ಭದ್ರಾ ನದಿ ಹುಟ್ಟು ಕಳಸ ತಾಲೂಕಲ್ಲಿ ಹನಿ ನೀರಿಗೂ ಹಾಹಾಕಾರ: ಹಳ್ಳಿಗರು ಮಾಡಿಕೊಂಡ ಪೈಪ್‌ಲೈನ್‌ಗೆ ಏನಾಯ್ತು?

By Govindaraj SFirst Published Mar 3, 2024, 2:30 AM IST
Highlights

ದೀಪದ ಕೆಳಗೆ ಕತ್ತಲು ಎಂಬ ಗಾದೆ ಮಾತಿಗೆ ತಕ್ಕಂತೆ ಕಾಫಿನಾಡ ಕಳಸ ತಾಲೂಕಿನ ಜನ ಬದುಕ್ತಿದ್ದಾರೆ. ಅರ್ಧ ರಾಜ್ಯ ಸೇರಿದಂತೆ ದೇಶದ ಕೆಲ ಭಾಗಕ್ಕೂ ನೀರಿನ ಸೌಲಭ್ಯ ಕಲ್ಪಿಸೋ ಭದ್ರಾ ನದಿ ಹುಟ್ಟೋದೆ ಕಳಸದಲ್ಲಿ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.03): ದೀಪದ ಕೆಳಗೆ ಕತ್ತಲು ಎಂಬ ಗಾದೆ ಮಾತಿಗೆ ತಕ್ಕಂತೆ ಕಾಫಿನಾಡ ಕಳಸ ತಾಲೂಕಿನ ಜನ ಬದುಕ್ತಿದ್ದಾರೆ. ಅರ್ಧ ರಾಜ್ಯ ಸೇರಿದಂತೆ ದೇಶದ ಕೆಲ ಭಾಗಕ್ಕೂ ನೀರಿನ ಸೌಲಭ್ಯ ಕಲ್ಪಿಸೋ ಭದ್ರಾ ನದಿ ಹುಟ್ಟೋದೆ ಕಳಸದಲ್ಲಿ. ಆದ್ರೆ, ಅಲ್ಲಿನ ಕುಡಿಯೋ ನೀರಿಗೆ ಹೇಗೆ ಹೋರಾಡ್ತಿದ್ದಾರೆ, ಪರಿತಪಿಸುತ್ತಿದ್ದಾರೆ ಅನ್ನೋದು ಭದ್ರಾ ನೀರನ್ನ ಕುಡಿಯೋ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ. ಸರ್ಕಾರ ಕಟ್ಟಿಸಿದ ಟ್ಯಾಂಕ್ನಲ್ಲಿ ನೀರೇ ಇಲ್ಲ. ಹಳ್ಳಿಗರೇ ಮಾಡಿಕೊಂಡು ಪೈಪ್ ಲೈನ್ ವ್ಯವಸ್ಥೆಗೂ ಉಳಿಗಾಲವಿಲ್ಲ. ಇಲ್ಲಿನ ಬಡವರ ಪಾಲಿಗೆ ಸರ್ಕಾರ ಇದ್ದು ಇಲ್ಲದಂತೆ.

Latest Videos

ಕಳಸ ತಾಲೂಕಲ್ಲಿ ಹನಿ ನೀರಿಗೂ ಹಾಹಾಕಾರ: ಸಮುದ್ರದ ದಡದಲ್ಲಿ ಉಪ್ಪಿಗೆ ಬರ ಎಂಬಂತೆ ರಾಜ್ಯ-ಹೊರರಾಜ್ಯಕ್ಕೂ ನೀರಿನ ಸೌಲಭ್ಯ ಕಲ್ಪಿಸೋ ಭದ್ರಾ ನದಿ ಹುಟ್ಟುವ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಜನ ಹನಿ ನೀರಿಗು ಹಾಹಾಕಾರ ಅನುಭವಿಸುವಂತಾಗಿದೆ. ಅಧಿಕಾರಿಗಳಿಗೆ ಹೇಳಿದ್ರೆ ನೋ ಯೂಸ್. ಹಳ್ಳಿಗರೇ ಮಾಡ್ಕೊಂಡ ಸಂಪರ್ಕಕ್ಕೂ ಭವಿಷ್ಯವಿಲ್ಲದಂತಾಗಿ ಜನ ಹನಿ ನೀರಿಗೂ ಹೋರಾಡುವಂತಾಗಿದೆ. ಇದು ಕಳಸ ತಾಲೂಕಿನ ತನೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಳುಗೋಡು ಗ್ರಾಮದ ಜನರ ದುಸ್ಥಿತಿ. ಆಳುಗೋಡು ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚು ಕೂಲಿ ಕಾರ್ಮಿಕ ಕುಟುಂಬಗಳಿವೆ. 

ಗ್ಯಾರಂಟಿ ಫಲಾನುಭವಿಗಳ ಗಮನ ಬೇರೆಡೆ ಸೆಳೆಯಲು ಬಿಜೆಪಿ ಡ್ರಾಮಾ: ಸಿದ್ದರಾಮಯ್ಯ

ಕುಡಿಯೋಕೆ ನೀರಿಲ್ಲದ ಬಡ ಕಾರ್ಮಿಕರು ಕೂಲಿಯಿಂದ ಬಂದ ಬಳಿಕ ಹಗಲಿರುಳೆನ್ನದೆ ನೀರು ಹೊರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಳುಗೋಡು ಗ್ರಾಮದಲ್ಲಿ ಈ ಹಿಂದೆ ನಿರ್ಮಿಸಿದ್ದ ನೀರಿನ ಟ್ಯಾಂಕರ್ನಲ್ಲಿ ನೀರು ಬತ್ತಿ ಹೋಗಿದೆ. ಕುಡಿಯೋ ನೀರಿಗಾಗಿ ಹಳ್ಳಿಗರೇ ಮೂರು ಕಿ.ಮೀ. ದೂರದಿಂದ ಪೈಪ್ ಲೈನ್ ಮಾಡಿಕೊಂಡಿದ್ದಾರೆ. ಆದ್ರೆ, ಕಾಡುಪ್ರಾಣಿಗಳ ದಾಳಿಯಿಂದ ಪೈಪ್ಲೈನ್ ಕೂಡ ಹಾಳಾಗಿದ್ದು, ಹಳ್ಳದಲ್ಲೂ ನೀರು ಬತ್ತಿಹೋಗಿದೆ. ಹಾಗಾಗಿ, ಇಲ್ಲಿನ ಜನ ಕುಡಿಯೋ ನೀರಿಗಾಗಿ ಪರಿತಪ್ಪಿಸುವಂತಹಾ ಸ್ಥಿತಿ ನಿರ್ಮಾಣವಾಗಿದೆ. ತಮ್ಮ ಸಮಸ್ಯೆಯನ್ನ ಅಧಿಕಾರಿಗಳಿಗೆ ಹೇಳಿಕೊಂಡ್ರು ಯಾರೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. 

ಕಾಮಗಾರಿ ಮಾಡಿ ಅರ್ಧಕ್ಕೆ ನಿಲ್ಲಿಸಿರೋ ಅಧಿಕಾರಿಗಳು: ಆಳುಗೋಡು ಗ್ರಾಮಕ್ಕೆ ಕುಡಿಯೋ ನೀರಿಗಾಗಿ ಕಗ್ಗನಹಳ್ಳ ಸಮೀಪ ರಿಂಗ್ ಬಾವಿ ನಿರ್ಮಿಸಿದ್ದಾರೆ. ಆದ್ರೆ, ಕಾಮಗಾರಿಯನ್ನ ಅರ್ಧಕ್ಕೆ ನಿಲ್ಲಿಸಿದ್ದಾರೆ. ಕಾಮಗಾರಿ ಮುಗಿಸಿಕೊಡಿ ಎಂದು ಹಳ್ಳಿಗರು ಮೇಲಿಂದ ಮೇಲೆ ಬೇಡಿಕೊಂಡರು ಇವರ ನೋವನ್ನ ಕೇಳೋ ಕಿವಿಗಳೇ ಇಲ್ಲದಂತಾಗಿದೆ. ಕಳೆದ ಬಾರಿ ಚುನಾವಣೆ ಬಹಿಷ್ಕಾರ ಮಾಡಿದಾಗ ಅಧಿಕಾರಿಗಳ ದಂಡೇ ಬಂದಿತ್ತು. ಓಟ್ ಮಾಡಿ ನಿಮಗೆ ಬೇಕಾಗಿದ್ದೆಲ್ಲಾ ಮಾಡಿಕೊಡ್ತೀವಿ ಎಂದು ಹಳ್ಳಿಗರಿಗೆ ಮಾತಲ್ಲೇ ಮೊಸರನ್ನ ತಿನ್ನಿಸಿದವರು ಆಫ್ಟರ್ ಎಲೆಕ್ಷನ್ ಮತ್ತೆ ಆಕಡೆ ತಲೆ ಹಾಕಿಲ್ಲ. ಕಾಮಗಾರಿಯನ್ನೂ ಮುಗಿಸಿ ಕುಡಿಯೋ ನೀರು ಕೊಡ್ತಿಲ್ಲ ಎಂದು ಹಳ್ಳಿಗರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಬಿಜೆಪಿಯವರು ಭಾವನೆಯ ಮೇಲೆ ರಾಜಕೀಯ ಮಾಡುತ್ತಾರೆ: ಡಿ.ಕೆ.ಶಿವಕುಮಾರ್

ನಮ್ಮ ಕ್ಷೇತ್ರದಲ್ಲಿ ಕೆಲಸ ಆರಂಭ ಮಾಡುತ್ತಾರೆ. ಅರ್ಧ ಕೆಲಸ ಮಾಡಿ ಬಿಟ್ಟು ಹೋಗುತ್ತಾರೆ. ಇದು ನಮ್ಮ ಕ್ಷೇತ್ರ ಎಂದು ರಾಜಕಾರಣಿಗಳ ವಿರುದ್ಧವೂ ಅಸಮಾಧಾನ ಹೊರಹಾಕಿದ್ದು, ದಯಮಾಡಿ ನಮಗೆ ನೀರಿನ ಸೌಲಭ್ಯ ಕಲ್ಪಿಸಿಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಒಟ್ಟಾರೆ, ಭದ್ರಾ ನದಿಯ ತವರು ಊರಿನಲ್ಲೇ ಜನ ಕುಡಿಯೋ ನೀರಿಗಾಗಿ ಜನ ಹಾಹಾಕಾರ ಅನುಭವಿಸುತ್ತಿದ್ದಾರೆ. ಎಲ್ಲಾ ಇದೆ. ಆದ್ರೆ, ಅಧಿಕಾರಿಗಳು ಹಾಗೂ ಆಳುವ ವರ್ಗದಿಂದ ಏನು ಇಲ್ಲದಂತಾಗಿದೆ. ಹಳ್ಳಿಗರು ಇಡೀ ದಿನ ಕೂಲಿ ಮಾಡಿ ಸಂಜೆ ಮನೆಗೆ ಬಂದು ನೀರು ಹೊರುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಇನ್ನಾದ್ರು ಇತ್ತ ಗಮನ ಹರಿಸಿ ಹಳ್ಳಿಗರ ಕುಡಿಯುವ ನೀರಿನ ಸಮಸ್ಯೆಗೆ ಸರ್ಕಾರ ಹಾಗೂ ಅಧಿಕಾರಿಗಳು ಮುಕ್ತಿ ಹಾಡುತ್ತಾರಾ ಕಾದು ನೋಡ್ಬೇಕು.

click me!