ಬಾಂಗ್ಲಾ ವಲಸಿಗರನ್ನು ಮರಳಿ ಬಾಂಗ್ಲಾದೇಶಕ್ಕೆ ಕಳುಹಿಸಲು ರಾಜ್ಯದ ಪೊಲೀಸರೊಂದಿಗೆ ಹೌರಾದ ಪೊಲೀಸರು ಹಾಗೂ ಪಶ್ಚಿಮ ಬಂಗಾಳ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದ ಸಚಿವ ಬೊಮ್ಮಾಯಿ| ವಲಸಿಗರನ್ನ ಮರಳಿ ಬಾಂಗ್ಲಾಕ್ಕೆ ಬಿಡಲು ಮೊದಲು ಪಶ್ಚಿಮ ಬಂಗಾಳ ನೆರವು ನೀಡುವುದಾಗಿ ತಿಳಿಸಿತ್ತು| ಬಾಂಗ್ಲಾ ವಲಸಿಗರನ್ನ ಮರಳಿ ಕಳುಹಿಸಲು ಬಿಎಸ್ ಎಫ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇವೆ| ಬಿಎಸ್ ಎಫ್ ಅಧಿಕಾರಿಗಳು ಸಹಕಾರ ನೀಡಿದ್ದಾರೆ| ಪಶ್ಚಿಮ ಬಂಗಾಳ ಸರ್ಕಾರ ನೆರವು ನೀಡುತ್ತಿಲ್ಲ
ಹಾವೇರಿ(ನ.24): ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ 59 ಬಾಂಗ್ಲಾ ವಲಸಿಗರು ಮರಳಿ ಬಾಂಗ್ಲಾದೇಶಕ್ಕೆ ಕಳುಹಿಸಲು ರಾಜ್ಯದ ಪೊಲೀಸರು ಪಶ್ಚಿಮ ಬಂಗಾಳದ ಹೌರಾ ಮೂಲಕ ವಾಪಸ್ ಕಳುಹಿಸಲು ತೆರಳಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.
ಭಾನುವಾರ ಜಿಲ್ಲೆಯ ರಟ್ಟೀಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಂಗ್ಲಾ ವಲಸಿಗರನ್ನು ಮರಳಿ ಬಾಂಗ್ಲಾದೇಶಕ್ಕೆ ಕಳುಹಿಸಲು ರಾಜ್ಯದ ಪೊಲೀಸರೊಂದಿಗೆ ಹೌರಾದ ಪೊಲೀಸರು ಹಾಗೂ ಪಶ್ಚಿಮ ಬಂಗಾಳ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.
undefined
ರಾಜ್ಯವೇ ಬೆಚ್ಚಿ ಬೀಳುವಂತ ಸುದ್ದಿ: ಶಂಕಿತ ಉಗ್ರರಿಗೂ ಕರ್ನಾಟಕ ಸೇಫ್!
ವಲಸಿಗರನ್ನ ಮರಳಿ ಬಾಂಗ್ಲಾಕ್ಕೆ ಬಿಡಲು ಮೊದಲು ಪಶ್ಚಿಮ ಬಂಗಾಳ ನೆರವು ನೀಡುವುದಾಗಿ ತಿಳಿಸಿತ್ತು. ಬಾಂಗ್ಲಾ ವಲಸಿಗರನ್ನ ಮರಳಿ ಕಳುಹಿಸಲು ಬಿಎಸ್ ಎಫ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇವೆ. ಬಿಎಸ್ ಎಫ್ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಆದರೆ, ಪಶ್ಚಿಮ ಬಂಗಾಳ ಸರ್ಕಾರ ನೆರವು ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಬಾಂಗ್ಲಾ ವಲಸಿಗರಿಂದ ಬೆಂಗಳೂರಲ್ಲಿ ನಡೀತಿದೆ ವೇಶ್ಯಾವಾಟಿಕೆ ದಂಧೆ!
ರಾಜ್ಯದ ಡಿಸಿಪಿ ಹಾಗೂ ಎಸಿಪಿ ಅವರು ಬಾಂಗ್ಲಾ ವಲಸಿಗರನ್ನ ಬಿಟ್ಟು ಬರಲು ತೆರಳಿದ್ದಾರೆ. ಬಾಂಗ್ಲಾ ವಲಸಿಗರು ಇನ್ನೂ ರಾಜ್ಯದ ಪೊಲೀಸರ ವಶದಲ್ಲೇ ಇದ್ದಾರೆ. ಅವರನ್ನು ಮರಳಿ ಬಾಂಗ್ಲಾಕ್ಕೆ ಕಳುಹಿಸಲು ಕೇಂದ್ರದ ನೆರವು ಕೇಳಿದ್ದೇವೆ. ಕೇಂದ್ರದ ಗೃಹ ಇಲಾಖೆ ಹಾಗೂ ಗೃಹ ಸಚಿವರ ಜೊತೆ ನಾನು ಸತತ ಸಂಪರ್ಕದಲ್ಲಿ ಇದ್ದೇನೆ, ಪಶ್ಚಿಮ ಬಂಗಾಳ ಸರ್ಕಾರ ಸಹಕಾರ ನೀಡಿದ್ರೆ ಅಕ್ರಮ ವಲಸಿಗರನ್ನ ಮರಳಿ ಬಾಂಗ್ಲಾಗೆ ಕಳುಹಿಸಬಹುದು ಎಂದು ತಿಳಿಸಿದ್ದಾರೆ.