ಪುತ್ತೂರು-ಬೆಂಗಳೂರು ನಡುವೆ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ ಸಂಚಾರ

By Kannadaprabha News  |  First Published Nov 15, 2021, 2:38 PM IST
  •  ಪುತ್ತೂರು- ಹಾಸನ- ಬೆಂಗಳೂರು ಕೆಎಸ್‌ಆರ್‌ಟಿಸಿ ಓಲ್ವೋ ಬಸ್‌ ಸಂಚಾರ ಆರಂಭವಾಗಲಿದೆ.
  • ಮಂಗಳೂರಿನಿಂದ ಹೊರಟ ಓಲ್ವೋ ಬಸ್‌ ವಿಟ್ಲ ಮಾರ್ಗವಾಗಿ ಪುತ್ತೂರಿಗೆ ಬಂದು ಇಲ್ಲಿಂದ ಬೆಂಗಳೂರಿಗೆ ತೆರಳಲಿದೆ

 ಪುತ್ತೂರು (ನ.15):  ಪುತ್ತೂರು (Puttur) ಶಾಸಕ ಸಂಜೀವ ಮಠಂದೂರು (sanjeev matandur) ಪ್ರಯತ್ನದ ಫಲವಾಗಿ ಪುತ್ತೂರು- ಹಾಸನ- ಬೆಂಗಳೂರು (Hassan - Bengaluru) ಕೆಎಸ್‌ಆರ್‌ಟಿಸಿ (KSRTC) ಓಲ್ವೋ ಬಸ್‌ (Volvo Bus) ಸಂಚಾರ ಆರಂಭವಾಗಲಿದೆ.

2ನೇ ಘಟಕದಿಂದ ಈ ಬಸ್‌ನ ಓಡಾಟ ನಿರ್ವಹಣೆ ಮಾಡಲಾಗುತ್ತದೆ. ಮಂಗಳೂರಿನಿಂದ ಹೊರಟ ಓಲ್ವೋ ಬಸ್‌ ವಿಟ್ಲ (Vitla) ಮಾರ್ಗವಾಗಿ ಪುತ್ತೂರಿಗೆ ಬಂದು ಇಲ್ಲಿಂದ ಬೆಂಗಳೂರಿಗೆ ತೆರಳಲಿದೆ. ವಿಟ್ಲ ಮಾರ್ಗವಾಗಿ ಈ ಬಸ್‌ ಓಡಾಟ ನಡೆಸುವುದರಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ (Puttur Assembly Constituency) ಎಲ್ಲಾ ಭಾಗಗಳಿಗೂ ಅನುಕೂಲವಾದಂತಾಗುತ್ತದೆ ಎಂಬ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.

Latest Videos

ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿ ಅರುಣ್‌ ಕುಮಾರ್‌ ಅವರು ಮಂಗಳೂರು - ಬಿಸಿ ರೋಡು - ವಿಟ್ಲ- ಪುತ್ತೂರು - ಹಾಸನ (hassan) - ಬೆಂಗಳೂರು ಕೆಎಸ್‌ಆರ್‌ಟಿಸಿ ಓಲ್ವೋ ಬಸ್‌ ಓಡಾಟಕ್ಕೆ ಪ್ರಸ್ತಾವನೆಯನ್ನು ಸಿದ್ದ ಪಡಿಸಿ ಸಂಸ್ಥೆಯ ಬೆಂಗಳೂರು ಕೇಂದ್ರ ಕಚೇರಿಗೆ ಸಲ್ಲಿಸಿದ್ದರು. ಕೇಂದ್ರ ಕಚೇರಿಯು ಈ ಮಾರ್ಗ ಸೂಚಿಯನ್ನು ಆರಂಭಿಸಲು ಮಂಗಳೂರು ವಿಭಾಗಕ್ಕೆ ಮಂಜೂರಾತಿ ನೀಡಿದೆ. ಈ ವಾರ ಪುತ್ತೂರು - ಬೆಂಗಳೂರು ನಡುವಣ ಪ್ರತಿದಿನ ರಾತ್ರಿ ಕೆಎಸ್‌ಆರ್‌ಟಿಸಿ ಓಲ್ವೋ ಬಸ್‌ ಸಂಚಾರ ಆರಂಭವಾಗಲಿದೆ.

ಬೇರೆಯವರಿಗೆ ಬಸ್ಸಿನಲ್ಲಿ ಕಿರಿಕಿರಿ ಆಗುವಂತೆ ಫೋನ್ ಬಳಸುವಂತಿಲ್ಲ :  ಸರ್ಕಾರಿ ಬಸ್‌ನಲ್ಲಿ (Government Bus) ಪ್ರಯಾಣಿಸುವ ವೇಳೆ ಮೊಬೈಲ್ ಬಳಸಿ ಜೋರಾಗಿ ಮಾತನಾಡುವಂತಿಲ್ಲ. ಬಸ್ ಪ್ರಯಾಣದ ವೇಳೆ ಮೊಬೈಲ್‌ನಲ್ಲಿ (Mobile) ಜೋರಾಗಿ ಮಾತನಾಡಿ ಕಿರಿಕಿರಿ ಉಂಟು ಮಾಡುವುದಕ್ಕೆ ಬ್ರೇಕ್ ಬಿದ್ದಿದೆ.

ಹೌದು... ಸರ್ಕಾರಿ ಬಸ್ ಪ್ರಯಾಣದ (Bus Travelling) ವೇಳೆ ಮೊಬೈಲ್ ಫೋನ್ ಬಳಿಸಿ ಪ್ರಯಾಣಿಕರು ಮಾತನಾಡುವುದನ್ನು ನಿಷೇಧಿಸಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (Karnataka State Road Transport Corporation) ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ.

ಬೆಂಗ್ಳೂರಿಂದ 6 ನಗರಕ್ಕೆ ಎಲೆಕ್ಟ್ರಿಕ್‌ ಬಸ್‌ ಸಂಚಾರ

ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1989ರ ನಿಯಮ 94(1)V ಪ್ರಕಾರ ಇದು ಕಾನೂನು ಬಾಹಿರವಾಗಿರುವುದರಿಂದ ಬಸ್‌ಗಳಲ್ಲಿ ಜೋರಾಗಿ ಶಬ್ದ ಉಂಟು ಮಾಡಿ ಮೊಬೈಲ್ ಬಳಸುವುದಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದರಿಂದ ಶಬ್ದಮಾಲಿನ್ಯ ಉಂಟಾಗುವದರ ಜೊತೆ ಪ್ರಯಾಣಿಕರಿಗೂ ಕಿರಿಕಿರಿ ಉಂಟಾಗುತ್ತಿರುವ ಬಗ್ಗೆ ಹಲವು ದೂರಗಳ ಹಿನ್ನೆಲೆ, ಕೆಎಸ್‌ಆರ್ಟಿಸಿ ಈ ಬಗ್ಗೆ ಸುತ್ತೋಲೆ ಹೊರಡಿಸಿ ಆದೇಶಿಸಿದೆ.

ಪ್ರಯಾಣದ ವೇಳೆ ಹಾಡು, ಸಿನಿಮಾ ಮುಂತಾದವುಗಳನ್ನು ಜೋರಾಗಿ ಹಾಕುವಂತಿಲ್ಲ. ಒಂದು ವೇಳೆ ಹಾಕಿದರೆ ಮೊದಲು ಬಸ್ ನಿರ್ವಾಹಕ ಪ್ರಯಾಣಕನಲ್ಲಿ ಮನವಿ ಮಾಡಿಕೊಳ್ಳಬೇಕು. ಮನವಿ ಕಡೆಗಣಿಸಿದರೆ ಬಸ್ ಅರ್ಧಕ್ಕೆ ನಿಲ್ಲಿಸಿ ಪ್ರಯಾಣಿಕರನ್ನು ಅಲ್ಲೇ ಇಳಿಸಿ ಮುಂದುವರೆಯ ಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಏನಾದರು ಸಮಸ್ಯೆಗಳು ಎದುರಾದರೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಿಳಿಸಬೇಕು ಎಂದು ಆದೇಶಲ್ಲಿ ಉಲ್ಲೇಖಿಸಲಾಗಿದೆ.

ಬಸ್‌ನಲ್ಲಿ ಪ್ರಯಾಣಿಕರಿಗೆ ಮೊಬೈಲ್‌ ತಲೆನೋವು ತಪ್ಪಿಸಲು ಹಾಗೂ ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕಲು ಹೈಕೋರ್ಟ್‌ ಸೂಚನೆ ಮೇರೆಗೆ ಸಾರಿಗೆ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಇತ್ತೀಚಿನ ದಿನಗಳಲ್ಲಿ ಜನ ಮೊಬೈಲ್‌ಗೆ ಹೆಚ್ಚು ಅವಲಂಬಿತರಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಸುವ ಸಹ ಪ್ರಯಾಣಿಕರ ಕಡೆಗೆ ಗಮನ ಕೊಡದೆ ತಮ್ಮಿಷ್ಟದಂತೆ ಜೋರಾಗಿ ಹಾಡು, ಸಿನಿಮಾ, ವಾರ್ತೆ ಮೊದಲಾದ ಆಡಿಯೋ ಅಥವಾ ವಿಡಿಯೋಗಳನ್ನು ಜೋರಾಗಿ ಹಾಕುವುದು ಸರ್ವೇ ಸಾಮಾನ್ಯವಾಗಿದೆ.

ತುಮಕೂರಿನ ವಕೀಲನಿಂದ ಪಿಐಎಲ್‌
ಬಸ್‌ನಲ್ಲಿ ಮೊಬೈಲ್ ಕಿರಿಕಿರಿ ತಪ್ಪಿಸುವಂತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಿಸುವಂತೆ ತುಮಕೂರಿನ ವಕೀಲ ರಮೇಶ್‌ ನಾಯಕ್‌ ಎಲ್‌. ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ನಿರ್ದೇಶನ ನೀಡಿತ್ತು. ಇದರ ಅನ್ವಯ ಇಲಾಖೆಯು ಎಲ್ಲಾ ಸಾರಿಗೆ ನಿಗಮಗಳಿಗೆ ಕಟ್ಟುನಿಟ್ಟಿನ ಕ್ರಮ ಅನುಷ್ಠಾನಕ್ಕೆ ಖಡಕ್‌ ಸೂಚನೆ ನೀಡಿದೆ.

click me!