ಕೆಆರ್‌ಎಸ್‌ನಲ್ಲಿನ ನೀರಿನ ಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಹಾಸನ ಜಿಲ್ಲೆಯ ಗೊರೂರಿನಲ್ಲಿ ಇರುವ ಹೇಮಾವತಿ ಜಲಾಶಯದಿಂದ ಕೆಆರ್‌ಎಸ್ ಜಲಾಶಯಕ್ಕೆ 1,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. 37 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 25 ಟಿಎಂಸಿ ನೀರಿದೆ. ಹೀಗಾಗಿ, ಮಳೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಹಾಸನ ನಗರಕ್ಕೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ ಎಂಬುದು ರೈತರ ಅಳಲು.
ಮಂಡ್ಯ(ಸೆ.01): ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಪರಿಣಾಮ ಜಲಾಶಯದ ನೀರಿನ ಮಟ್ಟ 100 ಅಡಿಗೆ ಕುಸಿದಿದೆ. ಕಳೆದ ಹದಿನೈದು ದಿನಗಳಲ್ಲಿ ಜಲಾಶಯದಿಂದ 13 ಟಿಎಂಸಿಯಷ್ಟು ನೀರು ಖಾಲಿಯಾಗಿದೆ. ಇದರ ನಡುವೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ನಿತ್ಯ 5 ಸಾವಿರ ಕ್ಯುಸೆಕ್ ನೀರು ಹರಿಸುತ್ತಿರುವುದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಆತಂಕ ಸೃಷ್ಟಿಸಿದೆ.
ಹೇಮೆಯಿಂದಲೂ ನೀರು:
ಈ ಮಧ್ಯೆ, ಕೆಆರ್‌ಎಸ್‌ನಲ್ಲಿನ ನೀರಿನ ಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಹಾಸನ ಜಿಲ್ಲೆಯ ಗೊರೂರಿನಲ್ಲಿ ಇರುವ ಹೇಮಾವತಿ ಜಲಾಶಯದಿಂದ ಕೆಆರ್‌ಎಸ್ ಜಲಾಶಯಕ್ಕೆ 1,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. 37 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 25 ಟಿಎಂಸಿ ನೀರಿದೆ. ಹೀಗಾಗಿ, ಮಳೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಹಾಸನ ನಗರಕ್ಕೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ ಎಂಬುದು ರೈತರ ಅಳಲು.
ಜಲಾಶಯದಲ್ಲಿ ಪ್ರಸ್ತುತ 100.66 ಅಡಿಯಷ್ಟು(ಗರಿಷ್ಠ 124.80 ಅಡಿ) ನೀರು ಮಾತ್ರ ಸಂಗ್ರಹವಿದೆ. ಅಣೆಕಟ್ಟೆಗೆ 1,628 ಕ್ಯುಸೆಕ್ ನೀರು ಹರಿದು ಬರುತ್ತಿದ್ದರೆ, ಅಣೆಕಟ್ಟೆಯಿಂದ ನದಿಗೆ 7,231 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲಾ ನಾಲೆಗಳಿಗೂ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ.
ತಮಿಳುನಾಡಿಗೆ ನೀರು ಬಿಟ್ಟಿರುವುದಕ್ಕೆ ಖಂಡನೆ; ಕನ್ನಡಪರ ಸಂಘಟನೆಗಳಿಂದ ಕೆಆರ್‌ಎಸ್ ಮುತ್ತಿಗೆ ಯತ್ನ
ಜಲಾಶಯದಲ್ಲಿ ಪ್ರಸ್ತುತ 23.333 ಟಿಎಂಸಿಯಷ್ಟು ನೀರಿದ್ದು, ತ.ನಾಡಿಗೆ ಮುಂದಿನ 10-15 ದಿನಗಳ ಕಾಲ ನೀರು ಬಿಡುಗಡೆ ಮುಂದುವರಿದರೆ, 7 ಟಿಎಂಸಿಗೂ ಹೆಚ್ಚು ನೀರು ಅಣೆಕಟ್ಟೆಯಿಂದ ಖಾಲಿಯಾಗಲಿದೆ.