ಶಾಲೆಗೆ ಕಳ್ಳತನ ಮಾಡಲು ಬಂದು ದಾಖಲೆ, ಪುಸ್ತಕಗಳ ಹಾಳೆಗಳನ್ನು ಬಳಸಿ ಒಲೆ ಹಚ್ಚಿಕೊಂಡು ಅಲ್ಲೆ ಅಡುಗೆ ಮಾಡಿಕೊಂಡಿರುವ ಕಳ್ಳರು, ಊಟ ಮಾಡಿದ್ದಾರೆ. ಅವರು ಊಟ ಮಾಡಿ ಉಳಿಸಿದ ಊಟದ ಪೇಪರ್ ಹಾಳೆಗಳು ಅಲ್ಲಿಯೆ ಬಿಸಾಕಿದ್ದಾರೆ.
ದಾವಣಗೆರೆ(ಏ.21): ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯ ಕದ ಮುರಿದು ಅಲ್ಲಿದ್ದ ಕ್ರೀಡಾ ಸಾಮಗ್ರಿಗಳನ್ನು ಕದ್ದೊಯ್ದಿರುವ ಘಟನೆ ನಡೆದಿದೆ.
ಲಾಕ್‌ಡೌನ್ ನಿಮಿತ್ತ ತರಗತಿಗಳು ನಡೆಯದ್ದರಿಂದ ಶಾಲೆ ಬಂದ್ ಮಾಡಲಾಗಿತ್ತು. ಭಾನುವಾರ ಬೆಳಿಗ್ಗೆ ಶಾಲಾ ಕೊಠಡಿಯ ಕದ ಮುರಿದು ಕಿಂಡಿ ಮಾಡಿರುವುದನ್ನು ನೋಡಿದ ಸ್ಥಳೀಯರು ಮುಖ್ಯಶಿಕ್ಷಕರಿಗೆ ತಿಳಿಸಿದ್ದಾರೆ.
undefined
ಪಾದರಾಯನಪುರ ಗಲಾಟೆ ನಡೆಯುತ್ತಿದ್ಧಾಗ ಶಾಸಕ ಜಮೀರ್ ಖಾನ್ ಎಲ್ಲಿದ್ರು?
ಶಾಲಾಭಿವೃದ್ಧಿ ಸಮಿತಿಯೊಂದಿಗೆ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕ್ರೀಡಾ ಕೊಠಡಿ ಸೇರಿದಂತೆ 3 ಕೊಠಡಿಗಳ ಕದ ಮುರಿದಿದ್ದು ಕಂಡುಬಂತು. ಒಂದು ಕೊಠಡಿಯ ಬೀರುವಿನ ಬೀಗ ಒಡೆದು ಅದರಲ್ಲಿನ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು.
ವಿಕೃತಿ:
ಶಾಲೆಯಲ್ಲಿನ ದಾಖಲೆ, ಪುಸ್ತಕಗಳ ಹಾಳೆಗಳನ್ನು ಬಳಸಿ ಒಲೆ ಹಚ್ಚಿಕೊಂಡು ಅಲ್ಲೆ ಅಡುಗೆ ಮಾಡಿಕೊಂಡಿರುವ ಕಳ್ಳರು, ಊಟ ಸಹ ಮಾಡಿದ್ದಾರೆ. ಅವರು ಊಟ ಮಾಡಿ ಉಳಿಸಿದ ಊಟದ ಪೇಪರ್ ಹಾಳೆಗಳು ಅಲ್ಲಿಯೆ ಬಿಸಾಕಿದ್ದಾರೆ. ಈ ಕುರಿತು ಗ್ರಾಮಾಂತರ ಠಾಣೆಗೆ ಮುಖ್ಯಶಿಕ್ಷಕ ಎ.ಕೆ.ಮಂಜಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬೀರಪ್ಪ ದೂರು ನೀಡಿದ್ದಾರೆ.