ಕಾರ್ಮಿಕರ ಶ್ರಮವನ್ನು ನಾವು ಹಣದಿಂದ ಅಳೆಯಬಾರದು: ಶಾಸಕ ಕೆ.ಹರೀಶ್‌ಗೌಡ

By Kannadaprabha NewsFirst Published Jun 2, 2023, 9:43 PM IST
Highlights

ಕಾರ್ಮಿಕರ ಶ್ರಮವನ್ನು ನಾವು ಹಣದಿಂದ ಅಳೆಯಬಾರದು ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್‌ಗೌಡ ಹೇಳಿದರು. ಮೈಸೂರು ಕನ್ನಡ ವೇದಿಕೆಯು ಕಾರ್ಮಿಕ ದಿನಾಚರಣೆ ಅಂಗವಾಗಿ ಸುಬ್ಬರಾಯನಕೆರೆ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಆಯೋಜಿಸಿದ್ದ ಕಾಯಕಯೋಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. 

ಮೈಸೂರು (ಜೂ.02): ಕಾರ್ಮಿಕರ ಶ್ರಮವನ್ನು ನಾವು ಹಣದಿಂದ ಅಳೆಯಬಾರದು ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್‌ಗೌಡ ಹೇಳಿದರು. ಮೈಸೂರು ಕನ್ನಡ ವೇದಿಕೆಯು ಕಾರ್ಮಿಕ ದಿನಾಚರಣೆ ಅಂಗವಾಗಿ ಸುಬ್ಬರಾಯನಕೆರೆ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಆಯೋಜಿಸಿದ್ದ ಕಾಯಕಯೋಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾಜ ಕಟ್ಟುವಲ್ಲಿ ಕಾರ್ಮಿಕರ ಶ್ರಮ ಮುಖ್ಯ. ಕಾರ್ಮಿಕರ ಶ್ರಮಕ್ಕೆ ಅದರದೇ ಆದ ಗೌರವವಿದೆ. ಯಾರನ್ನು ನೋಯಿಸದೇ ಎಲ್ಲರನ್ನು ಒಳ್ಳೆಯ ರೀತಿಯಲ್ಲಿ ನೋಡುವ ಮನೋಭಾವನೆ ಬೆಳಸಿಕೊಳ್ಳಬೇಕು. 

ಶ್ರಮಿಕರನ್ನು ಗುರುತಿಸಿ, ಸನ್ಮಾನಿಸಿದರೆ ಶ್ರಮಕರಿಗೆ ಅವರ ಮೇಲಿಯೇ ಗೌರವ ಹೆಚ್ಚಾಗುತ್ತದೆ. ಅಲ್ಲದೆ, ಸಂಸ್ಥೆಗಳ ಗೌರವ ಕೂಡ ಹೆಚ್ಚಾಗುತ್ತದೆ ಎಂದರು. ಮೈಸೂರು ಕನ್ನಡ ವೇದಿಕೆಯಿಂದ ಒಳ್ಳೆ ಕಾರ್ಯಕ್ರಮ ಮಾಡುತ್ತಿದೆ. ಸಣ್ಣಪುಟ್ಟಶ್ರಮಿಕರನ್ನು ಗುರುತಿಸಿ ಅವರಿಗೆ ಸ್ಫೂರ್ತಿ ಬರುವಂತೆ ಮಾಡಿದ್ದಾರೆ. ಕಾಯಕಯೋಗಿ ಪ್ರಶಸ್ತಿಗೆ ಇವರು ಆಯ್ಕೆ ಮಾಡಿರುವ ಎಲ್ಲಾ ಕಾರ್ಮಿಕರು ಅರ್ಹರಿದ್ದಾರೆ ಎಂದರು. ಸಾಮಾನ್ಯರಲ್ಲಿ ಸಾಮಾನ್ಯ ಸಂಘಟನೆಗಳು ಇಂತಹ ಕೆಲಸ ಮಾಡಬೇಕು. ಸಮಾಜಕ್ಕೆ ಮಾದರಿಯಾಗಬೇಕು. ಸಂಘಟನೆಗಳು ಕೇವಲ ಹೋರಾಟಕ್ಕೆ ಒತ್ತು ನೀಡದೆ ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರೆ ಸಮಾಜ ಸೇವೆ ಮಾಡುತ್ತಿರುವ ವ್ಯಕ್ತಿಗಳನ್ನು ಬೆಳಕಿಗೆ ತಂದಂತಾಗುತ್ತದೆ ಎಂದರು.

ದೇವನಹಳ್ಳಿ-ವಿಜಯಪುರ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ: ಸಚಿವ ಮುನಿಯಪ್ಪ

ಕುಮಾರ, ಕೋಮಲಾ, ಚೆಲುವರಾಜು, ಮೀನಾಕ್ಷಿ ವಿಜಯ್‌, ಎಂ.ಎಸ್‌. ಸುರೇಶ್‌ಕುಮಾರ್‌, ಜೆ. ಧನೋಜಿರಾವ್‌, ಕಿಶೋರ್‌ ನಾಗ್‌, ಎಸ್‌. ಮಹೇಶ್‌ಕುಮಾರ್‌, ನಾಗರಾಜು, ನವೀನ ಇವರಿಗೆ ಕಾಯಕಯೋಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಪಿಎನ್‌ ವ್ಯವಸ್ಥಾಪಕ ಪಾಲುದಾರ ಎ.ಪಿ. ನಾಗೇಶ್‌, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್‌. ಬಾಲಕೃಷ್ಣ, ವೇದಿಕೆ ಪದಾಧಿಕಾರಿಗಳಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್‌ ಬಾಬು, ಗೋಪಿ, ಕಾವೇರಮ್ಮ, ಮಾಲಿನಿ, ಪೂರ್ಣಿಮಾ, ಮಹದೇವಸ್ವಾಮಿ ಇದ್ದರು.

ರೈತರ ಸಂಕಷ್ಟಪರಿಹರಿಸಲು ಸಹಕಾರಿ ಸಂಘಗಳ ಆದ್ಯತೆ: ರೈತ ಸಮುದಾಯದ ಆರ್ಥಿಕ ಸಂಕಷ್ಟಗಳನ್ನು ಪರಿಹರಿಸುವತ್ತ ಸಹಕಾರಿ ಸಂಘಗಳು ಪ್ರಥಮ ಆದ್ಯತೆ ನೀಡಿವೆ ಎಂದು ಶಾಸಕ ಜಿ.ಡಿ. ಹರೀಶ್‌ಗೌಡ ಅಭಿಪ್ರಾಯಪಟ್ಟರು. ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಸಹಕಾರಿ ರಂಗದ ಧುರೀಣ ಸಿದ್ದನಗೌಡ ಪಾಟೀಲರು ಸಹಕಾರಿ ಸಂಘಗಳನ್ನು ಹುಟ್ಟು ಹಾಕಿದರು. ಇಂದು ಸಹಕಾರಿ ಸಂಸ್ಥೆಗಳು ಹೆಮ್ಮರವಾಗಿ ಬೆಳೆದು ನಿಂತಿದೆ. ಮಾತ್ರವಲ್ಲದೇ ರೈತ ಸಮುದಾಯದ ನಿತ್ಯಜೀವನದ ಅವಿಭಾಜ್ಯ ಅಂಗವಾಗಿದೆ. 

ಮಕ್ಕಳ ದಾಖ​ಲಾ​ತಿಗೆ ವಾಮ​ಮಾರ್ಗ ಹಿಡಿದ ಪೋಷ​ಕರು: ಎಲ್‌ಕೆಜಿಗೆ 4 ವರ್ಷ, ಯುಕೆಜಿಗೆ 5 ವರ್ಷ

ಕಾಲಕಾಲಕ್ಕೆ ರೈತರಿಗೆ ಸಾಲಸೌಲಭ್ಯಗಳನ್ನು ಕಡಿಮೆ ಬಡ್ಡಿದರ, ಶೂನ್ಯಬಡ್ಡಿದರದ ಮೂಲಕ ನೀಡುವ ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತಲೂ ಹೆಚ್ಚಿನ ಸೇವೆ ನೀಡುತ್ತಿವೆ. ಸಹಕಾರ ಮನೋಭಾವನೆಯೊಂದಿಗೆ ದುಡಿದರೆ ಮಾತ್ರ ಸರ್ವರ ಅಭಿವೃದ್ಧಿ ಸಾಧ್ಯವೆನ್ನುವ ಧ್ಯೇಯವನ್ನು ಸಾರ್ಥಕಗೊಳಿಸುತ್ತಿರುವ ಸಹಕಾರಿ ಕ್ಷೇತ್ರಕ್ಕೆ ಸಹಕಾರಿಗಳ ಬೆಂಬಲವಿಲ್ಲದೇ ಇಂತಹ ಸಾಧನೆ ಅಸಾಧ್ಯ ಎಂದು ಅಭಿಪ್ರಾಯಪಟ್ಟರು. ಜಿಪಂ ಮಾಜಿ ಸದಸ್ಯ ಸಿ.ಟಿ. ರಾಜಣ್ಣ, ಉದ್ಯಮಿ ಹೊಸೂರು ಅಣ್ಣಯ್ಯ, ಗ್ರಾಪಂ ಅಧ್ಯಕ್ಷ ರಾಮಕೃಷ್ಣ, ಉಪಾಧ್ಯಕ್ಷ ರಾಣಿ, ಸೊಸೈಟಿ ಅಧ್ಯಕ್ಷ ಭಾಸ್ಕರ್‌, ಪಿಡಿಓ ಮಹಾದೇವ್‌, ಮೇಲ್ವಿಚಾರಕರಾದ ಶ್ರೀನಿವಾಸ್‌, ಗುರುಕುಮಾರ್‌, ಕಾರ್ಯದರ್ಶಿ ದಯಾನಂದ್‌ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.

click me!