ಮನೆಯೊಳಗೆ ಮೂಡಿದ ದೊಡ್ಡ ಹುತ್ತ : ಅಲ್ಲಿಂದ ಚಿಮ್ಮುತ್ತಿದೆ ಜಲದ ನೀರು

By Kannadaprabha NewsFirst Published Nov 15, 2021, 3:29 PM IST
Highlights
  •  ಚಿತ್ರದುರ್ಗದ ಯರಬಳ್ಳಿ ಗ್ರಾಮದ ಮನೆಯೊಂದರ ಗೋಡೆ ಮೇಲೆ ಬೆಳೆದ ಹುತ್ತದಿಂದ  ಚಿಮ್ಮುವ ನೀರು
  • ಗ್ರಾಮದ ಪೂಜಾರಿ ಮಾರಣ್ಣ ಹಾಗೂ ಪುರದಮ್ಮ ಅವರ ಮನೆಯ ಒಳಗಡೆ ಗೋಡೆ ಮೇಲೆ ಬೃಹತ್‌ ಗಾತ್ರದ ಹುತ್ತ

 ಹಿರಿಯೂರು (ನ.15): ತಾಲೂಕಿನ ಯರಬಳ್ಳಿ ಗ್ರಾಮದ ಮನೆಯೊಂದರ ಗೋಡೆ ಮೇಲೆ ಬೆಳೆದ ಹುತ್ತದಿಂದ (Termitarium ನೀರು (water) ಚಿಮ್ಮುತ್ತಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

ಚಿತ್ರದುರ್ಗ ಜಿಲ್ಲೆಯ ಯರಬಳ್ಳಿ  ಗ್ರಾಮದ ಪೂಜಾರಿ ಮಾರಣ್ಣ ಹಾಗೂ ಪುರದಮ್ಮ ಅವರ ಮನೆಯ ಒಳಗಡೆ ಗೋಡೆ ಮೇಲೆ ಬೃಹತ್‌ ಗಾತ್ರದ ಹುತ್ತ ಬೆಳೆದಿದೆ. ಅಲ್ಲದೆ, ಒಳಭಾಗದಲ್ಲಿ ಕಳೆದ ಶುಕ್ರವಾರ ಮಧ್ಯರಾತ್ರಿ 12 ಗಂಟೆಯಿಂದ ಭೂಮಿಯಿಂದ ವಿಸ್ಮಯಕಾರಿಯಾಗಿ ನೀರು ಚಿಮ್ಮುತ್ತಿದೆ (water Spolling).

ಸುಮಾರು ವರ್ಷಗಳಿಂದ ಮನೆಯಲ್ಲಿ ಹುತ್ತ ಬೆಳೆದಿದ್ದು, ಉಡಸಲು ಮಾರಮ್ಮ ದೇವಿ (Maramma Devi) ಎಂದು ಮನೆಯವರು ನಿತ್ಯವೂ ಹುತ್ತಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ಮನೆಯ ಒಳಭಾಗದ ತಳದಿಂದ ನೀರು ಉಕ್ಕಲು ಪ್ರಾರಂಭಿಸಿದೆ. ನೀರು ಚಿಮ್ಮುತ್ತಿರುವ ದೃಶ್ಯ ಗ್ರಾಮಸ್ಥರಲ್ಲಿ (Village) ಆಶ್ಚರ್ಯ ಉಂಟುಮಾಡಿದೆ. ನೀರನ್ನು ಮನೆಯಿಂದ ಹೊರಗೆ ಚೆಲ್ಲಿದರೂ ಖಾಲಿಯಾಗುತ್ತಿಲ್ಲ ಎನ್ನುತ್ತಾರೆ ಕುಟುಂಬದ ಸದಸ್ಯರು.

ಮನೆಯೊಳಗೆ 90 ಹಾವು :   ಹಾವು ಮನೆ ಸೇರಿಕೊಳ್ಳುವುದು, ಜನರು ಭಯದಿಂದ ತೆರವಿಗೆ ಕರೆ ಮಾಡಿದ ಘಟನೆಗಳು ಸಾಕಷ್ಟು ನಡೆದಿದೆ. ಹೀಗೆ ಅಮೆರಿಕದ (America) ಕ್ಯಾಲಿಫೋರ್ನಿಯಾದಲ್ಲಿರುವ ಮನೆಯೊಂದರಿಂದ ಕರೆಯೊಂದು ಬಂದಿದೆ. ಮನೆಯಲ್ಲಿ (House) ತುಂಬಾ ಹಾವುಗಳಿವೆ. ತಕ್ಷಣ ಬಂದು ತರೆವುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ಹಾವನ್ನು (Snake) ಸುರಕ್ಷಿತವಾಗಿ ಹಿಡಿಯಲು ಬಂದು ತಂಡಕ್ಕೆ ಶಾಕ್ ಕಾದಿತ್ತು. ಕಾರಣ ಮನೆಯಲ್ಲಿದ್ದದ್ದು ಒಂದೆರಡು ಹಾವಲ್ಲ, ಬರೋಬ್ಬರಿ 90 ಹಾವು.

ಕ್ಯಾಲಿಫೋರ್ನಿಯಾದಲ್ಲಿ ಹೀಗೆ ಮನೆಯೊಳಗೆ ಹಾವು ಸೇರಿಕೊಂಡರೆ ಅವುಗಳನ್ನು ತೆರವುಗೊಳಿಸಲು AI ವೂಲ್ಫ್ ತಂಡ ಕಾರ್ಯನಿರ್ವಹಿಸುತ್ತದೆ. ಒಂದು, ಎರಡು ಹಾವನ್ನು ಈ ತಂಡ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವ ಕೆಲಸ ಮಾಡುತ್ತದೆ. ಈ ತಂಡಕ್ಕೆ ಮಹಿಳೆಯೊಬ್ಬರು (woman) ಕರೆ ಮಾಡಿ ಮನೆಯಲ್ಲಿ ಹಾವು ಸೇರಿಕೊಂಡಿರುವುದಾಗಿ ತಕ್ಷಣ ಬಂದು ಸುರಕ್ಷಿತವಾಗಿ ಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ.

ಹಾವಿನ ತಜ್ಞರು, ವೈದ್ಯರು ಸೇರಿ ಒಂದು ತಂಡ ಮಹಿಳೆಯ ಕ್ಯಾಲಿಫೋರ್ನಿಯಾ ಮನೆಗೆ ಧಾವಿಸಿದೆ. ಮನೆಯೊಳಗೆ ಹೋದ ತಂಡಕ್ಕೆ ಒಂದು ಹಾವು ಹಿಡಿದ ಬೆನ್ನಲ್ಲೇ ಮತ್ತೊಂದು ಹಾವು ಗೋಚರಿಸಿದೆ. ಹೀಗೆ ಒಂದರ ಹಿಂದೆ ಒಂದು ಹಾವನ್ನು ಹಿಡಿಯುತ್ತಾ ಹೋದ ತಂಡ 90 ಹಾವುಗಳನ್ನು ಹಿಡಿದಿದೆ.

ಸತತ ನಾಲ್ಕು ಗಂಟೆಗಳ ಕಾಲ ಒಂದೊಂದೇ ಹಾವುಗಳನ್ನು ಹಿಡಿಯುತ್ತಾ ಹೋಗಿದ್ದಾರೆ. ಮಹಿಳೆಯ ಕರೆ ಬಂದಾಗ ಇಷ್ಟೊಂದು ಹಾವು ಇದೆ ಎಂದು ಭಾವಿಸಿರಲಿಲ್ಲ. ಇದು ಸಾರ್ಥಕ ಕರೆಯಾಗಿದೆ ಎಂದು ವೂಲ್ಫ್ ತಂಡ ಹೇಳಿದೆ. 90 ಹಾವುಗಳ ಪೈಕಿ 59 ಮರಿಗಳಾಗಿತ್ತು. ಮನೆಯೊಳಗೆ ಸೇರಿದ್ದ ಈ ಎಲ್ಲಾ ಹಾವುಗಳು ಅತ್ಯಂತ ವಿಷಕಾರಕ ಹಾವಾಗಿದೆ. ಈ ಹಾವುಗಳು ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಮಾತ್ರ ಕಂಡಬರುತ್ತದೆ. ಹಲವು ಬಾರಿ ಒಂದು ಹಾವು ಹಿಡಿಯಲು ಹೋಗಿ ನಾಲ್ಕೈದು ಹಾವುಗಳನ್ನು ಹಿಡಿದ ಉದಾಹರಣೆಗಳಿವೆ. ಆದರೆ ಇದು ಅತ್ಯಂತ ವಿಶೇಷವಾಗಿದೆ. ಒಂದೇ ಮನೆಯಲ್ಲಿ 90 ಹಾವು ಇದುವರೆಗೂ ಹಿಡಿದಿಲ್ಲ ಎಂದು ವೂಲ್ಫ್ ತಂಡ ಹೇಳಿದೆ.

ಈ ವಿಷ ಹಾವುಗಳು ಎಪ್ರಿಲ್‌ನಿಂದ ಅಕ್ಟೋಬರ್ ವರೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಲ್ಲು ಬಂಡೆಗಳ ಅಡಿಯಲ್ಲಿ ಇರುತ್ತದೆ. ಹೀಗಾಗಿ  ವಾಸವಿಲ್ಲದ ಮನೆ ಸೇರಿದಂತೆ ಜನರ ಒಡಾಟವಿಲ್ಲದ ಮನೆಯೊಳಗೆ ಸುಲಭವಾಗಿ ಸೇರಿಕೊಳ್ಳುತ್ತದೆ. ಹೀಗಾಗಿ ಕ್ಯಾಲಿಫೋರ್ನಿಯಾ ನಿವಾಸಿಗಳು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ವೋಲ್ಫ್ ತಂಡ ಹೇಳಿದೆ.

click me!