ಶಿವಮೊಗ್ಗ: ಕಾಡು ಮೊಲ ಕೊಂದು ಮಾರಾಟಕ್ಕೆ ಯತ್ನ, ನಾಲ್ವರ ಸೆರೆ

By Kannadaprabha NewsFirst Published Jul 30, 2019, 11:33 AM IST
Highlights

ಕಾಡು ಮೊಲಗಳನ್ನು ಬೇಟೆಯಾಡಿ ಮಾರಾಟ ಮಾಡಲು ಯತ್ನಿಸಿದ ನಾಲ್ವರನ್ನು ಅರಣ್ಯ ಇಲಾಖೆ ಬಂಧಿಸಿದ್ದಾರೆ. ಭದ್ರಾವತಿಯಲ್ಲಿ 4 ಮೊಲಗಳನ್ನು ಬೇಟೆಯಾಡಿ ಮಾರಾಟ ಮಾಡಲು ಪ್ರಯತ್ನ ನಡೆಯುತ್ತಿತ್ತು.

ಭದ್ರಾವತಿ(ಜು.30): ಕಾಡು ಮೊಲಗಳನ್ನು ಕೊಂದು ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಘಟನೆ ತಾಲೂಕಿನ ಬಂಡಿಗುಡ್ಡ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ್‌ ಅಲಿಯಾಸ್‌ ಭೀಮಾನಾಯ್ಕ, ಪ್ರವೀಣ್‌, ಪ್ರಕಾಶ ಮತ್ತು ಹಾಲಾನಾಯ್ಕ ಎಂಬುವರನ್ನು ಬಂಧಿಸಲಾಗಿದೆ. ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ 4 ಮೊಲಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಾಸನದ ಒಸ್ಸೂರು ಕಾಫಿ ಎಸ್ಟೇಟ್ ಅಕ್ರಮ ಜಿಂಕೆ ಬಂಧನಕ್ಕೆ ಮುಕ್ತಿ

ತಾಲೂಕಿನ ಅರಣ್ಯ ವ್ಯಾಪ್ತಿಯಲ್ಲಿರುವ ಬಂಡಿಗುಡ್ಡ ಗ್ರಾಮದಲ್ಲಿ ರಾತ್ರಿ ವೇಳೆ ಮೊಲಗಳ ಬೇಟೆಯಲ್ಲಿ ತೊಡಗಿದ್ದಾಗ ಚನ್ನಗಿರಿ ವಲಯ ಅರಣ್ಯಾಧಿಕಾರಿ ಆನಂದ ಬಿ. ನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಎಚ್‌. ರಾಮು, ಅರಣ್ಯ ರಕ್ಷಕ ಪಿ.ಡಿ. ಚೇತನ್‌ ಮತ್ತು ಬಂಡಿಗುಡ್ಡ ಅರಣ್ಯ ವ್ಯಾಪ್ತಿ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!