಗ (ಜ.24): ಹುಣಸೋಡು ಗ್ರಾಮದಲ್ಲಿ ಸಂಭವಿಸಿದ ‘ಮಹಾಸ್ಫೋಟ’ ಕುರಿತು ತನಿಖೆ ಮುಂದುವರಿದಿದ್ದು, ಸ್ಫೋಟಕ್ಕೆ ಕಾರಣವಾಗಿರಬಹುದಾದ ಅಂಶಗಳ ಕುರಿತು ತಜ್ಞರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಸ್ಫೋಟದ ಸಂದರ್ಭದಲ್ಲಿ ಎರಡು ಬಾರಿ ಶಬ್ದ ಕೇಳಿ ಬಂದಿತ್ತು. ಮೊದಲ ಬಾರಿ ಸಾಧಾರಣ ಶಬ್ದವಾಗಿದ್ದರೆ, ಎರಡನೇ ಬಾರಿಯದು ಭಾರೀ ಸ್ಫೋಟದ ಶಬ್ದವಾಗಿತ್ತು.
ಈ ಎರಡು ಶಬ್ಧಗಳ ಹಿಂದೆ ತನಿಖಾಧಿಕಾರಿಗಳು ಬೆನ್ನು ಹತ್ತಿದ್ದಾರೆ. ಹೇಗೆ ಎರಡು ಬಾರಿ ಶಬ್ಧ ಬಂದಿದೆ ಎಂಬುದು ಪ್ರಶ್ನೆ. ಈ ನಿಟ್ಟಿನಲ್ಲಿ ಇದು ಲಾರಿ ಚಾಲಕನ ಯಡವಟ್ಟಿನಿಂದ ಸ್ಫೋಟ ಸಂಭವಿಸಿತೇ ಎಂಬ ಪ್ರಶ್ನೆಯೊಂದು ತನಿಖಾಧಿಕಾರಿಗಳಲ್ಲಿ ಮೂಡಿದೆ.
ಶಿವಮೊಗ್ಗ ಸ್ಫೋಟದಲ್ಲಿ ಮೃತರಿಬ್ಬರ ಕಣ್ಣೀರ ಕಥೆ ಇದು : ತುಂಬು ಗರ್ಭಿಣಿ ಪತ್ನಿ ತೊರೆದು ಹೋದ ...
ಚಾಲಕ ಸ್ಫೋಟ ನಡೆದ ಸ್ಥಳಕ್ಕೆ ಬಂದ ಸಂದರ್ಭದಲ್ಲಿ ಹಿಂದಕ್ಕೆ ಚಲಿಸುವ ಸಂದರ್ಭದಲ್ಲಿ ವಿದ್ಯುತ್ ಕಂಬವೊಂದಕ್ಕೆ ಡಿಕ್ಕಿ ಹೊಡೆದಿರಬಹುದು. ಈ ವೇಳೆಯಲ್ಲಿ ತಂತಿ ತುಂಡಾಗಿ ಲಾರಿ ಮೇಲೆ ಬಿದ್ದು ಸ್ಫೋಟ ಸಂಭವಿರಬಹುದೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.