ಟಿಕೆಟ್‌ ನೀಡಿದರೆ ಕೆಸಿಎನ್‌ ಠೇವಣಿ ಕಳೆಯುತ್ತೇವೆ : ಕೈ ನಾಯಕರ ಎಚ್ಚರಿಕೆ

By Kannadaprabha NewsFirst Published Feb 14, 2023, 2:49 PM IST
Highlights

ಕಾಂಗ್ರೆಸ್‌ನ 6 ಆಕ್ಷಾಂಕ್ಷಿತರಲ್ಲಿ ಯಾರಿಗೇ ಟಿಕೆಟ್‌ ನೀಡಿದರೂ ನಾವೆಲ್ಲ ಒಗ್ಗೂಡಿ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಒಂದು ವೇಳೆ ಸಚಿವ ಕೆ.ಸಿ.ನಾರಾಯಣಗೌಡರನ್ನು ಪಕ್ಷಕ್ಕೆ ಕರೆತಂದರೆ ಅವರ ಠೇವಣಿ ಕಳೆಯುವುದಾಗಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ಗುಡುಗಿದರು.

 ಕೆ.ಆರ್‌.ಪೇಟೆ:  ಕಾಂಗ್ರೆಸ್‌ನ 6 ಆಕ್ಷಾಂಕ್ಷಿತರಲ್ಲಿ ಯಾರಿಗೇ ಟಿಕೆಟ್‌ ನೀಡಿದರೂ ನಾವೆಲ್ಲ ಒಗ್ಗೂಡಿ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಒಂದು ವೇಳೆ ಸಚಿವ ಕೆ.ಸಿ.ನಾರಾಯಣಗೌಡರನ್ನು ಪಕ್ಷಕ್ಕೆ ಕರೆತಂದರೆ ಅವರ ಠೇವಣಿ ಕಳೆಯುವುದಾಗಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ಗುಡುಗಿದರು.

ತಮ್ಮನ್ನು ಶಾಸಕರನ್ನಾಗಲು ಅವಕಾಶ ನೀಡಿದ ಪಕ್ಷದ ಮುಖಂಡರು ಮತ್ತು ಕ್ಷೇತ್ರದ ಮತದಾರರಿಗೆ ದ್ರೋಹ ಬಗೆದು ನಾರಾಯಣಗೌಡರು ಬಿಜೆಪಿ ಸೇರಿದರು. ಇದೀಗ ಸಚಿವ ಸ್ಥಾನ ನೀಡಿದ ಬಿಜೆಪಿಗೂ ದ್ರೋಹ ಬಗೆದು ಕಾಂಗ್ರೆಸ್‌ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಎಂದು ಕಿಡಿಕಾರಿದರು.

Latest Videos

ನನ್ನ ಗುರಿ ಒಂದೇ. ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ನೀಡಲಿ. ನಾವು ಆರು ಜನ ಟಿಕೆಟ್‌ ಆಕಾಂಕ್ಷಿಗಳು ಒಗ್ಗೂಡಿ ಕೆಲಸ ಮಾಡುತ್ತೇವೆ. ಆದನ್ನು ಬಿಟ್ಟು ನಾರಾಯಣಗೌಡರಿಗೆ ಪಕ್ಷದ ಬಾಗಿಲು ತೆರೆಯಬಾರದು ಎಂದು ಕೋರಿದರು. ಇದೇ ವೇಳೆ ಸಚಿವ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್‌ ಟಿಕೆಟ್‌ ತಂದರೆ ಕ್ಷೇತ್ರದ ಆರು ಜನ ಟಿಕೆಚ್‌ ಆಕಾಂಕ್ಷಿಗಳ ಮನೆ ಬಾಗಿಲಿಗೆ ಸೀರೆ, ಬಳೆ ಮತ್ತು ಕುಪ್ಪಸ ಕಳುಹಿಸುವುದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ಭವಾನಿ ಅಕ್ಕಂಗೆ ಸಿಗುತ್ತಾ ಟಿಕೆಟ್: ಗೌಡರ ಕುಟುಂಬಕ್ಕೆ ಪ್ರತಿಷ್ಠೆಯ ವಿಷಯವಾದ ಪ್ರೀತಂಗೌಡ ಸವಾಲ್‌

ಸಚಿವ ಕೆಸಿಎನ್‌ ಸಿದ್ಧಾಂತವಿಲ್ಲದ ರಾಜಕಾರಣಿ

 ಅಧಿಕಾರಕ್ಕಾಗಿ ಪಕ್ಷ ಬದಲಾಯಿಸುವ ಸಚಿವ ಕೆ.ಸಿ.ನಾರಾಯಣಗೌಡ ಯಾವುದೇ ತತ್ವ, ಸಿದ್ಧಾಂತವಿಲ್ಲದ ರಾಜಕಾರಣಿ. ಇದು ಕಾಂಗ್ರೆಸ್‌ ನಾಯಕರ ಗಮನಕ್ಕೆ ಬಂದಿದೆ ಎಂದು ಕಾಂಗ್ರೆಸ್‌ನ ಜಿಲ್ಲಾ ವೀಕ್ಷಕ ತೆಲಂಗಾಣದ ಜಟ್ಟಿಕುಸುಮಕುಮಾರ್‌ ಚೌಧರಿ ಹೇಳಿದರು.

ಪಟ್ಟಣದ ಕೆ.ಬಿ.ವಿವೇಕ್‌ ಫಂಕ್ಷನ್‌ ಹಾಲ…ನಲ್ಲಿ ತಾಲೂಕು ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಕಾರ್ಯಕರ್ತರ ಚುನಾವಣಾ ಪೂರ್ವ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸಚಿವ ಕೆ.ಸಿ.ನಾರಾಯಣಗೌಡ ಕ್ಷೇತ್ರದ ಅಭಿವೃದ್ಧಿಯನ್ನು ಸಮಾಧಿ ಮಾಡಿದ್ದಾರೆ. ಜೆಡಿಎಸ್‌ ಜಿಲ್ಲೆಯ ಅಭಿವೃದ್ಧಿಯನ್ನು ಸಮಾಧಿ ಮಾಡಿದೆ ಎಂದು ದೂರಿದರು.

ಸಚಿವ ಕೆ.ಸಿ.ನಾರಾಯಣಗೌಡರು ಕಾಂಗ್ರೆಸ್‌ ಪಕ್ಷ ಸೇರುವ ಬಗ್ಗೆ ಸ್ಥಳೀಯ ಕಾರ್ಯಕರ್ತರ ಪ್ರಭಲ ವಿರೋಧವನ್ನು ಪಕ್ಷದ ಗಮನಕ್ಕೆ ತರಲಾಗಿದೆ. ಅವರು ಕಾಂಗ್ರೆಸ್‌ ಸೇರ್ಪಡೆ ವಿರೋಧಿಸಿ ಒಂದು ಸಾಲಿನ ನಿರ್ಣಯವನ್ನು ಅನುಮೋಧಿಸಿದರಲ್ಲದೆ ನಿರ್ಣಯದ ಪ್ರತಿಯನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ. ಇದರ ಬಗ್ಗೆ ಪಕ್ಷದ ಕಾರ್ಯಕರ್ತರು ಆತ್ಮ ವಿಶ್ವಾಸವನ್ನು ಹೊಂದಬೇಕು. ಆತ್ಮ ವಿಶ್ವಾಸವಿಲ್ಲದವನು ಏನನ್ನೂ ಸಾಧಿಸಲಾರ. ಜೆಡಿಎಸ್‌ ದಕ್ಷಿಣ ಕರ್ನಾಟಕದ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಅಸ್ತಿತ್ವ ಹೊಂದಿದ್ದು ಅದು ಎಂದಿಗೂ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎಂದರು.

ಬಿಜೆಪಿ ಸಂಪೂರ್ಣ ರೈತರ ವಿರೋಧಿ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ರೈತರ ಸಾಲಮನ್ನಾ ಇರಲಿ ರೈತರಿಗೆ ಸಾಲ ನೀಡಿಕೆಯನ್ನೇ ವಿರೋಧಿಸುತ್ತಾನೆ. ರೈತರು ನಾಡಿನ ಅನ್ನದಾತರು ಎನ್ನುವ ಕನಿಷ್ಠ ಪ್ರಜ್ಞೆಯಿಲ್ಲದ ತೇಜಸ್ವಿ ಸೂರ್ಯನಂತಹ ಜನ ಬಿಜೆಪಿಯಲ್ಲಿದ್ದಾರೆ ಎಂದು ಕಿಡಿಕಾರಿದರು.

ಸಭೆಯಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಪಕ್ಷದ ಟಿಕೆಚ್‌ ಆಕಾಂಕ್ಷಿಗಳಾದ ವಿಜಯ ರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಕಿಕ್ಕೇರಿ ಸುರೇಶ್‌, ಬಿ.ನಾಗೇಂದ್ರಕುಮಾರ್‌, ಮುಖಂಡರಾದ ಚಿನಕುರಳಿ ರಮೇಶ್‌, ಸಿ.ಎಂ.ದ್ಯಾವಪ್ಪ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌, ವೀಣಾಶಂಕರ್‌ ಉಪಸ್ಥಿತರಿದ್ದರು

click me!