ಮಲೆನಾಡಿನಲ್ಲಿ ಮಳೆಯ ಅಬ್ಬರ: ಚಕ್ರಾ, ಸಾವೆಹಕ್ಲು ಜಲಾಶಯ ಭರ್ತಿ

Published : Jul 30, 2019, 11:57 AM IST
ಮಲೆನಾಡಿನಲ್ಲಿ ಮಳೆಯ ಅಬ್ಬರ: ಚಕ್ರಾ, ಸಾವೆಹಕ್ಲು ಜಲಾಶಯ ಭರ್ತಿ

ಸಾರಾಂಶ

ಮಲೆನಾಡಿನಲ್ಲಿ ಮುಂಗಾರು ಚುರುಕುಗೊಂಡಿದ್ದು, ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಹೊಸನಗರ ತಾಲೂಕಿನ ನಗರ ಹೋಬಳಿಯ ಚಕ್ರಾ ಹಾಗೂ ಸಾವೇಹಕ್ಲು ಜಲಾಶಯಗಳು ಬಹುತೇಕ ಭರ್ತಿಯಾಗಿವೆ.

ಶಿವಮೊಗ್ಗ(ಜು.30): ಹೊಸನಗರ ತಾಲೂಕಿನ ನಗರ ಹೋಬಳಿಯ ಚಕ್ರಾ ಹಾಗೂ ಸಾವೇಹಕ್ಲು ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಈ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯಕ್ಕೆ ಸಾಕಷ್ಟುನೀರು ಹರಿದು ಬರುತ್ತಿದೆ.

ಮಲೆನಾಡಿನಲ್ಲಿ ಮುಂಗಾರು ಚುರುಕುಗೊಂಡಿದ್ದು, ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಹಾಗೆಯೇ ಕೃಷಿ ಚಟುವಟಿಗಳೂ ಭರದಿಂದ ಸಾಗಿದೆ.

ಕೃಷ್ಣಾ ನದಿ ಪಾತ್ರದಲ್ಲಿ ಮಳೆ, ತುಂಬಿದ ನಾರಾಯಣಪುರ ಡ್ಯಾಂ: ಹೈ ಅಲರ್ಟ್

ಸಾವೇಹಕ್ಲು ಜಲಾಶಯದ ಗರಿಷ್ಠ ಮಟ್ಟ582 ಮೀ. ಆಗಿದ್ದು, ಇದೀಗ ಜಲಾಶಯದ ಮಟ್ಟ580.40 ಮೀ.ಗೆ ತಲುಪಿದೆ. ಹೀಗಾಗಿ ಈ ಜಲಾಶಯದಿಂದ 1400 ಕ್ಯುಸೆಕ್‌ ನೀರನ್ನು ಲಿಂಗನಮಕ್ಕಿ ಜಲಾಶಯಕ್ಕೆ ಹರಿಸಲಾಗುತ್ತಿದೆ.

ಚಕ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ579.12 ಮೀ. ಆಗಿದ್ದು, ಇದೀಗ ಜಲಾಶಯದ ನೀರಿನ ಮಟ್ಟ575.16 ಮೀ.ಗೆ ತಲುಪಿದೆ. ಜಲಾಶಯದಿಂದ 500 ಕ್ಯೂಸೆಕ್‌ ನೀರನ್ನು ಲಿಂಗನಮಕ್ಕಿ ಜಲಾಶಯಕ್ಕೆ ಹರಿಸಲಾಗುತ್ತಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಕೋಲಾರ ಬೀದರ್ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್, ಅಲರ್ಟ್ ಆದ ಪೊಲೀಸರು, ತೀವ್ರ ತಪಾಸಣೆ
ಮೈಸೂರು, ಮಂಡ್ಯದಲ್ಲಿ ಬಾಲ್ಯ ವಿವಾಹಕ್ಕೆ ಗಣನೀಯ ಇಳಿಕೆ, ಸರ್ಕಾರದಿಂದ ಸಿಕ್ಕಿತು ನೆಮ್ಮದಿಯ ಸುದ್ದಿ