ಮಂಜಮ್ಮ ಜೋಗತಿ ಅವರನ್ನ ಸನ್ಮಾನಿಸಿದ ಗಾಲಿ ಜನಾರ್ದನ ರೆಡ್ಡಿ ದಂಪತಿ| ಇಂತಹದೊಂದು ಅವಕಾಶ ದೊರಕಿರುವುದು ನಿಜಕ್ಕೂ ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಜನಾರ್ದನ ರೆಡ್ಡಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಬಳ್ಳಾರಿಯ ಮಂಜಮ್ಮ ಜೋಗತಿ|
ಬೆಂಗಳೂರು(ಜ.31): ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಬಳ್ಳಾರಿಯ ಮಂಜಮ್ಮ ಜೋಗತಿ ಅವರಿಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಸನ್ಮಾನಿಸಿದ್ದಾರೆ.
ಜನಾರ್ದನ ರೆಡ್ಡಿ ಅವರು ಬೆಂಗಳೂರಿನಲ್ಲಿರುವ ತಮ್ಮ ನಿವಾಸಕ್ಕೆ ಆಹ್ವಾನಿಸಿ ಮಂಜಮ್ಮ ಜೋಗತಿ ಅವರನ್ನ ಸನ್ಮಾನ ಮಾಡಿದ್ದಾರೆ. ಪತ್ನಿ ಲಕ್ಷ್ಮೀ ಅರುಣಾ ಜೊತೆ ಗೂಡಿ ಜನಾರ್ದನ ರೆಡ್ಡಿ ಅವರು ಮಂಜಮ್ಮ ಜೋಗತಿ ಅವರಿಗೆ ಸನ್ಮಾನ ಮಾಡಿ ಅಭಿನಂದಿಸಿದ್ದಾರೆ.
ಕೊರೋನಾದಿಂದ ರೆಡ್ಡಿ ಗುಣಮುಖ: ಕುಟುಂಬ ಸಮೇತ ರಾಮೇಶ್ವರ ಭೇಟಿ
ಬಳಿಕ ಮಾತನಾಡಿದ ಜನಾರ್ದನ ರೆಡ್ಡಿ ಅವರು, ಇಂತಹದೊಂದು ಅವಕಾಶ ದೊರಕಿರುವುದು ನಿಜಕ್ಕೂ ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ ಎಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಳ್ಳಾರಿ ಸೀಮೆ ಅನೇಕ ಮಹಾನ್ ಕಲಾವಿದರ, ಸಾಹಿತಿಗಳ ಬರಹಗಾರರನ್ನು ಕಂಡ ಪುಣ್ಯ ಭೂಮಿಯಾಗಿದೆ. ಬಳ್ಳಾರಿಯ ಖ್ಯಾತ ಕಲಾವಿದೆ ಮಂಜಮ್ಮ ಜೋಗತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಇಡಿ ನಮ್ಮ ಬಳ್ಳಾರಿ ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಬಣ್ಣಿಸಿದ್ದಾರೆ.