ಭಾರಿ ಶಬ್ಧಕ್ಕೆ ಬೆಚ್ಚಿ ಬೀಳ್ತಿರುವ ಗ್ರಾಮಸ್ಥರು| ಕಲಬುರಗಿ ಜಿಲ್ಲೆಯ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಕೇಳಿ ಬರುತ್ತಿರುವ ಶಬ್ಧ| ಕಳೆದ ನಾಲ್ಕು ವರ್ಷಗಳಿಂದ ಭೂಮಿಯಿಂದ ಆಗಾಗ ಕೇಳಿ ಬರುತ್ತಿರುವ ಶಬ್ಧ|
ಕಲಬುರಗಿ(ಜ.31): ಜಿಲ್ಲೆಯ ಭೂಗರ್ಭದಲ್ಲಿ ಮತ್ತೇ ಭಾರಿ ಶಬ್ಧ ಕೇಳಿ ಬರುತ್ತಿದೆ. ಹೌದು, ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದ ಭೂಗರ್ಭದಲ್ಲಿ ಭಾರಿ ಶಬ್ಧ ಕೇಳುತ್ತಿದೆ. ಇದರಿಂದ ಜನರು ಭಯದಲ್ಲೇ ಜೀವನ ನಡೆಸುತ್ತಿದ್ದಾರೆ.
ಈ ಗ್ರಾಮದಲ್ಲಿ ಆಗಾಗ ಭೂಮಿಯಿಂದ ನಿಗೂಢ ಶಬ್ಧ ಕೇಳಿಬರುತ್ತಿದೆ. ಇದೆ ಜ. 21 ರಂದು ಮೂರು ಬಾರಿ ಶಬ್ಧ ಕೇಳಿ ಬಂದಿತ್ತು. ಇದೀಗ ಮತ್ತೆ ಭೂಮಿಯಿಂದ ಶದ್ಧ ಕೇಳಿ ಬಂದಿದೆ. ಹೀಗಾಗಿ ಭಯದಿಂದ ಗ್ರಾಮಸ್ಥರು ಮನೆಯಿಂದ ಹೊರಬಂದಿದ್ದಾರೆ.
ಕಲಬುರಗಿಯಲ್ಲಿ ಮ್ಯಾನ್‌ಹೋಲ್ ದುರಂತ: ಉಸಿರುಗಟ್ಟಿ ಇಬ್ಬರು ಕಾರ್ಮಿಕರ ಸಾವು
ಗಡಿಕೇಶ್ವರ ಗ್ರಾಮದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಭೂಮಿಯಿಂದ ಆಗಾಗ ನಿಗೂಢವಾದ ಶಬ್ಧ ಕೇಳಿ ಬರುತ್ತಿದೆ. ಇದರಿಂದ ಗ್ರಾಮಸ್ಥರು ಭಯದಲ್ಲಿಯೇ ಕಾಲ ಕಳೆಯುವಂತಾಗಿದೆ.