30 ಮಕ್ಕಳ ಮೇಲೆ ಕೋವ್ಯಾಕ್ಸಿನ್‌ ಲಸಿಕೆ ಪ್ರಯೋಗ

By Kannadaprabha NewsFirst Published Jun 13, 2021, 7:49 AM IST
Highlights

* ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಪ್ರಯೋಗ
* ಪ್ರತಿದಿನ ಫೋನ್‌ ಮಾಡಿ ಮಕ್ಕಳ ಆರೋಗ್ಯ ವಿಚಾರಣೆ 
* ಲಸಿಕೆ ಪಡೆದ ಬಹುತೇಕ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ

ಮೈಸೂರು(ಜೂ.13): ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ 30 ಮಕ್ಕಳ ಮೇಲೆ ಕೋವ್ಯಾಕ್ಸಿನ್‌ ಲಸಿಕೆಯ ಮೊದಲ ಡೋಸ್‌ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಮೊದಲ ಹಂತದಲ್ಲಿ 12 ರಿಂದ 18 ವರ್ಷದೊಳಗಿನವರಿಗೆ ಲಸಿಕೆ ಹಾಕಲಾಗಿದ್ದು, ಮುಂದಿನ ವಾರ 6 ರಿಂದ 12 ಹಾಗೂ 2 ರಿಂದ 6 ವಯಸ್ಸಿನ ಮಕ್ಕಳ ಮೇಲೆ ಪ್ರಯೋಗ ನಡೆಯಲಿದೆ.

ಲಸಿಕೆ ಪಡೆದ ಬಹುತೇಕ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ. ಆದರೆ ಇಬ್ಬರಿಗೆ ಜ್ವರ ಬಂದಿದ್ದು, ಕೆಲವರಿಗೆ ಸೂಜಿ ಚುಚ್ಚಿದ ಜಾಗದಲ್ಲಿ ನೋವಿದೆ. ವಯಸ್ಕರಿಗೆ ಕೊಟ್ಟ ಪ್ರಮಾಣದಲ್ಲೇ ಮಕ್ಕಳಿಗೂ ಡೋಸ್‌ ನೀಡಲಾಗಿದೆ ಎಂದು ಮಕ್ಕಳ ತಜ್ಞ ವೈದ್ಯರಾದ ಡಾ.ಪ್ರದೀಪ್‌ ಹಾಗೂ ಡಾ. ಪ್ರಶಾಂತ್‌ ತಿಳಿಸಿದ್ದಾರೆ.

ಬೆಳಗಾವಿ ಬಳಿಕ ಮೈಸೂರಲ್ಲೂ ಮಕ್ಕಳ ಮೇಲೆ ಕೊರೋನಾ ಲಸಿಕೆ ಪ್ರಯೋಗ

ಒಟ್ಟು 53 ಮಕ್ಕಳು ಲಸಿಕೆ ಪಡೆಯಲು ಮುಂದೆ ಬಂದಿದ್ದರು. ಆದರೆ 30 ಮಂದಿ ಮಾತ್ರ ಕ್ಲಿನಿಕಲ್‌ ಕ್ಕೆ ಅರ್ಹರಾದರು. ರಕ್ತ ಪರೀಕ್ಷೆ, ಸ್ವಾಬ್‌ ಪರೀಕ್ಷೆ ಮೂಲಕ ಈ ಆಯ್ಕೆ ನಡೆಯಿತು. ಪ್ರತಿದಿನ ಫೋನ್‌ ಮಾಡಿ ಮಕ್ಕಳ ಆರೋಗ್ಯ ವಿಚಾರಿಸಲಾಗುತ್ತಿದೆ. ಒಂದು ತಿಂಗಳ ನಂತರ ರಕ್ತ ಮಾದರಿ ಸಂಗ್ರಹಿಸಿ, ಮಕ್ಕಳ ದೇಹದ ಮೇಲೆ ವ್ಯಾಕ್ಸಿನ್‌ ಪರಿಣಾಮದ ಬಗ್ಗೆ ಪರೀಕ್ಷೆ ನಡೆಸಿದ ನಂತರ ಎರಡನೇ ಡೋಸ್‌ ನೀಡಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
 

click me!