KRS ನೀರಿನ ಮಟ್ಟ 82.54 ಅಡಿಗೆ ಕುಸಿತ: ಕಳೆದ ವರ್ಷಕ್ಕಿಂತ 8 ಅಡಿ ಕಡಿಮೆ

By Kannadaprabha News  |  First Published Jun 13, 2021, 8:16 AM IST

* ಕಳೆದ ವರ್ಷಕ್ಕಿಂತ 8 ಅಡಿ ಕಡಿಮೆ ನೀರು ಸಂಗ್ರಹ
* ಮುಂಗಾರು ಮಾರುತಗಳು ರಾಜ್ಯ ಪ್ರವೇಶಿಸಿದ್ದು, ಉತ್ತಮ ಮಳೆ ನಿರೀಕ್ಷೆ
* ರೈತರು ಈಗಲೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ 


ಶ್ರೀರಂಗಪಟ್ಟಣ(ಜೂ.13): ಮುಂಗಾರು ಕೊರತೆಯಿಂದ ರೈತರ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 82.54 ಅಡಿಗೆ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 8 ಅಡಿಗಳಷ್ಟು ಕಡಿಮೆ ನೀರು ಸಂಗ್ರಹವಾಗಿದೆ.

ಮುಂಗಾರು ಮಾರುತಗಳು ರಾಜ್ಯ ಪ್ರವೇಶಿಸಿದ್ದು, ಉತ್ತಮ ಮಳೆ ನಿರೀಕ್ಷಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನಮಟ್ಟ 92.63 ಅಡಿ ದಾಖಲಾಗಿತ್ತು. ಆದಾಗ್ಯೂ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಜನರ ಕುಡಿಯುವ ನೀರಿನ ಉಪಯೋಗಕ್ಕೆ ಇನ್ನೂ ಒಂದು ತಿಂಗಳು ಯಾವುದೇ ಸಮಸ್ಯೆ ಆಗದು. ಜೊತೆಗೆ ಈ ಸಲದ ಮುಂಗಾರು ವೇಳೆ ಉತ್ತಮ ಮಳೆಯಾಗುವ ಸಂಭವವಿದೆ. ಆಗ ಜಲಾಶಯದ ನೀರಿನ ಮಟ್ಟ ಮತ್ತೆ ಏರಿಕೆಯಾಗಲಿದೆ. ಹೀಗಾಗಿ ರೈತರು ಈಗಲೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದರು.

Tap to resize

Latest Videos

ರಾಜ್ಯದಲ್ಲಿ 3.06 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣ

ಪ್ರಸ್ತುತ 759 ಕ್ಯುಸೆಕ್‌ ಒಳಹರಿವು ಇದ್ದು, 3765 ಹೊರಹರಿವು ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಜೊತೆಗೆ ಒಳಹರಿವು 1282 ಕ್ಯುಸೆಕ್‌ ಹಾಗೂ ಹೊರಹರಿವು 416 ಕ್ಯುಸೆಕ್‌ ಇತ್ತು.
 

click me!