ಈ ಅದ್ಭುತ ಕಲಾವಿದನ ಹೆಸರು ಚಂದನ್ ದೇವಾಡಿಗ. ಕಾರವಾರದ ಬ್ರಾಹ್ಮಣಗಲ್ಲಿ ಬಳಿಯ ನಿವಾಸಿ. ಹೆಚ್ಚೇನು ತರಬೇತಿ ಪಡೆಯದ ಈತ ಚಿತ್ರಕಲೆ, ರಂಗೋಲಿ ಚಿತ್ತಾರ ಕಲಿತು ಸೆಲೆಬ್ರಿಟಿಗಳ ಗಮನವನ್ನೂ ಸೆಳೆದಿದ್ದಾನೆ. ಈತ ಮಾಡೋ ರಂಗೋಲಿ ಚಿತ್ರಗಳಂತೂ ಥೇಟ್ ಕ್ಯಾಮೆರಾದಲ್ಲಿ ಪ್ರಿಂಟ್ ತೆಗೆದಂತಿರುತ್ತವೆ.
ವರದಿ: ಭರತ್‌ರಾಜ್ ಕಲ್ಲಡ್ಕ , ಏಷ್ಯಾನೆಟ್ ಸುವರ್ಣನ್ಯೂಸ್
ಕಾರವಾರ (ಜ.17): ಸಾಮಾನ್ಯವಾಗಿ ಪೈಂಟ್ ಬಳಸಿ ಅದ್ಭುತ ಚಿತ್ರಗಳನ್ನು ಬಿಡಿಸುವ ಕಲಾವಿದರನ್ನು ನಾವು ನೋಡಿದ್ದೇವೆ. ಆದರೆ, ರಂಗೋಲಿ ಪುಡಿಗಳನ್ನು ಬಳಸಿ ಅದ್ಭುತ ಚಿತ್ರಗಳನ್ನು ಬರೆಯುವ ಕಲಾವಿದನನ್ನು ನೋಡಿದ್ದೀರಾ? ಈ ಅದ್ಭುತ ಕಲಾವಿದನ ಹೆಸರು ಚಂದನ್ ದೇವಾಡಿಗ. ಕಾರವಾರದ ಬ್ರಾಹ್ಮಣಗಲ್ಲಿ ಬಳಿಯ ನಿವಾಸಿ. ಹೆಚ್ಚೇನು ತರಬೇತಿ ಪಡೆಯದ ಈತ ಚಿತ್ರಕಲೆ, ರಂಗೋಲಿ ಚಿತ್ತಾರ ಕಲಿತು ಸೆಲೆಬ್ರಿಟಿಗಳ ಗಮನವನ್ನೂ ಸೆಳೆದಿದ್ದಾನೆ. ಈತ ಮಾಡೋ ರಂಗೋಲಿ ಚಿತ್ರಗಳಂತೂ ಥೇಟ್ ಕ್ಯಾಮೆರಾದಲ್ಲಿ ಪ್ರಿಂಟ್ ತೆಗೆದಂತಿರುತ್ತವೆ. ಸದ್ಯ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಬ್ಯಾಚುಲರ್ ಇನ್ ವಿಶ್ಯುಲವ್ ಆರ್ಟ್ಸ್ ಕಲಿಯುತ್ತಿರುವ ಚಂದನ್‌ಗೆ ಸಣ್ಣ ವಯಸ್ಸಲ್ಲೇ ಕಲೆಯ ಮೇಲೆ ಅಪಾರ ಆಸಕ್ತಿ. ಡ್ರಾಯಿಂಗ್, ಪೈಂಟಿಂಗ್ ಮಾಡುತ್ತಾ ಚಿಕ್ಕ ವಯಸ್ಸಲ್ಲೇ ಪ್ರತಿಭೆ ತೋರಿದ್ದ ಚಂದನ್, ಕ್ರಮೇಣ ರಂಗೋಲಿ ಪುಡಿಯಲ್ಲಿ ಚಿತ್ರ ಮಾಡುವುದನ್ನು ಕಲಿತು ಈಗ ನೂರಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾನೆ.
undefined
ರಾಮಮಂದಿರ ಜೊತೆ ರಾಮ ರಾಜ್ಯ ನಿರ್ಮಾಣಕ್ಕೆ ಸಂಕಲ್ಪ, ಮೋದಿಗೆ ಪೇಜಾವರ ಶ್ರೀ ಸೂಚನೆ
ರಂಗೋಲಿ ಆರ್ಟ್ ಜೊತೆಗೆ ಆಕ್ರಿಲಿಕ್, ಆಯ್ಲ್ ಪೈಂಟಿಂಗ್, ಸ್ಪೀಡ್ ಪೈಂಟಿಂಗ್, ಮ್ಯೂರಲ್ ವಾಲ್ ಪೈಂಟಿಂಗ್ ಕೂಡಾ ಮಾಡುವ ಚಂದನ್ ಕೈಯಲ್ಲರಳಿದ ಚಿತ್ರಗಳು ಕಣ್ಮನ ಸೆಳೆಯುತ್ತವೆ. ಈತ ಇದ್ದಿಲಿನ ಪುಡಿಯಲ್ಲಿ ಬಿಡಿಸಿದ ರಂಗೋಲಿ ವಿಡಿಯೋಗಳನ್ನು ಬಾಲಿವುಡ್ ನಟರಾದ ಸಿದ್ದಾರ್ಥ್ ಮಲ್ಹೋತ್ರಾ, ಸೋನು ಸೂದ್ ಮೆಚ್ಚಿ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿ, ಚಂದನ್‌ನ ಕಲೆಗೆ ಪ್ರೋತ್ಸಾಹ ನೀಡಿದ್ದಾರೆ.
CHITRADURGA: ಪೋಟೋ ಸ್ಟುಡಿಯೋ ಮಾಲೀಕ ಬಸವರಾಜ್ ಕೊಲೆಗೆ ಕಾರಣವೇ ಸ್ವಂತ ಅಕ್ಕ!
ಪ್ರತಿಯೊಂದೆಡೆಯೂ ಹೊಸತನ್ನು ಕಲಿಯುವ ಈ ಯುವಕ ಚಂದನ್, ಯೂಟ್ಯೂಬ್‌ಗಳಲ್ಲಿ ದೊಡ್ಡ ದೊಡ್ಡ ಕಲಾವಿದರ ವಿಡಿಯೋಗಳನ್ನು ನೋಡಿಯೇ ಕಲಿತು ಈ ಮಟ್ಟಕ್ಕೆ ತಲುಪಿದ್ದಾನೆ. ಇನ್ನು ಕಾರವಾರದ ಮಾರುತಿ ಗಲ್ಲಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ರಂಗೋಲಿ ಜಾತ್ರೆಯಲ್ಲಿ ಚಂದನ್ ರಂಗೋಲಿ ಚಿತ್ರಗಳು ರಾರಾಜಿಸುತ್ತವೆ. ರಾಜ್ಯದ ಮೂಲೆ ಮೂಲೆಗಳಿಂದ ಜನರು ಬಂದು ರಂಗೋಲಿ ಚಿತ್ರಗಳನ್ನು ನೋಡಿ ಆನಂದಿಸುತ್ತಾರಲ್ಲದೇ, ಫೋಟೊ, ಸೆಲ್ಪಿ ಕ್ಲಿಕ್ಕಿಸಿಕೊಂಡು ತೆರಳುತ್ತಾರೆ.