ಶಿರಸಿ: ಗೌರಿ ಏಕಾಂಗಿಯಾಗಿ ತೆಗೆದ ಬಾವಿಯಲ್ಲಿ ಹರಿದ ಜೀವಗಂಗೆ..!

By Kannadaprabha NewsFirst Published Mar 7, 2024, 11:33 AM IST
Highlights

ಕಳೆದ 36 ದಿನಗಳಿಂದ ಅಂಗನವಾಡಿ ಆವರಣದಲ್ಲಿ ಏಕಾಂಗಿಯಾಗಿ ಬಾವಿ ತೋಡುತ್ತಿದ್ದ ಇಲ್ಲಿನ ಗಣೇಶ ನಗರದ ಮಹಿಳೆ ಗೌರಿ ನಾಯ್ಕ ನೀರು ತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 50 ಅಡಿ ಬಾವಿ ತೋಡಿ, ಗಂಗೆಯನ್ನು ಹೊರತರುವಲ್ಲಿ ಸಫಲರಾಗಿದ್ದಾರೆ. 

ಶಿರಸಿ(ಮಾ.07):  ಕಳೆದ 36 ದಿನಗಳಿಂದ ಅಂಗನವಾಡಿ ಆವರಣದಲ್ಲಿ ಏಕಾಂಗಿಯಾಗಿ ಬಾವಿ ತೋಡುತ್ತಿದ್ದ ಇಲ್ಲಿನ ಗಣೇಶ ನಗರದ ಮಹಿಳೆ ಗೌರಿ ನಾಯ್ಕ ನೀರು ತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 50 ಅಡಿ ಬಾವಿ ತೋಡಿ, ಗಂಗೆಯನ್ನು ಹೊರತರುವಲ್ಲಿ ಸಫಲರಾಗಿದ್ದಾರೆ. 

ಗೌರಿಯ ಈ ಸಾಧನೆಗೆ ಸ್ಥಳೀಯ ಸಾರ್ವಜನಿಕರು ತೀವ್ರ ಸಂತೋಷ ವ್ಯಕ್ತಪಡಿಸಿ, ಗ್ರಾಮದ ಸುತ್ತಲೂ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಜ. 30ರಂದು ಶಿರಸಿ ಗಣೇಶ ನಗರದ ಅಂಗನವಾಡಿ ನಂಬರ್‌ 6ರಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಕೊರತೆ ಕಂಡು ಶಾಶ್ವತ ಪರಿಹಾರ ಕಲ್ಪಿಸಲು ಗೌರಿ ನಾಯ್ಕ (58) ಬಾವಿ ತೋಡಲು ಶ್ರೀಕಾರ ಹಾಕಿದ್ದರು. 30 ಅಡಿ ಆಳ ಬಾವಿ ತೆಗೆದ ಗೌರಿಯ ಸಾಹಸವನ್ನು ಮಾಧ್ಯಮಗಳು ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡ್ಡಗಾಲು ಹಾಕಿ, ಬಾವಿ ಮುಚ್ಚಿಸಲಾಗಿತ್ತು. ಅದನ್ನು ಖಂಡಿಸಿ ಸ್ಥಳೀಯರು ಪ್ರತಿಭಟಿಸಿ, ಸಹಾಯಕ ಆಯುಕ್ತರ ಕಚೇರಿಗೆ ಹಾಗೂ ತಹಸೀಲ್ದಾ‌ರ್ ಕಚೇರಿಗೆ ಮನವಿ ಸಲ್ಲಿಸಿದ್ದರು. 

ಶಿರಸಿ: ಅಂಗನವಾಡಿ ಮಕ್ಕಳಿಗೆ ಬಾವಿ ತೋಡುತ್ತಿರುವ ಮಹಿಳೆ

ಸಂಸದ ಅನಂತಕುಮಾರ ಹೆಗಡೆ ಬಾವಿ ತೆಗೆಯುತ್ತಿದ್ದ ಸ್ಥಳಕ್ಕೆ ತೆರಳಿ ಜಿಲ್ಲಾಧಿಕಾರಿ ಜತೆ ಮಾತನಾಡಿ, ತಕ್ಷಣವೇ ಗೌರಿಗೆ ಬಾವಿ ತೋಡಲು ಅವಕಾಶ ನೀಡಬೇಕು. ಅಡೆತಡೆ ಮಾಡಬಾರದು ಎಂದು ಸೂಚನೆ ನೀಡಿದ್ದರು.

click me!