ನಮಗೆ ರೋಲ್ ಮಾಡೆಲ್ ಅಧಿಕಾರಿ ಬೇಕು. ಮಾಡೆಲ್ ಅಧಿಕಾರಿ ಅಲ್ಲ. ಮೈಸೂರು ಡಿಸಿಯಾಗಿದ್ದ ಅಭಿರಾಮ್ ಶಂಕರ್, ಸಿ.ಶಿಖಾ ಅವರ ರೀತಿ ರೋಲ್ ಮಾಡೆಲ್ ಅಧಿಕಾರಿಯಾಗಿ. ಬರೀ ಮಾಡೆಲ್ ಆಗಬೇಡಿ ಎಂದು ಡೀಸಿ ರೋಹಿಣಿ ವಿರುದ್ಧ ಸಾರಾ ಮಹೇಶ್ ಅಸಮಾಧಾನ ಹೊರಹಾಕಿದರು.
ಮೈಸೂರು (ಮೇ.02): ಜಿಲ್ಲಾಡಳಿತ ಉಸ್ತುವಾರಿ ಸಚಿವರು ಬದುಕಿದ್ದಾರಾ ಎಂದು ಕೇಳಿದ್ದಕ್ಕೆ ಸಚಿವರಿಗೆ ಸಿಟ್ಟು ಬಂದಿದೆ. ಜನರ ಸ್ಥಿತಿ ನೋಡಿ ಬೇಸರದಿಂದ, ನೋವಿನಿಂದ ಆ ರೀತಿ ಹೇಳಿದ್ದೆ. ಕೊರೋನಾ ಹೆಚ್ಚಳದಿಂದ ಆಗುತ್ತಿರುವ ಸಾವು ನೋವುಗಳು ನೋವುಂಟು ಮಾಡಿದೆ ಎಂದು ಕೆ.ಆರ್ ನಗರ ಶಾಸಕ ಸಾ ರಾ ಮಹೇಶ್ ಹೇಳಿದ್ದಾರೆ.
ಮೈಸೂರಿನಲ್ಲಿಂದು ಮಾತನಾಡಿದ ಶಾಸಕ ಸಾ ರಾ. ಮಹೇಸ್ ನಮ್ಮ ಕೆ.ಆರ್. ನಗರದ ಮಹಿಳೆ ಮೊನ್ನೆ ಕೋವಿಡ್‌ನಿಂದ ಮೃತಪಟ್ಟರು. ಜಿಲ್ಲಾಡಳಿತ ಆ ಮಹಿಳೆಯ ಕೋವಿಡ್ ಪರೀಕ್ಷೆ ರಿಪೋರ್ಟ್ ಬರುವುದರೊಳಗೆ ಶವವನ್ನು ಹಸ್ತಾಂತರ ಮಾಡಿತ್ತು. ಅವರು, ಶವ ತೆಗೆದು ಕೊಂಡು ಹೋಗಿ ಮನೆಯಲ್ಲಿಟ್ಟು ನಂತರ ಅಂತ್ಯಕ್ರಿಯೆ ಮಾಡಿದ್ದರು. ಮರು ದಿನ ಮೃತ ಮಹಿಳೆಯ ಕೋವಿಡ್ ರೀಪೋರ್ಟ್ ಬಂದಿದ್ದು ಕೋವಿಡ್ ಪಾಸಿಟಿವ್ ಇದೆ. ಇದರಿಂದ ಈಗ ಆ ಮನೆಯಲ್ಲಿ 25 ಜನಕ್ಕೆ ಕರೋನಾ ಪಾಸಿಟಿವ್ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂತಹ ಘಟನೆಗೆ ಎಡೆ ಮಾಡಿಕೊಡುವುದು ಜಿಲ್ಲಾಡಳಿತದ ನಿರ್ಲಕ್ಷ್ಯ ಅಲ್ವಾ? ಇದನ್ನು ಪ್ರಶ್ನೆ ಮಾಡುವುದು ತಪ್ಪಾ? ಕೋವಿಡ್ ರಿಪೋರ್ಟ್ ಬರುವವರೆಗೂ ಶವ ಕೊಡಬೇಡಿ. ಕುಟುಂಬದವರು ಒತ್ತಾಯ ಮಾಡಿದರೆ ಕೋವಿಡ್ ನಿಯಮದಂತೆ ಶವಸಂಸ್ಕಾರ ಮಾಡಿಸಿ ಎಂದರು.
ಸಾರಾ ಬಳಗದಿಂದ ಕೋವಿಡ್ ಸೆಂಟರ್ ಆರಂಭ : 1 ಲಕ್ಷ ವೇತನ ನೀಡಿ ವೈದ್ಯರ ನೇಮಕ ...
ರೋಲ್ ಮಾಡೆಲ್ ಬೇಕು- ಮಾಡೆಲ್ ಅಲ್ಲ : ನಮಗೆ ರೋಲ್ ಮಾಡೆಲ್ ಅಧಿಕಾರಿ ಬೇಕು. ಮಾಡೆಲ್ ಅಧಿಕಾರಿ ಅಲ್ಲ. ಮೈಸೂರು ಡಿಸಿಯಾಗಿದ್ದ ಅಭಿರಾಮ್ ಶಂಕರ್, ಸಿ.ಶಿಖಾ ಅವರ ರೀತಿ ರೋಲ್ ಮಾಡೆಲ್ ಅಧಿಕಾರಿಯಾಗಿ. ಬರೀ ಮಾಡೆಲ್ ಆಗಬೇಡಿ ಎಂದು ಈ ವೇಳೆ ಡೀಸಿ ರೋಹಿಣಿ ವಿರುದ್ಧವೂ ಅಸಮಾಧಾನ ಹೊರಹಾಕಿದರು.
ವಿಶ್ವಾಸದಿಂದ ಕೆಲಸ ಮಾಡಿ, ದರ್ಪದಿಂದ ಅಲ್ಲವೆಂದು ನಿಮ್ಮ ಅಧಿಕಾರಿಗೆ ಹೇಳಿ ಎಂದು ಸಚಿವ ಸೋಮಶೇಖರ್ಗೆ ಸಾರಾ ಮಹೇಶ್ ಸಲಹೆ ನೀಡಿದರು.
ಅಭಿರಾಂಮ್ ಶಂಕರ್ ಡಿಸಿಯಾಗಿದ್ದಾಗ ಡಿ ಗ್ರೂಪ್ ನೌಕರರಿಗೂ ಗೌರವ ಕೊಡುತ್ತಿದ್ದರು. ಯಾರೇ ಸಲಹೆ ಕೊಟ್ಟರು ಸ್ವೀಕರಿಸುತ್ತಿದ್ದರು. ಆದರೆ, ಇವತ್ತಿನ ಜಿಲ್ಲಾಧಿಕಾರಿ ಗೆ ಆ ಸೌಜನ್ಯ ಇಲ್ಲ. ಈ ಜಿಲ್ಲಾಧಿಕಾರಿಗೆ ಇಚ್ಛಾಶಕ್ತಿ ಕೊರತೆ ಇದೆ. ಆದ್ದರಿಂದ ಕೋವಿಡ್ ನಿರ್ವಹಣೆಯ ಉಸ್ತುವಾರಿಗೆ ಒಬ್ಬ ಹಿರಿಯ ಅಧಿಕಾರಿಯನ್ನು ನಿಯೋಜಿಸಿ ಎಂದು ಮೈ ಸೂರಿನಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಸಲಹೆ ನೀಡಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona