ಧಾರವಾಡ : ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಸಾಮೂಹಿಕ ಪುಣ್ಯತಿಥಿ

Published : Jan 24, 2021, 07:28 AM IST
ಧಾರವಾಡ :  ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಸಾಮೂಹಿಕ ಪುಣ್ಯತಿಥಿ

ಸಾರಾಂಶ

ಧಾರವಾಡದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ  11 ಮಂದಿಗೆ ಅಲ್ಲಿನ ನಿವಾಸಿಗಳು  ನಮನ ಸಲ್ಲಿಸಿದ್ದಾರೆ.  11 ಮಂದಿಗೆ ಪುಣ್ಯತಿಥಿ ಆಚರಿಸಿದ್ದಾರೆ. 

ಧಾರವಾಡ (ಜ.24): ಬೈಪಾಸ್‌ ರಸ್ತೆ ಇಟಿಗಟ್ಟಿಬಳಿ ನಡೆದ ಭೀಕರ ಅಪಘಾತಕ್ಕೆ ಶನಿವಾರ ಒಂಭತ್ತು ದಿನವಾದ ಹಿನ್ನೆಲೆಯಲ್ಲಿ ಕೆಲಗೇರಿ ಹಾಗೂ ಸುತ್ತಲಿನ ಬಡಾವಣೆಗಳ ಗ್ರಾಮಸ್ಥರು ಮೃತರಾದ 11 ಜನರ ಸಾಮೂಹಿಕ ಪುಣ್ಯತಿಥಿ ಆಚರಿಸಿ ಗಮನ ಸೆಳೆದರು.

ದುರ್ಘಟನೆಯಲ್ಲಿ ದಾವಣಗೆರೆ ಮೂಲದ ಒಂಭತ್ತು ಮಹಿಳೆಯರು ಹಾಗೂ ಮಿನಿ ಬಸ್‌ ಚಾಲಕ ಮತ್ತು ಕ್ಲೀನರ್‌ ಸೇರಿ 11 ಜನರು ಸ್ಥಳದಲ್ಲಿಯೇ ಮೃತರಾಗಿದ್ದು, ನಾಲ್ವರಿಗೆ ತೀವ್ರ ಗಾಯಗಳಾಗಿದ್ದವು. 

ಧಾರವಾಡ ಬಳಿ ಭೀಕರ ಆಕ್ಸಿಡೆಂಟ್‌: ಅಪಘಾತ ಕುರಿತು ವರದಿ ಕೇಳಿದ ಸುಪ್ರೀಂಕೋರ್ಟ್ ...

ಹೋರಾಟದ ಅಂಗವಾಗಿ ಶನಿವಾರ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಕೆಲಗೇರಿ ಬೈಪಾಸ್‌ ರಸ್ತೆಯ ಬದಿ ಮೃತರ ಭಾವಚಿತ್ರದೊಂದಿಗೆ ಒಂದು ನಿಮಿಷ ಮೌನಾಚರಣೆ ಮಾಡಿ, ನೈವೈದ್ಯ ಮಾಡಿ ಪುಣ್ಯತಿಥಿ ಸಂದರ್ಭದಲ್ಲಿ ನಡೆಯುವ ಎಲ್ಲ ರೀತಿಯ ಪೂಜೆಗಳನ್ನು ಮಾಡಲಾಯಿತು.

PREV
click me!

Recommended Stories

ಹಾಡುತ್ತಾ, ಆಡುತ್ತಾ ಇಂಗ್ಲಿಷ್ ಕಲಿಕೆ: ಮುದ್ದಾಬಳ್ಳಿ ಮಕ್ಕಳ ನೆಚ್ಚಿನ ಶಿಕ್ಷಕ ಮಹ್ಮದ್ ಇಸ್ಮಾಯಿಲ್
ಪಾಠ ಹೇಳುವುದಷ್ಟೇ ಅಲ್ಲ, ಶಾಲೆಯನ್ನೇ ಬದಲಿಸಿದ ಶಿಕ್ಷಕ: ಮಕ್ಕಳ ಕಲಿಕೆಗೆ ಹೊಸ ಸ್ಪರ್ಶ!